ಬೆಂಗಳೂರು: ಕೊರೊನಾ(CoronaVirus) ಸಾಂಕ್ರಾಮಿಕ ನಡುವೆ ರಾಜ್ಯದ ಜನತೆ ಸಂಪಾದನೆ ಇಲ್ಲದೆ, ಉದ್ಯೋಗವಿಲ್ಲದೆ ಕಂಗಾಲಾಗಿದ್ದಾರೆ. ಈ ನಡುವೆ ಬಿಜೆಪಿಯ ಲೂಟಿ ಒಂದೆರಡಲ್ಲ. ಬಿಜೆಪಿ ಪಿಕ್ಪಾಕೆಟ್ ಸರ್ಕಾರವಾಗಿದೆ ಎಂದು ಕರ್ನಾಟಕ ಕಾಂಗ್ರೆಸ್(Congress) ಆಕ್ರೋಶ ವ್ಯಕ್ತಪಡಿಸಿದೆ. ಸೋಮವಾರ ಸರಣಿ ಟ್ವೀಟ್ ಮಾಡುವ ಮೂಲಕ ರಾಜ್ಯ ಬಿಜೆಪಿ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದೆ.
ಕರೋನಾ ನಡುವೆ ಜನತೆ ಸಂಪಾದನೆ ಇಲ್ಲದೆ, ಉದ್ಯೋಗವಿಲ್ಲದೆ ಕಂಗಾಲಾಗಿದ್ದಾರೆ, ಈ ನಡುವೆ ಬಿಜೆಪಿಯ ಲೂಟಿ ಒಂದೆರಡಲ್ಲ.
★ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ
★ಸಿಲಿಂಡಲ್ ದರ ಏರಿಕೆ
★ಆಸ್ತಿ ತೆರಿಗೆ ಏರಿಕೆ
★ಗೊಬ್ಬರದ ಬೆಲೆ ಏರಿಕೆ
★ಕೃಷಿ ಅಗತ್ಯ ವಸ್ತುಗಳ ಬೆಲೆ ಏರಿಕೆ
★ದಿನಸಿ ಬೆಲೆ ಏರಿಕೆ
★ಟೋಲ್ ದರ ಏರಿಕೆ#ಪಿಕ್ಪಾಕೆಟ್ಸರ್ಕಾರ— Karnataka Congress (@INCKarnataka) September 13, 2021
‘ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ, ಸಿಲಿಂಡರ್ ದರ ಏರಿಕೆ, ಆಸ್ತಿ ತೆರಿಗೆ ಏರಿಕೆ, ಗೊಬ್ಬರದ ಬೆಲೆ ಏರಿಕೆ, ಕೃಷಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ದಿನಸಿ ಬೆಲೆ ಏರಿಕೆ, ಟೋಲ್ ದರ ಏರಿಕೆ ಮಾಡುವ ಮೂಲಕ ಬಿಜೆಪಿ ಸರ್ಕಾರ(BJP Govt.) ಜನರನ್ನು ಲೂಟಿ ಮಾಡುತ್ತಿದೆ’ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಇದನ್ನೂ ಓದಿ: ಬಸವರಾಜ್ ಬೊಮ್ಮಾಯಿ ರಾಜ್ಯಕ್ಕೆ ‘ಅತಿಥಿ ಸಿಎಂ’ನಂತಾಗಿದ್ದಾರೆ: ಕಾಂಗ್ರೆಸ್ ಟೀಕೆ
ಬೆಲೆ ಏರಿಕೆಯಿಂದ ಜನರು ಬದುಕಲು ಪರದಾಡುತ್ತಿದ್ದರೂ ಜನರ ನೋವಿಗೆ ಸ್ಪಂದಿಸದೆ ಹೊಣೆಗೇಡಿಗಳಂತೆ ಸಂವೇದನಾ ಶೂನ್ಯರಾಗಿ ಬಾಲಿಶ ಮಾತುಗಳನ್ನಾಡುತ್ತಿದ್ದಾರೆ ಬಿಜೆಪಿ ನಾಯಕರು.
ಬೆಲೆ ಇಳಿಸಿ ಜನರ ನೆರವಿಗೆ ನಿಲ್ಲುವ ಬಗ್ಗೆ ಯಾವೊಬ್ಬ ಬಿಜೆಪಿ ನಾಯಕರೂ ತುಟಿ ಬಿಚ್ಚದಿರುವುದು ಅವರ ಜನ ವಿರೋಧಿ ಮನಸ್ಥಿತಿಗೆ ಸಾಕ್ಷಿ#ಪಿಕ್ಪಾಕೆಟ್ಸರ್ಕಾರ
— Karnataka Congress (@INCKarnataka) September 13, 2021
‘ಬೆಲೆ ಏರಿಕೆಯಿಂದ ಜನರು ಬದುಕಲು ಪರದಾಡುತ್ತಿದ್ದರೂ ಬಿಜೆಪಿ(BJP) ನಾಯಕರು ಮಾತ್ರ ಜನರ ನೋವಿಗೆ ಸ್ಪಂದಿಸದೆ ಹೊಣೆಗೇಡಿಗಳಂತೆ ಸಂವೇದನಾ ಶೂನ್ಯರಾಗಿ ಬಾಲಿಶ ಮಾತುಗಳನ್ನಾಡುತ್ತಿದ್ದಾರೆ. ಬೆಲೆ ಇಳಿಸಿ ಜನರ ನೆರವಿಗೆ ನಿಲ್ಲುವ ಬಗ್ಗೆ ಯಾವೊಬ್ಬ ಬಿಜೆಪಿ ನಾಯಕರೂ ತುಟಿ ಬಿಚ್ಚದಿರುವುದು ಅವರ ಜನ ವಿರೋಧಿ ಮನಸ್ಥಿತಿಗೆ ಸಾಕ್ಷಿಯಾಗಿದೆ’ ಎಂದು ಕಾಂಗ್ರೆಸ್ ಕುಟುಕಿದೆ.
