ಡಿಸಿ ಬಿಲ್ ಹೆಸರಿನಲ್ಲಿ ಕೋಟ್ಯಾಂತರ ರೂ.ಹಣ ಬಿಡುಗಡೆ ಪ್ರಕರಣ: ದೃಢೀಕೃತ ದಾಖಲೆ ಸಲ್ಲಿಸಲು ಸೂಚನೆ

DC Bill Case: ಈ ಪ್ರಕರಣದಲ್ಲಿ 5 ಲಕ್ಷದಿಂದ ಹಿಡಿದು 25 ಲಕ್ಷ ರೂ.ಗಳ ವರೆಗೆ ನೂರಾರು ಕೋಟಿ‌ ರೂ.ಗಳನ್ನು ಡಿಸಿ ಬಿಲ್ ಗಳ ಹೆಸರಿನಲ್ಲಿ ವಲಯ ಮಟ್ಟದಲ್ಲೇ ನಿಯಮಬಾಹಿರವಾಗಿ ಗುತ್ತಿಗೆದಾರರಿಗೆ  ಬಿಡುಗಡೆ ಮಾಡಲಾಗಿತ್ತು.

Written by - Bhavya Sunil Bangera | Edited by - Bhavishya Shetty | Last Updated : Jun 16, 2023, 10:07 AM IST
    • ಗುತ್ತಿಗೆದಾರರಿಗೆ ಡಿಸಿ ಬಿಲ್ ಹೆಸರಿನಲ್ಲಿ ಬಿಡುಗಡೆ ಹಣ ಮಾಡಿದ್ದ ಪ್ರಕರಣ
    • ಅನುಮತಿ ಇಲ್ಲದೇ ಡಿಸಿ ಬಿಲ್ ಗಳ ಹೆಸರಿನಲ್ಲಿ ಗುತ್ತಿಗೆದಾರರಿಗೆ ಬಿಡುಗಡೆ ಮಾಡಿರುವುದು ಸ್ಪಷ್ಟ
    • ತನಿಖಾಧಿಕಾರಿಗಳಿಗೆ ಧೃಢೀಕೃತ ದಾಖಲೆಗಳನ್ನು ನೀಡುವಂತೆ ನೋಟೀಸ್ ಜಾರಿ
ಡಿಸಿ ಬಿಲ್ ಹೆಸರಿನಲ್ಲಿ ಕೋಟ್ಯಾಂತರ ರೂ.ಹಣ ಬಿಡುಗಡೆ ಪ್ರಕರಣ: ದೃಢೀಕೃತ ದಾಖಲೆ ಸಲ್ಲಿಸಲು ಸೂಚನೆ title=
DC Bill Case

DC Bill Case: ಬೆಂಗಳೂರು: ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ನೂರಾರು ಕೋಟಿ ರೂಪಾಯಿಗಳಷ್ಟು ಹಣವನ್ನು ಗುತ್ತಿಗೆದಾರರಿಗೆ ಡಿಸಿ ಬಿಲ್ ಹೆಸರಿನಲ್ಲಿ ಬಿಡುಗಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 23, 2018ರಂದು ಎಸಿಬಿ ಮತ್ತು ಲೋಕಾಯುಕ್ತದಲ್ಲಿ ದೂರನ್ನು ನೀಡಲಾಗಿತ್ತು.

