ಶಾಮನೂರು ಶಿವಶಂಕರಪ್ಪರನ್ನು ಹತ್ತಿಕ್ಕಲು ಶಿಷ್ಯಕೋಟೆಯನ್ನು ಛೂಬಿಟ್ಟಿರುವ ಸಿದ್ದರಾಮಯ್ಯ: ಬಿಜೆಪಿ

ಸಿಎಂ ಸಿದ್ದರಾಮಯ್ಯ ಅವರು ತಮ್ಮ ಶಿಷ್ಯಕೋಟೆಯನ್ನು ಶಾಮನೂರು ಶಿವಶಂಕರಪ್ಪ ಹಾಗೂ ವೀರಶೈವ ಲಿಂಗಾಯತರನ್ನು ಹತ್ತಿಕ್ಕಲು ಬಿಟ್ಟಿದ್ದಾರೆ. ಕುರ್ಚಿಗೆ ಆಪತ್ತು ಬಂದಾಗ ಸಿದ್ದರಾಮಯ್ಯ ಅವರು ಮಾತನಾಡುವುದಿಲ್ಲ ಮಾತನಾಡುವುದು ಅವರ ವಂದಿ ಮಾಗಧರು..! ಎಂದು ಬಿಜೆಪಿ ಟೀಕಿಸಿದೆ.

Written by - Puttaraj K Alur | Last Updated : Oct 7, 2023, 09:12 PM IST
  • ಕಾಂಗ್ರೆಸ್‌ನ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪನವರು ಹೈಕಮಾಂಡ್ ಮಾತಿಗೆ ಬಗ್ಗುವುದಿಲ್ಲ
  • ಶಿವಶಂಕರಪ್ಪರನ್ನು ಸೈಲೆಂಟ್ ಮಾಡಿಸಲು ಸಿಎಂ ಸಿದ್ದರಾಮಯ್ಯನವರು ತಮ್ಮ ಆಪ್ತ ಬಳಗವನ್ನು ಛೂ ಬಿಟ್ಟಿದ್ದಾರೆ
  • ಕುರ್ಚಿಗೆ ಆಪತ್ತು ಬಂದಾಗ ಸಿದ್ದರಾಮಯ್ಯರು ಮಾತನಾಡುವುದಿಲ್ಲ ಮಾತನಾಡುವುದು ಅವರ ವಂದಿ ಮಾಗಧರು
ಶಾಮನೂರು ಶಿವಶಂಕರಪ್ಪರನ್ನು ಹತ್ತಿಕ್ಕಲು ಶಿಷ್ಯಕೋಟೆಯನ್ನು ಛೂಬಿಟ್ಟಿರುವ ಸಿದ್ದರಾಮಯ್ಯ: ಬಿಜೆಪಿ   title=
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಾಗ್ದಾಳಿ!

ಬೆಂಗಳೂರು: ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರು ಹೈಕಮಾಂಡ್ ಮಾತಿಗೂ ಬಗ್ಗುವುದಿಲ್ಲ ಹೀಗಾಗಿ ಅವರನ್ನು ಅವಮಾನಿಸುವ ಮೂಲಕ ಸೈಲೆಂಟ್ ಮಾಡಿಸಬೇಕೆಂದು ಸಿಎಂ ಸಿದ್ದರಾಮಯ್ಯನವರು ತಮ್ಮ ಆಪ್ತ ಬಳಗವನ್ನು ಛೂ ಬಿಟ್ಟಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ‘ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಲಿಂಗಾಯತ ಅಧಿಕಾರಗಳದ್ದು ನಾಯಿಪಾಡಾಗಿದೆ ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ‘ಕೈ’ನಾಯಕರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಮಾನ ಮರ್ಯಾದೆ ಇದೆಯಾ ಎಂದು ಬೇಲೂರು ಗೋಪಾಲಕೃಷ್ಣ ಹಗುರವಾದ ಮಾತುಗಳನ್ನಾಡಿದ್ದಾರೆ. ಪಕ್ಷದಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆಂದು ಸಂತೋಷ್ ಲಾಡ್ ಟೀಕಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ಲಿಂಗಾಯತರಿಂದಲ್ಲ, ಅಲ್ಪಸಂಖ್ಯಾತರಿಂದ ಎಂದು ಪ್ರಕಾಶ್ ರಾಥೋಡ್ ಅವರಿಂದ ಸಮುದಾಯಕ್ಕೆ ಅಪಮಾನ. ಸಚಿವ ಸಂಪುಟ ಸಭೆಯಲ್ಲಿ ಹೆಚ್.ಸಿ.ಮಹಾದೇವಪ್ಪರಿಂದ ವೀರಶೈವ ಲಿಂಗಾಯತ ಅಧಿಕಾರಿಗಳನ್ನು ಟಾರ್ಗೆಟ್ ಮಾಡುವ ಬೆದರಿಕೆ. ಮಾನಸಿಕ ಸ್ಥಿಮಿತ ಕಳೆದುಕೊಂಡು ಮಾತನಾಡುತ್ತಿದ್ದಾರೆಂದು ಹಿರಿಯರು ಎನ್ನದೆ ಕೊತ್ತೂರು ಮಂಜುನಾಥ್ ಅವರಿಂದ ಅವಮಾನ’ವೆಂದು ಬಿಜೆಪಿ ಕುಟುಕಿದೆ.

