ನೈಸ್ ರೋಡ್ ಸುತ್ತ ಮುತ್ತಲ ಪ್ರಯಾಣಿಕರಿಗೆ ಬಿಎಂಟಿಸಿ ಗುಡ್ ನ್ಯೂಸ್

ಪ್ರಯಾಣಿಕರ ಮುಖದಲ್ಲಿ ಖುಷಿಯ ಕೇಕೆ. ಹಲವು ವರ್ಷಗಳ ಕನಸು ನನಸಾದ ಸಂಭ್ರಮ. ಬಿಎಂಟಿಸಿ ಇಲ್ಲಿಯ ಪ್ರಯಾಣಿಕರಿಗೆ ನೈಸ್ ನ್ಯೂಸ್ ವೊಂದನ್ನ ಕೊಟ್ಟಿದ್ದು, ಜನರು ಫುಲ್ ಖುಷ್ ಆಗಿದ್ದಾರೆ.

Written by - Manjunath Hosahalli | Last Updated : Nov 23, 2023, 11:48 AM IST
  • ಪ್ರಯಾಣಿಕರ ಬೇಡಿಕೆ ಮೇರೆಗೆ ನೈಸ್ ರಸ್ತೆಯಲ್ಲೂ ಬಿಎಂಟಿಸಿ ಬಸ್ ಗಳ ಸಂಚಾರ ಶುರುವಾಗಿದೆ
  • ಎಲೆಕ್ಟ್ರಾನಿಕ್ ಸಿಟಿಯಿಂದ ಮಾದವಾರ ರೂಟ್ ಬಿಎಂಟಿಸಿ ಬಸ್ ಗಳ ಸಂಚಾರ ಆರಂಭ
  • ಇದರೊಂದಿಗೆ ಇಲ್ಲಿಯ ಜನರ ಬಹುದಿನಗಳ ಕನಸು ನನಸಾಗಿದೆ.
ನೈಸ್ ರೋಡ್ ಸುತ್ತ ಮುತ್ತಲ ಪ್ರಯಾಣಿಕರಿಗೆ ಬಿಎಂಟಿಸಿ ಗುಡ್ ನ್ಯೂಸ್  title=

ಬೆಂಗಳೂರು: ನೈಸ್ ರೋಡ್ ಸುತ್ತ ಮುತ್ತಲ ಪ್ರಯಾಣಿಕರಿಗೆ ಬಿಎಂಟಿಸಿ ಗುಡ್ ನ್ಯೂಸ್ ನೀಡಿದೆ. ಇಲ್ಲಿಯ ಜನರ ಬಹುದಿನಗಳ ಕನಸು ನನಸಾಗಿದ್ದು, ಈ ರೂಟ್ ನಲ್ಲಿ ಬಿಎಂಟಿಸಿ ಬಸ್ ಗಳ ಓಡಾಟ ಶುರುವಾಗಿದೆ.

ಪ್ರಯಾಣಿಕರ ಮುಖದಲ್ಲಿ ಖುಷಿಯ ಕೇಕೆ. ಹಲವು ವರ್ಷಗಳ ಕನಸು ನನಸಾದ ಸಂಭ್ರಮ. ಬಿಎಂಟಿಸಿ ಇಲ್ಲಿಯ ಪ್ರಯಾಣಿಕರಿಗೆ ನೈಸ್ ನ್ಯೂಸ್ ವೊಂದನ್ನ ಕೊಟ್ಟಿದ್ದು, ಜನರು ಫುಲ್ ಖುಷ್ ಆಗಿದ್ದಾರೆ.

ಇದನ್ನೂ ಓದಿ- ಬೀದಿನಾಯಿಗಳ ಮೇಲೆ ಬಿಸಿಸಿಐ ಅಧ್ಯಕ್ಷ ಅಕ್ಕರೆ: ಊಟ ಕೊಡುವ ಬಿನ್ನಿ!!