ಇದನ್ನೂ ಓದಿ: ಚಾಮರಾಜನಗರದ ಗ್ರಾಮಕ್ಕೆ ಆನೆ ಲಗ್ಗೆ- ಬೈಕ್, ಮರ, ಮನೆ ಗೇಟ್ ಧ್ವಂಸ

ದೂರಿನ ಜೊತೆ ಲಗತ್ತಿಸಿದ್ದ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿದ ತನಿಖಾಧಿಕಾರಿಗಳು ರಾಜರಾಜೇಶ್ವರಿನಗರ ವಲಯದ ಸಂಬಂಧಪಟ್ಟ ಅಧಿಕಾರಿಗಳ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ನಡೆಸಿದ ನಂತರ ಸದರಿ 14 ವಾರ್ಡ್ ಗಳ ವ್ಯಾಪ್ತಿಯಲ್ಲಿ ಹತ್ತಾರು ಕೋಟಿ ರೂಪಾಯಿಗಳಷ್ಟು ಹಣವನ್ನು ಆಯುಕ್ತರ ಅನುಮತಿ ಇಲ್ಲದೇ ನಿಯಮಬಾಹಿರವಾಗಿ ಡಿಸಿ ಬಿಲ್ ಗಳ ಹೆಸರಿನಲ್ಲಿ ಗುತ್ತಿಗೆದಾರರಿಗೆ ಬಿಡುಗಡೆ ಮಾಡಿರುವುದು ಸ್ಪಷ್ಟವಾಗಿದೆ.

ಆದ್ದರಿಂದ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತದ ಬೆಂಗಳೂರು ನಗರ ವಿಭಾಗದ ಪೊಲೀಸ್ ಇನ್ಸ್ ಪೆಕ್ಟರ್ ರವರು, ರಾಜರಾಜೇಶ್ವರಿ ನಗರ ವಲಯದ ಜಂಟಿ ಆಯುಕ್ತರು ಮತ್ತು ಮುಖ್ಯ ಅಭಿಯಂತರರಿಗೆ ಕೂಡಲೇ ಲೋಕಾಯುಕ್ತದ ತನಿಖಾಧಿಕಾರಿಗಳಿಗೆ ಧೃಢೀಕೃತ ದಾಖಲೆಗಳನ್ನು ನೀಡುವಂತೆ ನೋಟೀಸ್ ಜಾರಿ ಮಾಡಲಾಗಿದೆ.

ಡಿಸಿ ಬಿಲ್ ಎಂದರೆ, “ಒಂದು ಲಕ್ಷಕ್ಕೂ ಕಡಿಮೆ ಮೊತ್ತದಲ್ಲಿ ತುರ್ತಾಗಿ ಕೈಗೊಳ್ಳುವ ಸಣ್ಣ ಕಾಮಗಾರಿಗಳಿಗೆ ವಲಯ ಮಟ್ಟದಲ್ಲೇ ಜಂಟಿ‌ ಆಯುಕ್ತರ ಅನುಮೋದನೆ ಪಡೆದು ಬಿಡುಗಡೆ ಮಾಡಲು ಅವಕಾಶವಿರುವ ಹಣ. ಆದರೆ, ಒಂದು ಲಕ್ಷ ರೂ.ಗಳಿಗೂ ಹೆಚ್ಚು ಮೊತ್ತವನ್ನು ಡಿಸಿ ಬಿಲ್ ಹೆಸರಿನಲ್ಲಿ ‌ಬಿಡುಗಡೆ ಮಾಡುವಂತಿಲ್ಲ. ಒಂದು ವೇಳೆ ಆ ರೀತಿ ಬಿಡುಗಡೆ ಮಾಡಬೇಕಿದ್ದಲ್ಲಿ ಮಾನ್ಯ ಆಯುಕ್ತರ ಅನುಮೋದನೆ ಕಡ್ಡಾಯವಾಗಿರುತ್ತದೆ”.

ಇದನ್ನೂ ಓದಿ: Abhi-Aviva Beegara Oota: ಅಂಬಿ ಪುತ್ರನ ಬೀಗರ ಊಟಕ್ಕೆ ಅದ್ದೂರಿ ಸಿದ್ದತೆ

ಆದರೆ, ಈ ಪ್ರಕರಣದಲ್ಲಿ 5 ಲಕ್ಷದಿಂದ ಹಿಡಿದು 25 ಲಕ್ಷ ರೂ.ಗಳ ವರೆಗೆ ನೂರಾರು ಕೋಟಿ‌ ರೂ.ಗಳನ್ನು ಡಿಸಿ ಬಿಲ್ ಗಳ ಹೆಸರಿನಲ್ಲಿ ವಲಯ ಮಟ್ಟದಲ್ಲೇ ನಿಯಮಬಾಹಿರವಾಗಿ ಗುತ್ತಿಗೆದಾರರಿಗೆ  ಬಿಡುಗಡೆ ಮಾಡಲಾಗಿತ್ತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News