ಇದನ್ನೂ ಓದಿ: ಸಾರಿಗೆ ಇಲಾಖೆಯ 148 ಹೊಸ ಬಸ್‌ಗಳಿಗೆ ಸಿಎಂ ಸಿದ್ದು ಚಾಲನೆ

‘ಸಿಎಂ ಸಿದ್ದರಾಮಯ್ಯ ಅವರು ತಮ್ಮ ಶಿಷ್ಯಕೋಟೆಯನ್ನು ಶಾಮನೂರು ಶಿವಶಂಕರಪ್ಪ ಹಾಗೂ ವೀರಶೈವ ಲಿಂಗಾಯತರನ್ನು ಹತ್ತಿಕ್ಕಲು ಬಿಟ್ಟಿದ್ದಾರೆ. ಕುರ್ಚಿಗೆ ಆಪತ್ತು ಬಂದಾಗ ಸಿದ್ದರಾಮಯ್ಯ ಅವರು ಮಾತನಾಡುವುದಿಲ್ಲ ಮಾತನಾಡುವುದು ಅವರ ವಂದಿ ಮಾಗಧರು..!’ ಎಂದು ಬಿಜೆಪಿ ಟೀಕಿಸಿದೆ.

ವೀರಶೈವ-ಲಿಂಗಾಯತ ಸಮಾಜಕ್ಕೆ ಅಪಮಾನ!

‘ವೀರಶೈವ-ಲಿಂಗಾಯತರಿಗೆ ಆಗುತ್ತಿರುವ ಅನ್ಯಾಯವನ್ನು ಶಾಮನೂರು ಶಿವಶಂಕರಪ್ಪ ಅವರು ಎಷ್ಟೇ ಬಾರಿ ಪ್ರಸ್ತಾಪಿಸಿದರೂ ಸಿದ್ದರಾಮಯ್ಯನವರು ಬಾಯಲ್ಲಿ ಕಡುಬು ಇಟ್ಟುಕೊಂಡವರಂತೆ ಸೈಲೆಂಟ್ ಆಗಿದ್ದರು. ಇದೀಗ ಶಾಮನೂರು ಶಿವಶಂಕರಪ್ಪ ವಿರುದ್ಧ ತಮ್ಮ ಶಿಷ್ಯ ಬಳಗದ ಆಪ್ತರನ್ನು ಛೂ ಬಿಟ್ಟು ಇಡೀ ವೀರಶೈವ-ಲಿಂಗಾಯತ ಸಮಾಜಕ್ಕೆ ಅಪಮಾನ ಮಾಡಿಸುತ್ತಿದ್ದಾರೆ. ಸಚಿವ ಸ್ಥಾನ ಕೊಟ್ಟಿರುವುದು ಸಿದ್ದರಾಮಯ್ಯನವರು ಹಾಕಿದ ಭಿಕ್ಷೆ ಎನ್ನುವಂತೆ ವೀರಶೈವ - ಲಿಂಗಾಯತ ಸಮುದಾಯವನ್ನೇ ಕೀಳಾಗಿ ನೋಡಲಾಗುತ್ತಿದೆ’ ಎಂದು ಬಿಜೆಪಿ ಕುಟುಕಿದೆ.

ಇದನ್ನೂ ಓದಿ: Murder Case: ವ್ಯಕ್ತಿಯನ್ನು ಕೊಂದು ಗೋಣಿ ಚೀಲದಲ್ಲಿ ತುಂಬಿ ಕೃಷ್ಣಾ ನದಿಗೆ ಹಾಕಿದ ಹಂತಕರು!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News