ಇದನ್ನೂ ಓದಿ: ಬಿ.ಸಿ.ಪಾಟೀಲ್ ವಿರುದ್ಧ ಭ್ರಷ್ಟಾಚಾರ ಆರೋಪ: ತನಿಖೆಗೆ ಕಾಂಗ್ರೆಸ್ ಆಗ್ರಹ!
ಬಿಜೆಪಿಯ ಆಂತರಿಕ ಕಿತ್ತಾಟದಲ್ಲಿ ಸಿಪಿ ಯೋಗೀಶ್ವರ್ ಆಪರೇಷನ್ ಕಮಲಕ್ಕಾಗಿ 9 ಕೋಟಿ ಸಾಲ ಮಾಡಿದ್ದರು ಎಂಬ ಅಂಶ ಬಯಲಾಗಿತ್ತು, ಸಾಲ ಮಾಡಿದ್ದೇಕೆ? ಯಾಕಾಗಿ ಈ ಬಂಡವಾಳ ಹೂಡಿಕೆ?@BJP4Karnataka ಪಾಲಿಗೆ ರಾಜಕೀಯವೆಂದರೆ 'ಕಳ್ಳದಂಧೆ'ಯಾಗಿದೆ.
ಈ ಎಲ್ಲಾ ಭ್ರಷ್ಟಾಚಾರಗಳು ಮೋದಿಯವರ ಅಣತಿಯಂತೆ ನಡೆಯುತ್ತಿರುವುದು ಸ್ಪಷ್ಟ.#ಭ್ರಷ್ಟಬಿಜೆಪಿ
— Karnataka Congress (@INCKarnataka) September 13, 2021
‘ಬಿಜೆಪಿಯ ಆಂತರಿಕ ಕಿತ್ತಾಟದಲ್ಲಿ ಸಿ.ಪಿ.ಯೋಗೀಶ್ವರ್(CP Yogeeshwara) 'ಆಪರೇಷನ್ ಕಮಲ'ಕ್ಕಾಗಿ 9 ಕೋಟಿ ರೂ. ಸಾಲ ಮಾಡಿದ್ದರು ಎಂಬ ಅಂಶ ಬಯಲಾಗಿತ್ತು. ಸಾಲ ಮಾಡಿದ್ದೇಕೆ? ಯಾಕಾಗಿ ಈ ಬಂಡವಾಳ ಹೂಡಿಕೆ? ಬಿಜೆಪಿ ಸರ್ಕಾರದ ಪಾಲಿಗೆ ರಾಜಕೀಯವೆಂದರೆ 'ಕಳ್ಳದಂಧೆ'ಯಾಗಿದೆ. ಈ ಎಲ್ಲಾ ಭ್ರಷ್ಟಾಚಾರಗಳು ಪ್ರಧಾನಿ ಮೋದಿ(Narendra Modi)ಯವರ ಅಣತಿಯಂತೆ ನಡೆಯುತ್ತಿರುವುದು ಸ್ಪಷ್ಟ. ಬಿಜೆಪಿಯಿಂದ ನನಗೆ ಹಣದ ಆಮಿಷ ಬಂದಿತ್ತು ಎಂಬ ಶಾಸಕ ಶ್ರೀಮಂತ ಪಾಟೀಲ್ರ ಹೇಳಿಕೆಯಿಂದ ಬಿಜೆಪಿಯ ಅನೈತಿಕ ರಾಜಕಾರಣಕ್ಕೆ ಸಾಕ್ಷಿ ಸಿಕ್ಕಿದೆ. ಕುದುರೆ ವ್ಯಾಪಾರಕ್ಕೆ ಬಿಜೆಪಿ ಬಳಸಿದ ಆ ಹಣದ ಮೂಲ ಯಾವುದು? ಆಪರೇಷನ್ ಕಮಲದ ಅಕ್ರಮ ಸ್ವತಃ ಬಿಜೆಪಿಗರಿಂದಲೇ ಬಹಿರಂಗವಾಗುತ್ತಿದ್ದರೂ ಐಟಿ, ಈಡಿ, ಸಿಬಿಐಗಳು ಸುಮ್ಮನಿರುವುದೇಕೆ?’ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಶ್ನಿಸಿದೆ.
ಬಿಜೆಪಿಯಿಂದ ನನಗೆ ಹಣದ ಆಮಿಷ ಬಂದಿತ್ತು ಎಂಬ ಶಾಸಕ ಶ್ರೀಮಂತ ಪಾಟೀಲ್ರ ಹೇಳಿಕೆಯಿಂದ ಬಿಜೆಪಿಯ ಅನೈತಿಕ ರಾಜಕಾರಣಕ್ಕೆ ಸಾಕ್ಷಿ ಸಿಕ್ಕಿದೆ.
ಕುದುರೆ ವ್ಯಾಪಾರಕ್ಕೆ ಬಿಜೆಪಿ ಬಳಸಿದ ಆ ಹಣದ ಮೂಲ ಯಾವುದು?
ಆಪರೇಷನ್ ಕಮಲದ ಅಕ್ರಮ ಸ್ವತಃ ಬಿಜೆಪಿಗರಿಂದಲೇ ಬಹಿರಂಗವಾಗುತ್ತಿದ್ದರೂ ಐಟಿ, ಈಡಿ, ಸಿಬಿಐಗಳು ಸುಮ್ಮನಿರುವುದೇಕೆ?#ಭ್ರಷ್ಟಬಿಜೆಪಿ
— Karnataka Congress (@INCKarnataka) September 13, 2021
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.