ಬೆಂಗಳೂರು: ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳಿಗೆ ಟಿಕೆಟ್ ಕೊಡುವ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕೈಮೇಲಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಮುಖಭಂಗವುಂಟಾಗಿದೆ. ಇದೇ ವಿಚಾರವನ್ನಿಟ್ಟಿಕೊಂಡು ಇದೀಗ ಬಿಜೆಪಿ ಕಾಂಗ್ರೆಸ್ ನಾಯಕರ ಕಾಲೆಳೆದಿದೆ.
‘ಸಿದ್ದರಾಮಯ್ಯ ಅವರು ಚದುರಂಗ ಆಟದಲ್ಲಿ ಬಾರಿ ನಿಸ್ಸಿಮರು. ಡಿಕೆಶಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿ, ರಾಜನಂತೆ ಬಿಂಬಿಸಿ ಈಗ ಅವರ ಬೆಂಬಲಿಗರನ್ನೇ ಎತ್ತಿಕಟ್ಟುತ್ತಿದ್ದಾರೆ. ಡಿಕೆಶಿ ಅಸಹಾಯಕರಾಗಿ ನಿಲ್ಲಬೇಕಷ್ಟೆ!’ ಎಂದು ಟೀಕಿಸಿದೆ.
ಇದನ್ನೂ ಓದಿ: ಮಗಳ ಶವದ ಜತೆ 4 ದಿನ ಕಳೆದ ತಾಯಿ..! ಮಂಡ್ಯದಲ್ಲೊಂದು ಬೆಚ್ಚಿ ಬೀಳಿಸುವ ಘಟನೆ
ಗೆದ್ದಲು ಹುಳ ಇಡಿ ಮರವನ್ನೇ ಒಳಗ್ಗಿನಿಂದ ಕೊರೆದು, ಒಮ್ಮೆಲೇ ಹೆಮ್ಮರವನ್ನು ಬುಡ ಸಮೇತ ಬೀಳಿಸುತ್ತದೆ.
ಈ ಕಲೆ ಸಿದ್ದರಾಮಯ್ಯ ಅವರಿಗೆ ಸಿದ್ಧಿಸಿದೆ. ಕನಕಪುರದ ಬಂಡೆಯನ್ನು ಒಳಗಿನಿಂದ ಕೊರೆಯಲಾಗುತ್ತಿದೆ.
ಶೀಘ್ರದಲ್ಲೇ ಬಂಡೆ ಟೊಳ್ಳಾಗಿ, ಕುಸಿಯಲಿದೆ, #ಅಸಹಾಯಕಡಿಕೆಶಿ ಮೂಕಪ್ರೇಕ್ಷಕ ಅಷ್ಟೇ!
— BJP Karnataka (@BJP4Karnataka) May 31, 2022
‘ಪರಿಷತ್ ಚುನಾವಣೆ, ರಾಜ್ಯಸಭಾ ಚುನಾವಣೆ, ಪಕ್ಷದ ಪದಾಧಿಕಾರಿಗಳ ಪಟ್ಟಿ ಇವರೆಲ್ಲರಲ್ಲೂ ಡಿಕೆಶಿ ಅವರದ್ದು ನಾಮಕಾವಸ್ಥೆಯ ಸಹಿ ಮಾತ್ರ, ಅಧಿಕಾರದ ಛಾಪು ಕಾಣುತ್ತಲೇ ಇಲ್ಲ! ಡಿಕೆಶಿ ಅವರೇ, ನೀವು ನಿಂತ ನೆಲ ಬಿರುಕು ಬಿಡುತ್ತಿದೆ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರನ್ನು ನೆನಪಿಸಿಕೊಳ್ಳಿ, ಕನಕಪುರ ಜೋಕೆ’ ಎಂದು ಟೀಕಿಸಿದೆ.
