ಬೆಂಗಳೂರು: ಉಂಡಮನೆಗೆ ದ್ರೋಹ ಬಗೆಯುವುದಕ್ಕೆ ಸೂಕ್ತ ಉದಾಹರಣೆ ಎಂದರೆ ಅದು ಸಿದ್ದರಾಮಯ್ಯ ಎಂದು ಬಿಜೆಪಿ ಟೀಕಿಸಿದೆ. ಮುಂಬರುವ ಚುನಾವಣೆಯಲ್ಲಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರನ್ನು ಸಿದ್ದರಾಮಯ್ಯ ಸೈಡ್ಲೈನ್ ಮಾಡುತ್ತಿದ್ದಾರೆ. ಈ ಮೂಲಕ ನಂಬಿದವರಿಗೆ ಮೋಸ ಮಾಡುತ್ತಿದ್ದಾರೆಂದು ಬಿಜೆಪಿ ಆರೋಪಿಸಿದೆ.
‘ರಾಜಕಾರಣದಲ್ಲಿ ನಂಬಿಕೆದ್ರೋಹಿಗಳು ಹಾಗೂ ಬೆನ್ನಿಗೆ ಚೂರಿ ಹಾಕುವ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಕೆಲವು ಸೃಷ್ಟಿಗಳಿವೆ. ಮಹಾಭಾರತದ ಶಕುನಿ, ಬ್ರಿಟಿಷ್ ಕಾಲದ ಮೀರ್ ಸಾದಿಕ್, ಚನ್ನಮ್ಮನಿಗೆ ದ್ರೋಹ ಬಗೆದ ಮಲ್ಲಪ್ಪ ಇತ್ಯಾದಿ. ಇವರೆಲ್ಲರಿಗೂ ಸರಿಸಮನಾಗಿ ನಿಲ್ಲಬಲ್ಲ ವ್ಯಕ್ತಿ ಎಂದರೆ ಅದು ಸಿದ್ದರಾಮಯ್ಯ !’ ಎಂದು ಟೀಕಿಸಿದೆ.
2013 ರ ಚುನಾವಣೆಯಲ್ಲಿ ಮುಖ್ಯಮಂತ್ರಿ ರೇಸ್ಗೆ ಅಡ್ಡಿಯಾಗುತ್ತಾರೆಂಬ ಕಾರಣಕ್ಕೆ ಅಂದಿನ ಕೆಪಿಸಿಸಿ ಅಧ್ಯಕ್ಷ @DrParameshwara ಅವರನ್ನು ಸಿದ್ದರಾಮಯ್ಯ ಅವರು ಕುತಂತ್ರದಿಂದ ಸೋಲಿಸಿದರು.
2023ಕ್ಕೂ ನಿಮ್ಮದು ಇದೇ ತಂತ್ರವೇ ?
ಇದು #ಮೀರ್ಸಾದಿಕ್ ತನವಲ್ಲದೆ ಮತ್ತೇನು @siddaramaiah?
— BJP Karnataka (@BJP4Karnataka) May 18, 2022
ಇದನ್ನೂ ಓದಿ: ಜೆಡಿಎಸ್ ಮಿಶನ್ 123 ಅಲ್ಲ, ಅದು ಮಿಶನ್ 1+2+3!: ಬಿಜೆಪಿ ವ್ಯಂಗ್ಯ
‘2013ರ ಚುನಾವಣೆಯಲ್ಲಿ ಮುಖ್ಯಮಂತ್ರಿ ರೇಸ್ಗೆ ಅಡ್ಡಿಯಾಗುತ್ತಾರೆಂಬ ಕಾರಣಕ್ಕೆ ಅಂದಿನ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಸಿದ್ದರಾಮಯ್ಯ ಕುತಂತ್ರದಿಂದ ಸೋಲಿಸಿದರು. 2023ಕ್ಕೂ ನಿಮ್ಮದು ಇದೇ ತಂತ್ರವೇ ? ಇದು #ಮೀರ್ಸಾದಿಕ್ ತನವಲ್ಲದೆ ಮತ್ತೇನು ಸಿದ್ದರಾಮಯ್ಯ?’ ಎಂದು ಪ್ರಶ್ನಿಸಿದೆ.
ತನ್ನ ರಾಜಕೀಯ ಉತ್ಕರ್ಷಕ್ಕೆ ಕಾರಣರಾದ ರಾಮಕೃಷ್ಣ ಹೆಗಡೆಯವರನ್ನು ವಂಚಿಸಿದ ಸಿದ್ದರಾಮಯ್ಯ ದೇವೇಗೌಡರ ಬಣ ಸೇರಿದರು. ಆ ಬಳಿಕ ಗೌಡರಿಗೆ ದ್ರೋಹ ಬಗೆದು ಕಾಂಗ್ರೆಸ್ ಸೇರಿದರು.
ಅಲ್ಲಿ @siddaramaiah ಮೋಸದ ಜಾಲಕ್ಕೆ ಮೊದಲು ಬಲಿಯಾದವರು ಮಲ್ಲಿಕಾರ್ಜುನ ಖರ್ಗೆ.
ಉಂಡಮನೆಗೆ ದ್ರೋಹ ಬಗೆಯುವುದಕ್ಕೆ ಸೂಕ್ತ ಉದಾಹರಣೆ ಎಂದರೆ ಅದು ಸಿದ್ದರಾಮಯ್ಯ.
— BJP Karnataka (@BJP4Karnataka) May 18, 2022
‘ತನ್ನ ರಾಜಕೀಯ ಉತ್ಕರ್ಷಕ್ಕೆ ಕಾರಣರಾದ ರಾಮಕೃಷ್ಣ ಹೆಗಡೆಯವರನ್ನು ವಂಚಿಸಿದ ಸಿದ್ದರಾಮಯ್ಯ ದೇವೇಗೌಡರ ಬಣ ಸೇರಿದರು. ಆ ಬಳಿಕ ಗೌಡರಿಗೆ ದ್ರೋಹ ಬಗೆದು ಕಾಂಗ್ರೆಸ್ ಸೇರಿದರು. ಅಲ್ಲಿ ಸಿದ್ದರಾಮಯ್ಯ ಮೋಸದ ಜಾಲಕ್ಕೆ ಮೊದಲು ಬಲಿಯಾದವರು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ. ಉಂಡಮನೆಗೆ ದ್ರೋಹ ಬಗೆಯುವುದಕ್ಕೆ ಸೂಕ್ತ ಉದಾಹರಣೆ ಎಂದರೆ ಅದು ಸಿದ್ದರಾಮಯ್ಯ’ ಎಂದು ಬಿಜೆಪಿ ಕಿಡಿಕಾರಿದೆ.
ಇದನ್ನೂ ಓದಿ: PSI Recruitment Scam: ಫಸ್ಟ್ ನೈಟ್ಗೂ ಬಿಡದ ಸಿಐಡಿ ಪೋಲೀಸರು..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.