ಸಿದ್ದರಾಮಯ್ಯನವರೇ ಕಾಂಗ್ರೆಸ್ ಪಕ್ಷದಲ್ಲಿ ಎಷ್ಟು ಬಣವಿದೆ?: ಬಿಜೆಪಿ

#ಕಾಂಗ್ರೆಸ್‌ಕಲಹ ಹ್ಯಾಶ್ ಟ್ಯಾಗ್ ಬಳಸಿ ಸೋಮವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ‘ಕೈ’ ನಾಯಕರ ಬಣ ರಾಜಕೀಯವನ್ನು ಟೀಕಿಸಿದೆ.

Written by - Zee Kannada News Desk | Last Updated : Mar 21, 2022, 01:01 PM IST
  • ಸಿದ್ದರಾಮಯ್ಯನವರೇ ರಾಜ್ಯ ಕಾಂಗ್ರೆಸ್‌ನಲ್ಲಿರುವ ಬಣಗಳ ಸಂಖ್ಯೆ ಎಷ್ಟು?
  • ಪರಿಷತ್ ವಿಪಕ್ಷ ನಾಯಕರೊಂದಿಗೆ ನಿಮ್ಮ ಸೌಹಾರ್ದ ಸಂಬಂಧ ಹೇಗಿದೆ ಸ್ವಲ್ಪ ವಿವರಿಸಬಹುದೇ?
  • ರಾಜ್ಯದಲ್ಲಿರುವ ನಿಮ್ಮ ಬಣಗಳಿಂದ ಕಾಂಗ್ರೆಸ್‌ ಪಕ್ಷ ಬುಸುಗುಡುತ್ತಿರುವುದು ನಿಮಗೆ ತಿಳಿಯದ ವಿಚಾರವೇ?
ಸಿದ್ದರಾಮಯ್ಯನವರೇ ಕಾಂಗ್ರೆಸ್ ಪಕ್ಷದಲ್ಲಿ ಎಷ್ಟು ಬಣವಿದೆ?: ಬಿಜೆಪಿ title=
ಕಾಂಗ್ರೆಸ್ ಬಣ ರಾಜಕೀಯ ಟೀಕಿಸಿದ ಬಿಜೆಪಿ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ (Congress) ಪಕ್ಷ ಅಧಿಕಾರಕ್ಕೆ ಬಂದರೆ ಮುಂದಿನ ಮುಖ್ಯಮಂತ್ರಿ ನಾನೇ ಎಂಬ ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ (Shamanur Shivashankarappa) ಹೇಳಿಕೆ ವಿಚಾರವಾಗಿ ಬಿಜೆಪಿ ವ್ಯಂಗ್ಯವಾಡಿದೆ.

 #ಕಾಂಗ್ರೆಸ್‌ಕಲಹ ಹ್ಯಾಶ್ ಟ್ಯಾಗ್ ಬಳಸಿ ಸೋಮವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ‘ಕೈ’ ನಾಯಕರ ಬಣ ರಾಜಕೀಯವನ್ನು ಟೀಕಿಸಿದೆ. ಕಾಂಗ್ರೆಸ್ ಪಕ್ಷದಲ್ಲಿ ಇರುವುದು ಕೇವಲ ಸೋನಿಯಾ ಗಾಂಧಿ(Sonia Gandhi)ಬಣ ಆದರೆ, ಬಿಜೆಪಿಯಲ್ಲಿ ಹತ್ತಾರು ಬಣಗಳಿವೆ ಎಂದು ಹೇಳಿದ್ದ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಇದೇ ವೇಳೆ ಟೀಕಾಪ್ರಹಾರ ನಡೆಸಿದೆ.

ಇದನ್ನೂ ಓದಿ: 'ಸಿದ್ದರಾಮಯ್ಯ ಒಳ್ಳೆಯ ಸಿಎಂ ಆದ್ರೆ, ಹುಚ್ಚುಚ್ಚಾಗಿ ಮಾತಾಡೋದು ಬಿಡಬೇಕು'

‘ಸಿದ್ದರಾಮಯ್ಯ(Siddaramaiah)ನವರೇ ಕಾಂಗ್ರೆಸ್ ಪಕ್ಷದಲ್ಲಿ ಎಷ್ಟು ಬಣವಿದೆ? ಸೋನಿಯಾ ಗಾಂಧಿ ಬಣದ ವಿಚಾರ ಬಿಡಿ, ಅದು G23 ಮೂಲಕ ಜಗಜ್ಜಾಹೀರಾಗಿದೆ. ರಾಜ್ಯ ಕಾಂಗ್ರೆಸ್‌ನಲ್ಲಿರುವ ಬಣಗಳ ಸಂಖ್ಯೆ ಎಷ್ಟು? ಪರಿಷತ್ ವಿಪಕ್ಷ ನಾಯಕರೊಂದಿಗೆ ನಿಮ್ಮ ಸೌಹಾರ್ದ ಸಂಬಂಧ ಹೇಗಿದೆ ಎಂದು ಸ್ವಲ್ಪ ವಿವರಿಸಬಹುದೇ?’ ಅಂತಾ ಪ್ರಶ್ನಿಸಿದೆ.

‘ಸಿದ್ದರಾಮಯ್ಯನವರೇ ರಾಜ್ಯದಲ್ಲಿರುವ ನಿಮ್ಮ ಬಣ(Political faction)ಗಳಿಂದ ಕಾಂಗ್ರೆಸ್‌ ಪಕ್ಷ ಬುಸುಗುಡುತ್ತಿರುವುದು ನಿಮಗೆ ತಿಳಿಯದ ವಿಚಾರವೇ? ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಣ, ಮಲ್ಲಿಕಾರ್ಜುನ್ ಖರ್ಗೆ ಬಣ, ಬಿ.ಕೆ.ಹರಿಪ್ರಸಾದ್‌ ಬಣ, ಡಾ.ಜಿ.ಪರಮೇಶ್ವರ್‌ ಬಣ. ಹೀಗೆ ಮೇಲ್ನೋಟಕ್ಕೆ ಸಿದ್ದರಾಮಯ್ಯ ಮತ್ತು ಡಿಕೆಶಿ ಬಣ ಕಾದಾಡುತ್ತಿದ್ದರೂ, ಇದರ ಲಾಭ ಪಡೆಯಲು ಹಲವಾರು ಬಣಗಳು ಹೊಂಚು ಹಾಕುತ್ತಿವೆ’ ಅಂತಾ ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: Pavagada Bus Accident: ಗಾಯಾಳುಗಳ ಆರೋಗ್ಯ ವಿಚಾರಿಸಿದ ಎಚ್​ಡಿಕೆ

‘ಸಿದ್ದರಾಮಯ್ಯ ಮತ್ತು ಡಿಕೆಶಿ(DK Shivakumar)ಮಾತ್ರ ಮುಖ್ಯಮಂತ್ರಿಯಾಗಬೇಕೇ, ನನ್ನ ಬಳಿಯೂ ದುಡ್ಡಿದೆ ನಾನು ಸಿಎಂ ಆಗುತ್ತೇನೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಶ್ಯಾಮನೂರು ಶಿವಶಂಕರಪ್ಪ ಅವರು ಹೇಳಿದ್ದಾರೆ. ಸಿದ್ದರಾಮಯ್ಯನವರೇ ಇವರದು ಎಷ್ಟನೇ ಬಣ?’ ಅಂತಾ ಬಿಜೆಪಿ ವ್ಯಂಗ್ಯವಾಡಿ ಪ್ರಶ್ನಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News