ಬಿಜೆಪಿ ಕ್ಯಾನ್ಸರ್, ಉಳಿದ ಪಕ್ಷಗಳು ನೆಗಡಿ, ಕೆಮ್ಮು ಇದ್ದ ಹಾಗೆ: ಪ್ರಕಾಶ್ ರೈ

ಒಕ್ಕೂಟ ವ್ಯವಸ್ಥೆಯಲ್ಲಿ ಬಲಯುತಗೊಳ್ಳಬೇಕಾದರೆ, ದೇಶಕ್ಕೆ ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಇದೆಯೇ ಹೊರತು, ರಾಷ್ಟ್ರೀಯ ಪಕ್ಷಗಳ ಅವಶ್ಯಕತೆ ಅಲ್ಲ- ಪ್ರಕಾಶ್ ರೈ

Last Updated : Apr 12, 2018, 09:06 AM IST
 ಬಿಜೆಪಿ ಕ್ಯಾನ್ಸರ್, ಉಳಿದ ಪಕ್ಷಗಳು ನೆಗಡಿ, ಕೆಮ್ಮು ಇದ್ದ ಹಾಗೆ: ಪ್ರಕಾಶ್ ರೈ title=
ಸಂಗ್ರಹ ಚಿತ್ರ

ಬೆಳಗಾವಿ: ಬಿಜೆಪಿ ಪಕ್ಷ ಕ್ಯಾನ್ಸರ್ ಇದ್ದಂತೆ ಹಾಗೂ ಉಳಿದ ಪಕ್ಷಗಳು ನೆಗಡಿ, ಕೆಮ್ಮು ಇದ್ದ ಹಾಗೆ ಎಂದು ಹೇಳುವ ಮೂಲಕ ಬಹುಭಾಷಾ ನಟ ಪ್ರಕಾಶ್ ರೈ ರಾಜಕೀಯ ಪಕ್ಷಗಳನ್ನು ಕಾಯಿಲೆಗಳಿಗೆ ಹೋಲಿಸಿದ್ದಾರೆ. ಅಲ್ಲದೇ, ಮೊದಲು ಕ್ಯಾನ್ಸರ್ ಅನ್ನು ಗುಣಪಡಿಸಬೇಕು. ನಂತರ ಸಣ್ಣ ಪುಟ್ಟ ರೋಗಗಳನ್ನು ನೋಡೋಣ ಎಂದಿರುವ ರೈ, ಕ್ಯಾನ್ಸರ್ ವಿರುದ್ಧ ಹೋರಾಡಿ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು ಎಂದು ಜನರಿಗೆ ಕರೆ ನೀಡಿದ್ದಾರೆ.

ಬಿಜೆಪಿಗೆ ಯಾವುದೇ ಕಾರಣಕ್ಕೂ ಮತ ಹಾಕಬೇಡಿ
ಸುದ್ದಿಗೋಷ್ಠಿಯಲ್ಲಿ ಜಸ್ಟ್ ಆಸ್ಕಿಂಗ್ ಫೌಂಡೇಶನ್ ಪರವಾಗಿ ಮಾತನಾಡಿದ ಪ್ರಕಾಶ್ ರೈ, 'ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಾದರು. 2019 ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಾರದು'. ಹಾಗಾಗಿ ಬಿಜೆಪಿಗೆ ಯಾವುದೇ ಕಾರಣಕ್ಕೂ ಮತ ಹಾಕಬೇಡಿ. ಯಾವ ಪಕ್ಷಕ್ಕೆ ಮತ ಹಾಕಿ ಎಂದು ನಾನು ಹೇಳುವುದಿಲ್ಲ, ನೀವು ಕುಳಿತು ಯೋಚಿಸಿ ಮತ ಹಾಕಿ ಎಂದರು.

ಕಾವೇರಿ ಪಾಲಿಟಿಕ್ಸ್
ಕಾವೇರಿ ನದಿ ನೀರು ಹಂಚಿಕೆ ಪರಿಹಾರವಿಲ್ಲದ ಸಮಸ್ಯೆಯಲ್. ಆದರೆ, ರಾಜಕೀಯ ಪಕ್ಷಗಳು ಮತ್ತು ನಾಯಕರು ಈ ಸಮಸ್ಯೆಯನ್ನು ಜೀವಂತವಾಗಿರುವಂತೆ ನೋಡಿಕೊಳ್ಳುತ್ತಿದ್ದಾರೆ ಎಂದ ಪ್ರಕಾಶ್ ರೈ, ಕಾವೇರಿಯಲ್ಲಿ ವರ್ಷದಿಂದ ವರ್ಷಕ್ಕೆ ನೀರು ಏಕೆ ಕಡಿಮೆಯಾಗುತ್ತಿದೆ ಎಂಬುದನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಜ್ಞರ ಜತೆ ಕುಳಿತು ಚಿಂತಿಸಬೇಕು ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಪ್ರಾದೇಶಿಕ ಪಕ್ಷಗಳು ಬಲಿಷ್ಠಗೊಳ್ಳಬೇಕು
ಒಕ್ಕೂಟ ವ್ಯವಸ್ಥೆಯಲ್ಲಿ ಬಲಯುತಗೊಳ್ಳಬೇಕಾದರೆ, ದೇಶಕ್ಕೆ ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಇದೆಯೇ ಹೊರತು, ರಾಷ್ಟ್ರೀಯ ಪಕ್ಷಗಳ ಅವಶ್ಯಕತೆ ಅಲ್ಲ ಎಂದ ರೈ, ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ವಿಷಯಗಳ ಬಗ್ಗೆ ಕಳಕಳಿ ಇರುವುದಿಲ್ಲ. ಈ ನಿಟ್ಟಿನಲ್ಲಿ ಜನರು ಮೊದಲು ತಮ್ಮ ತಮ್ಮ ಸಮಸ್ಯೆಗಳ ಇತ್ಯರ್ಥಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

Trending News