‘ಗೆದ್ದಲು ಹುಳ ಇಡಿ ಮರವನ್ನೇ ಒಳಗ್ಗಿನಿಂದ ಕೊರೆದು, ಒಮ್ಮೆಲೇ ಹೆಮ್ಮರವನ್ನು ಬುಡ ಸಮೇತ ಬೀಳಿಸುತ್ತದೆ. ಈ ಕಲೆ ಸಿದ್ದರಾಮಯ್ಯನವರಿಗೆ ಸಿದ್ಧಿಸಿದೆ. ಕನಕಪುರದ ಬಂಡೆಯನ್ನು ಒಳಗಿನಿಂದ ಕೊರೆಯಲಾಗುತ್ತಿದೆ. ಶೀಘ್ರದಲ್ಲೇ ಬಂಡೆ ಟೊಳ್ಳಾಗಿ, ಕುಸಿಯಲಿದೆ, #ಅಸಹಾಯಕಡಿಕೆಶಿ ಮೂಕಪ್ರೇಕ್ಷಕ ಅಷ್ಟೇ! 2ನೇ ಅಭ್ಯರ್ಥಿ ಹಾಕದೆ, ತಮ್ಮ ಹೆಚ್ಚುವರಿ ಮತಗಳ ಮೂಲಕ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಡಿಕೆಶಿ ರಣತಂತ್ರ ರೂಪಿಸಿದ್ದರು. ಇದನ್ನರಿತ ಸಿದ್ದರಾಮಯ್ಯ, ಡಿಕೆಶಿ ಆಪ್ತರನ್ನೇ 2ನೇ ಅಭ್ಯರ್ಥಿಯಾಗಿಸಿದರು. #ಅಸಹಾಯಕಡಿಕೆಶಿ ಈಗ, ಜೆಡಿಎಸ್ಗೆ ನೀಡಿದ ಮಾತು ಉಳಿಸಿಕೊಳ್ಳುತ್ತಾರೋ ಅಥವಾ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿಕೊಳ್ಳುತ್ತಾರೋ?’ ಎಂದು ಪ್ರಶ್ನಿಸಿದೆ.
ಎರಡನೇ ಅಭ್ಯರ್ಥಿ ಹಾಕದೆ, ತಮ್ಮ ಹೆಚ್ಚುವರಿ ಮತಗಳ ಮೂಲಕ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಡಿಕೆಶಿ ರಣತಂತ್ರ ರೂಪಿಸಿದ್ದರು.
ಇದನ್ನರಿತ ಸಿದ್ದರಾಮಯ್ಯ, ಡಿಕೆಶಿ ಆಪ್ತರನ್ನೇ ಎರಡನೇ ಅಭ್ಯರ್ಥಿಯಾಗಿಸಿದರು.#ಅಸಹಾಯಕಡಿಕೆಶಿ ಈಗ, ಜೆಡಿಎಸ್ಗೆ ನೀಡಿದ ಮಾತು ಉಳಿಸಿಕೊಳ್ಳುತ್ತಾರೋ ಅಥವಾ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿಕೊಳ್ಳುತ್ತಾರೋ?
— BJP Karnataka (@BJP4Karnataka) May 31, 2022
ಡಿಕೆಶಿಗೆ ಸಿದ್ದು ಟಕ್ಕರ್!
ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡಿತ್ತಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. 2ನೇ ಅಭ್ಯರ್ಥಿಯನ್ನು ಘೋಷಿಸಲು ಸಿದ್ದರಾಮಯ್ಯನವರು ಚಿಂತನೆ ನಡೆಸಿದ್ದಾರೆ. ಈ ಮೊದಲು ಒಂದೇ ಅಭ್ಯರ್ಥಿ ಸಾಕು ಅಂತಾ ‘ಕೈ’ ಪಕ್ಷ ಎಂದುಕೊಂಡಿತ್ತು. ಮಾಜಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿಗೆ ಬೆಂಬಲ ನೀಡಲು ಡಿಕೆಶಿ ನಿರ್ಧರಿಸಿದ್ದರು. ಆದರೆ, ಇದಕ್ಕೆ ಸಿದ್ದರಾಮಯ್ಯ ನಿರಾಕರಿಸಿದ್ದು, ಜೆಡಿಎಸ್ಗೆ ಬೆಂಬಲ ಕೊಟ್ಟರೆ ತಪ್ಪು ಸಂದೇಶ ಹೊಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಂಗೈಯಲ್ಲಿ ಅರಮನೆ ತೋರಿಸಿದ ಕೇಜ್ರಿವಾಲ್ ಪಕ್ಷದಿಂದ ಜನತೆಗೆ ನರಕ ದರ್ಶನ- ಬಿಜೆಪಿ
ಡಿಕೆಶಿಗೆ ಟಕ್ಕರ್ ನೀಡಲು 2ನೇ ಅಭ್ಯರ್ಥಿ ಕಣಕ್ಕೆ ಇಳಿಸಲು ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ. ಡಿಕೆಶಿ ಆಪ್ತರನ್ನೇ ಅಭ್ಯರ್ಥಿಯನ್ನಾಗಿ ಸಿದ್ದರಾಮಯ್ಯ ಘೋಷಣೆ ಮಾಡಲಿದ್ದಾರೆ. ಈ ಹಿನ್ನೆಲ ಮನ್ಸೂರ್ ಖಾನ್ಗೆ ಟಿಕೆಟ್ ನೀಡಲು ಸಿದ್ದು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.