Mallikarjun Kharge: ಮಲ್ಲಿಕಾರ್ಜುನ್ ಖರ್ಗೆಗೆ ದಾಸ್ಯದ ವೃದ್ಧ ನಾಯಕ ಎಂದ ಬಿಜೆಪಿ

ಬಿಜೆಪಿಯನ್ನು ಬೀಜಿಂಗ್ ಜನತಾ ಪಕ್ಷ ಎಂದು ಹಂಗಿಸುವ ನಿಮಗೆ ಚೀನಾ ನಿಯೋಗದ ಜೊತೆಗೆ ನಿಮ್ಮ ನಾಯಕ ರಾಹುಲ್ ಗಾಂಧಿ ಮಾಡಿಕೊಂಡ ರಾಷ್ಟ್ರ ವಿರೋಧಿ ಒಪ್ಪಂದ ಮರೆತು ಹೋಯಿತೇ? ಅಂತಾ ಪ್ರಶ್ನಿಸಿದೆ.   

Written by - Zee Kannada News Desk | Last Updated : Feb 6, 2022, 02:42 PM IST
  • ಮೇಕ್ ಇನ್ ಇಂಡಿಯಾ ಈಗ ‘ಬೈ ಫ್ರಾಮ್ ಚೀನಾ’ ಎನ್ನುವಂತೆ ಬದಲಾಗಿದೆ ಎಂದು ಟೀಕಿಸಿದ್ದ ರಾಹುಲ್ ಗಾಂಧಿ
  • ಭಾರತೀಯ ಜನತಾ ಪಕ್ಷದ ಬದಲಿಗೆ ‘ಬೀಜಿಂಗ್ ಜನತಾ ಪಾರ್ಟಿ’ ಆಗಿದೆ ಅಂತಾ ಕುಟುಕಿದ್ದ ಮಲ್ಲಿಕಾರ್ಜುನ್ ಖರ್ಗೆ
  • ದಾಸ್ಯದ ವೃದ್ಧ ನಾಯಕ ಮಲ್ಲಿಕಾರ್ಜುನ ಖರ್ಗೆ ಅಂತಾ ತಿರುಗೇಟು ನೀಡಿದ ಬಿಜೆಪಿ
Mallikarjun Kharge: ಮಲ್ಲಿಕಾರ್ಜುನ್ ಖರ್ಗೆಗೆ ದಾಸ್ಯದ ವೃದ್ಧ ನಾಯಕ ಎಂದ ಬಿಜೆಪಿ title=
ಮಲ್ಲಿಕಾರ್ಜುನ್ ಖರ್ಗೆಗೆ ಬಿಜೆಪಿ ತಿರುಗೇಟು

ಬೆಂಗಳೂರು: ಚೀನಾ ಜೊತೆಗಿನ ಭಾರತದ ಸಂಬಂಧ ನಿರ್ವಹಣೆ ಕುರಿತು ಪ್ರಧಾನಿ ಮೋದಿ(PM Narendra Modi) ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿತ್ತು. ‘ಭಾರತಕ್ಕೆ ಜುಮ್ಲಾ, ಚೀನಾಗೆ ಉದ್ಯೋಗ. ಮೋದಿ ಸರ್ಕಾರ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಅಸಂಘಟಿತ ವಲಯ ಮತ್ತು ಎಂಎಸ್‌ಎಂಇಗಳನ್ನು ನಾಶಪಡಿಸಿದೆ. ಇದರಿಂದ ‘ಮೇಕ್ ಇನ್ ಇಂಡಿಯಾ’ ಈಗ ‘ಬೈ ಫ್ರಾಮ್ ಚೀನಾ’ ಎನ್ನುವ ಹಾಗೆ ಬದಲಾಗಿದೆ ಅಂತಾ ರಾಹುಲ್ ಗಾಂಧಿ(Rahul Gandhi) ಟೀಕಿಸಿದ್ದರು.

ರಾಹುಲ್ ಗಾಂಧಿ ಬಳಿಕ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ(Mallikarjun Kharge) ಕೂಡ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಬಿಜೆಪಿ ಎನ್ನುವುದು ಭಾರತೀಯ ಜನತಾ ಪಕ್ಷದ ಬದಲಿಗೆ ‘ಬೀಜಿಂಗ್ ಜನತಾ ಪಾರ್ಟಿ’(Beijing Janata Party) ಆಗಿದೆ ಅಂತಾ ಖರ್ಗೆ ಕುಟುಕಿದ್ದರು. ಇದೀಗ ಖರ್ಗೆ ಹೇಳಿಕೆಗೆ ಕಿಡಿಕಾರಿರುವ ಬಿಜೆಪಿ ತಿರುಗೇಟು ನೀಡಿದೆ.

ಇದನ್ನೂ ಓದಿ: ಗ್ರಾಮ ಒನ್ ಯೋಜನೆ ಮೂಲಕ ಕಾರ್ಯಕ್ಷಮತೆ ಹೆಚ್ಚಿಸಿ: ಸಿಎಂ ಬಸವರಾಜ ಬೊಮ್ಮಾಯಿ

‘ದಾಸ್ಯದ ವೃದ್ಧ ನಾಯಕ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಅವರೇ ಬಿಜೆಪಿಯನ್ನು ಬೀಜಿಂಗ್ ಜನತಾ ಪಕ್ಷ ಎಂದು ಹಂಗಿಸುವ ನಿಮಗೆ ಚೀನಾ ನಿಯೋಗದ ಜೊತೆಗೆ ನಿಮ್ಮ ನಾಯಕ ರಾಹುಲ್ ಗಾಂಧಿ(Rahul Gandhi) ಮಾಡಿಕೊಂಡ ರಾಷ್ಟ್ರ ವಿರೋಧಿ ಒಪ್ಪಂದ ಮರೆತು ಹೋಯಿತೇ?’ ಅಂತಾ ಪ್ರಶ್ನಿಸಿದೆ.    

‘ದೇಶದ ಸಮಗ್ರತೆ ಹಾಗೂ ಅಖಂಡತೆಗೆ ನೆಹರೂ ಕಾಲದಿಂದಲೂ ಕಾಂಗ್ರೆಸ್ ಪಕ್ಷ(Congress Party) ಆತಂಕ ಸೃಷ್ಟಿಸುತ್ತಲೇ ಬಂದಿದೆ. ಚೀನಾ ಜೊತೆಗೆ ನೆಹರೂ ವಂಶ ಹೊಂದಿರುವ ರಹಸ್ಯ ನಂಟು ಬಯಲಾಗಬೇಕು. ಖರ್ಗೆಯವರೇ ನಿಮ್ಮ ಬಳಿ ಈ ಕುರಿತು ಸಾಕ್ಷ್ಯ ಇದೆಯೇ?’ ಅಂತಾ ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಹಿಜಾಬ್ ಧರಿಸಿಯೇ ವಿಧಾನಸಭೆಗೂ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ: ಶಾಸಕಿ ಕನೀಝ್ ಫಾತಿಮಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News