ಪ್ರಯಾಣಿಕರ ಬೇಡಿಕೆ ಮೇರೆಗೆ ನೈಸ್ ರಸ್ತೆಯಲ್ಲೂ ಬಿಎಂಟಿಸಿ ಬಸ್ ಗಳ ಸಂಚಾರ ಶುರುವಾಗಿದೆ. ಇದರೊಂದಿಗೆ ಇಲ್ಲಿಯ ಜನರ ಬಹುದಿನಗಳ ಕನಸು ನನಸಾಗಿದೆ. ಎಲೆಕ್ಟ್ರಾನಿಕ್ ಸಿಟಿಯಿಂದ ಮಾದವಾರ ರೂಟ್  ಬಿಎಂಟಿಸಿ ಬಸ್ ಗಳ ಸಂಚಾರ ಆರಂಭವಾಗಿದ್ದು, ಈ ಎರಡು ಸ್ಥಳಗಳಿಗೆ ನೈಸ್ ರೋಡ್ ಮೂಲಕವಾಗಿ ಬಿಎಂಟಿಸಿ ಬಸ್ ಗಳು ಸಂಚರಿಸಲಿದೆ‌. ಇಷ್ಟು ದಿನ ಬಿಎಂಟಿಸಿ ಬಸ್ ಗಳಿಲ್ಲದೇ ಟೆಂಪೋ, ಆಟೋ, ಲಾರಿ ಗಳಲ್ಲಿ ಸಂಚಾರ ಮಾಡ್ತಿದ್ದ ಜನರು, ಇದೀಗ  ಬಿಎಂಟಿಸಿ ಬಸ್ ನಲ್ಲಿ ಸಂಚಾರ ಮಾಡುವಂತ್ತಾಗಿದ್ರಿಂದ ಪ್ರಯಾಣಿಕರು ಫುಲ್ ಖುಷ್ ಆಗಿದ್ದಾರೆ.

ಈ ರೂಟ್ ನಲ್ಲಿ ಬಸ್ ಸೌಲಭ್ಯ ಒದಗಿಸುವಂತೆ ಇಲ್ಲಿಯ ಜನರು ಹಲವು ಬಾರಿ ಪತ್ರದ ಮೂಲಕ ಮನವಿ‌ ಮಾಡಿದ್ದರು. ಆದರೆ, ಇದೀಗ ಕೊನೆಗೂ ಕನಸು ನನಸಾಗಿದ್ದು, ಎಲೆಕ್ಟ್ರಾನಿಕ್ ಸಿಟಿ ಟು ಮಾದವಾರ ಭಾಗಕ್ಕೆ ಬಿಎಂಟಿಸಿ ಬಸ್ ಸೇವೆ ಶುರುವಾಗಿದೆ. ಬೆಳಗ್ಗೆ 6:40 ರಿಂದ ರಾತ್ರಿ 8 .3ವರೆಗೆ ಬಿಎಂಟಿಸಿ ಬಸ್ ಗಳ ಸೇವೆ ಇರಲಿದ್ದು, ಪ್ರಯಾಣಿಕರಿಂದಲೂ ಉತ್ತಮ ರೆಸ್ಪಾನ್ಸ್ ಬರ್ತಿದೆ ಅನ್ತಿದ್ದಾರೆ ನಿರ್ವಾಹಕರು.

ಇದನ್ನೂ ಓದಿ- ಬಡತನ-ದಾರಿದ್ರ್ಯ-ಅನಕ್ಷರತೆ ಹೋಗದೆ ಎಲ್ಲರಿಗೂ ಉತ್ತಮ ಆರೋಗ್ಯ ಸಿಗುವುದಿಲ್ಲ: ಸಿಎಂ ಸಿದ್ದರಾಮಯ್ಯ

ಒಟ್ಟಿನಲ್ಲಿ ಬಿಎಂಟಿಸಿ ಬಸ್ ಈ ರೂಟ್ ನಲ್ಲಿ ಸಂಚಾರ ಮಾಡ್ತಿರೋದು ಮುಖ್ಯವಾಗಿ ಮಹಿಳಾ ಪ್ರಯಾಣಿಕರಲ್ಲಿ ಖುಷಿ ಜೊತೆಗೆ ಭದ್ರತೆಯನ್ನ ಕೂಡ ಒದಗಿಸಿದೆ. ಇಷ್ಟು ದಿನ ರಾತ್ರಿ ಹೊತ್ತಲ್ಲಿ ಟೆಂಪೋಗಳಲ್ಲಿ ಪ್ರಯಾಣ ಮಾಡ್ತಿದ್ದಾಗ ಆಗ್ತಿದ್ದ ಭಯ, ಇದೀಗ ಹೆಣ್ಮಕ್ಕಳಲ್ಲಿ ದೂರವಾಗಿದ್ದು, ಪ್ರಯಾಣಿಕರಿಂದಲೂ ಭರ್ಜರಿ ರೆಸ್ಪಾನ್ಸ್ ಸಿಗ್ತಿದೆ‌.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News