Kaveri River Dispute: ಮೈತ್ರಿ ಸದಸ್ಯ ಸ್ಟಾಲಿನ್‌ಗಾಗಿ ನೀರು ಹರಿಸಿ ಕೈಕಟ್ಟಿ ಕೂತ ಕಾಂಗ್ರೆಸ್ ಸರ್ಕಾರ!

Kaveri River water dispute: ಭತ್ತ ನಾಟಿ ಮಾಡಿರುವ ಕಾವೇರಿ ಕೊಳ್ಳದ ರೈತರು ಒಣಗುತ್ತಿರುವ ಬೆಳೆ ನೋಡಿ ಕಣ್ಣೀರು ಸುರಿಸುತ್ತಿದ್ದಾರೆ. ಇದಲ್ಲದೆ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆಗೇ 30 ಟಿಎಂಸಿ ನೀರು ಬೇಕು. ಈ ಯಾವ ಅಂಶಗಳನ್ನೂ ಕಾಂಗ್ರೆಸ್‌ ಸರ್ಕಾರ ಸಮರ್ಥವಾಗಿ ನ್ಯಾಯಾಧಿಕರಣಕ್ಕೆ ಅರಿಕೆ ಮಾಡುವಲ್ಲಿ ಸೋತು ಕನ್ನಡಿಗರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಬಿಜೆಪಿ ಕುಟುಕಿದೆ.

Written by - Puttaraj K Alur | Last Updated : Sep 4, 2023, 07:33 PM IST
  • ರಾಜ್ಯದ ರೈತರ ಹಿತ ಕಾಪಾಡುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಸೋತಿದೆ
  • ಮೈತ್ರಿಕೂಟದ ಸದಸ್ಯ ಎಂ.ಕೆ.ಸ್ಟಾಲಿನ್‌ಗಾಗಿ ನೀರು ಹರಿಸಿ ಕೈಕಟ್ಟಿ ಕೂತ ಸಿದ್ದರಾಮಯ್ಯ ಸರ್ಕಾರ
  • ಭತ್ತ ನಾಟಿ ಮಾಡಿರುವ ಕಾವೇರಿ ಕೊಳ್ಳದ ರೈತರು ಒಣಗುತ್ತಿರುವ ಬೆಳೆ ನೋಡಿ ಕಣ್ಣೀರು ಸುರಿಸುತ್ತಿದ್ದಾರೆ
Kaveri River Dispute: ಮೈತ್ರಿ ಸದಸ್ಯ ಸ್ಟಾಲಿನ್‌ಗಾಗಿ ನೀರು ಹರಿಸಿ ಕೈಕಟ್ಟಿ ಕೂತ ಕಾಂಗ್ರೆಸ್ ಸರ್ಕಾರ! title=
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ!

ಬೆಂಗಳೂರು: ರಾಜ್ಯದ ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣವಾಗಿ ಸೋತಿರುವ ಕಾಂಗ್ರೆಸ್ ಸರ್ಕಾರವು ಮೈತ್ರಿಕೂಟದ ಸದಸ್ಯ ಎಂ.ಕೆ.ಸ್ಟಾಲಿನ್‌ಗಾಗಿ ನೀರು ಹರಿಸಿ ಕೈಕಟ್ಟಿ ಕೂತಿದೆ ಎಂದು ಬಿಜೆಪಿ ಕಿಡಿಕಾರಿದೆ. ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಬಿಜೆಪಿ, ‘ಜವಾಬ್ದಾರಿ ಮರೆತ ಸರ್ಕಾರದ ಕಾರಣದಿಂದ ಸ್ವತಃ ರೈತರೇ ಸುಪ್ರೀಂಕೋರ್ಟ್‌ ಕದ ತಟ್ಟುವ ಪರಿಸ್ಥಿತಿ ಎದುರಾಗಿದೆ’ ಎಂದು ಕಿಡಿಕಾರಿದೆ.

KRS ಜಲಾಶಯ 99 ಅಡಿಗೆ ಕುಸಿತ ಕಂಡಿರುವ ವಿಚಾರವಾಗಿ ಆತಂಕ ವ್ಯಕ್ತಪಡಿಸಿರುವ ಬಿಜೆಪಿ, ‘ರಾಜ್ಯವನ್ನು ಸಿಎಂ ಸಿದ್ದರಾಮಯ್ಯನವರ ಸರ್ಕಾರ ಭೀಕರ ಬರಗಾಲಕ್ಕೆ ತಳ್ಳುತ್ತಿದೆ. ಕೆಆರ್‌ಎಸ್‌ನಲ್ಲಿ ಈಗಾಗಲೇ ನೀರಿನ ಮಟ್ಟ 100 ಅಡಿಗಳಿಗಿಂತ ಕೆಳಗೆ ಕುಸಿದಿದೆ. ಒಳಹರಿವು 4,199 ಕ್ಯೂಸೆಕ್ಸ್‌ ಇದ್ದು ಹೊರಹರಿವು ಅದಕ್ಕಿಂತ ಗಣನೀಯ ಪ್ರಮಾಣದಲ್ಲಿ ಹೆಚ್ಚಿದ್ದು 6,214 ಕ್ಯೂಸೆಕ್ಸ್‌ನಷ್ಟಿದೆ’ ಎಂದು ಟ್ವೀಟ್ ಮಾಡಿದೆ.

