ಬೆಂಗಳೂರು: ‘ಕಾಂಗ್ರೆಸ್ ಅಧಿಕಾರವಧಿಯಲ್ಲಿ ನಡೆದ ಭ್ರಷ್ಟಾಚಾರಗಳು ಒಂದೆರಡಲ್ಲ. ಹಾಸಿಗೆ ದಿಂಬಿನಲ್ಲಿ ಲಂಚ, ಬಚ್ಚಲಮನೆಯ ಚೊಂಬಿನಲ್ಲೂ ಲಂಚ’ವೆಂದು ಬಿಜೆಪಿ ಟೀಕಿಸಿದೆ. #ಅಲಿಬಾಬಾಮತ್ತುಕಾಂಗ್ರೆಸ್‌ಕಳ್ಳರು ಹ್ಯಾಶ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, 40% ಕಮಿಷನ್ ಸರ್ಕಾರವೆಂದು ಆರೋಪಿಸುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದೆ.
‘ಇಷ್ಟೆಲ್ಲ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿರುವಾಗ ಮುಖ್ಯಮಂತ್ರಿಯಾಗಿದ್ದಿದ್ದು ಭ್ರಷ್ಟ ಸಿದ್ದರಾಮಯ್ಯ. ಭ್ರಷ್ಟ ಸಿದ್ದರಾಮಯ್ಯ ಅವರಿಗೆ ಕಲೆಕ್ಷನ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದದ್ದು ಆಂಜನೇಯ’ ಎಂದು ಆರೋಪಿಸಿದೆ.
ಕಾಂಗ್ರೆಸ್ ಅಧಿಕಾರವಧಿಯಲ್ಲಿ ನಡೆದ ಭ್ರಷ್ಟಾಚಾರಗಳು ಒಂದೆರಡಲ್ಲ. ಹಾಸಿಗೆ ದಿಂಬಿನಲ್ಲಿ ಲಂಚ, ಬಚ್ಚಲಮನೆಯ ಚೊಂಬಿನಲ್ಲೂ ಲಂಚ.
ಇಷ್ಟೆಲ್ಲ ನಡೆಯುತ್ತಿರುವಾಗ ಮುಖ್ಯಮಂತ್ರಿಯಾಗಿದ್ದಿದ್ದು ಭ್ರಷ್ಟ ಸಿದ್ದರಾಮಯ್ಯ. ಭ್ರಷ್ಟ ಸಿದ್ದರಾಮಯ್ಯ ಅವರಿಗೆ ಕಲೆಕ್ಷನ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದದ್ದು ಆಂಜನೇಯ.#ಅಲಿಬಾಬಾಮತ್ತುಕಾಂಗ್ರೆಸ್‌ಕಳ್ಳರು pic.twitter.com/20KePr3Qg2
— BJP Karnataka (@BJP4Karnataka) July 11, 2022
ಇದನ್ನೂ ಓದಿ: PSI Exam Scam : ಪಿಎಸ್ಐ ನೇಮಕಾತಿ ಅಕ್ರಮ : ಅಮೃತ್ ಪೌಲ್ ಡೈರಿಯಿಂದ ಸಿಕ್ತು ಮೇಜರ್ ಟ್ವಿಸ್ಟ್
‘ಗಂಗಾ ಕಲ್ಯಾಣ ಯೋಜನೆಯಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ನಡೆದ ಅವ್ಯವಹಾರದ ಒಡಲಾಳ ಅಳೆಯಲು ಸಾಧ್ಯವಿತ್ತೇ? ಪರಿಶಿಷ್ಟ ಜಾತಿ ಹಾಗೂ ಪಂಗಡ ವಿಶೇಷ ಉಪಯೋಜನೆಯಲ್ಲೂ ಸಿದ್ದರಾಮಯ್ಯ ಸರ್ಕಾರ 40% ಕಮಿಷನ್ ಕಬಳಿಸಿದ್ದು ಸುಳ್ಳೇ?’ ಎಂದು ಪ್ರಶ್ನಿಸಿದೆ.
‘ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರ ಪತ್ನಿಯರೂ ಪರ್ಸಂಟೇಜ್ ವ್ಯವಹಾರ ನಡೆಸುತ್ತಿದ್ದರು. ಅಂದಿನ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರ ಸರ್ಕಾರಿ ನಿವಾಸದಲ್ಲೇ ಸಚಿವರ ಪತ್ನಿ ಗುತ್ತಿಗೆ ನೀಡಲು 7 ಲಕ್ಷ ರೂ. ಲಂಚದ ವ್ಯವಹಾರ ಕುದುರಿಸಿದ್ದರು. ಇದರಲ್ಲಿ ಎಷ್ಟು ಪಾಲು ಕೆಪಿಸಿಸಿ ಕಚೇರಿ ತಲುಪಿದೆ?’ ಎಂದು ಬಿಜೆಪಿ ಪ್ರಶ್ನಿಸಿದೆ.
ಇದನ್ನೂ ಓದಿ: Honeytrap: ಹನಿಟ್ರ್ಯಾಪ್ ಮಾಡಿ ನಂತರ ಸಿಬಿಐ ಹೆಸರಲ್ಲಿ ಲಕ್ಷ ಲಕ್ಷ ವಂಚನೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