ಇದನ್ನೂ ಓದಿ: ಲಕ್ಷಾಂತರ ಫಲಾನುಭವಿಗಳಿಗೆ ತಲುಪದ ಅನ್ನಭಾಗ್ಯ ಹಣ!

‘ಭತ್ತ ನಾಟಿ ಮಾಡಿರುವ ಕಾವೇರಿ ಕೊಳ್ಳದ ರೈತರು ಒಣಗುತ್ತಿರುವ ಬೆಳೆ ನೋಡಿ ಕಣ್ಣೀರು ಸುರಿಸುತ್ತಿದ್ದಾರೆ. ಇದಲ್ಲದೆ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆಗೇ 30 ಟಿಎಂಸಿ ನೀರು ಬೇಕು. ಈ ಯಾವ ಅಂಶಗಳನ್ನೂ ಕಾಂಗ್ರೆಸ್‌ ಸರ್ಕಾರ ಸಮರ್ಥವಾಗಿ ನ್ಯಾಯಾಧಿಕರಣಕ್ಕೆ ಅರಿಕೆ ಮಾಡುವಲ್ಲಿ ಸೋತು ಕನ್ನಡಿಗರನ್ನು ಸಂಕಷ್ಟಕ್ಕೆ ಸಿಲುಕಿಸಿದೆ’ ಎಂದು ಬಿಜೆಪಿ ಕುಟುಕಿದೆ.

‘ಉದ್ಯಾನ ನಗರಿ ಬೆಂಗಳೂರಿನಲ್ಲಿ ಚಳಿಗಾಲ ಮುಗಿಯುವ ಮೊದಲೇ ಬಿರುಬೇಸಿಗೆ ಬಂದಿದೆ. ಕುಡಿಯುವ ನೀರಿಗೆ ಈಗಲೇ ಹಾಹಾಕಾರ ಶುರುವಾಗಿದೆ. ಕಾಂಗ್ರೆಸ್ ಸರ್ಕಾರ ತಮ್ಮ ಮೈತ್ರಿಕೂಟದ ಸದಸ್ಯ ಎಂ.ಕೆ.ಸ್ಟಾಲಿನ್‌ ಅವರನ್ನು ತೃಪ್ತಿಪಡಿಸುವ ಸಲುವಾಗಿ ನ್ಯಾಯಾಧಿಕರಣದ ಮುಂದೆ ಕರ್ನಾಟಕದ ವಾದವನ್ನು ಉದ್ದೇಶಪೂರ್ವಕವಾಗಿ ಸರಿಯಾಗಿ ಮಂಡಿಸದೆ ರಾಜ್ಯದ ಜನತೆಗೆ ಅನ್ಯಾಯವೆಸಗಿದ್ದಾರೆ’ ಎಂದು ಬಿಜೆಪಿ ಆರೋಪಿಸಿದೆ.

ಇದನ್ನೂ ಓದಿ: ‘ಆಪರೇಷನ್ ಹಸ್ತ’ ಆಖಾಡಕ್ಕಿಳಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್!

‘ಇದರ ಪರಿಣಾಮ ರಾಜಧಾನಿ ಬೆಂಗಳೂರಿಗೂ ತಟ್ಟಿದೆ. ವಾರಕ್ಕೆ ಮೂರು ಬಾರಿ ಬರಬೇಕಿದ್ದ ಕಾವೇರಿ ನೀರು ವಾರಕ್ಕೊಮ್ಮೆಯೂ ಬರುತ್ತಿಲ್ಲ. ಅಂತರ್ಜಲ ಮಟ್ಟವೂ ಇಳಿದು ಬೋರ್‌ವೆಲ್‌ಗಳೂ ಬರಿದಾಗಿವೆ. ಸಿಎಂ ಸಿದ್ದರಾಮಯ್ಯನವರು ಜಾಣ ಮೌನಕ್ಕೆ ಶರಣಾಗಿದ್ದಾರೆ’ ಎಂದು ಬಿಜೆಪಿ ಕುಟುಕಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News