Bengaluru Traffic: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾಸ್ಟರ್ ಫ್ಲಾನ್ ಮಾಡಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ನಿತ್ಯ ದೊಡ್ಡ ತಲೆಬಿಸಿ ಆಗಿರುವ ಟ್ರಾಫಿಕ್ ಜಂಜಾಟದಿಂದ ಜನರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸುರಂಗ ರಸ್ತೆ ನಿರ್ಮಿಸಲು ಡಿಸಿಎಂ ಮಾಸ್ಟರ್ ಫ್ಲಾನ್ ಮಾಡಿದ್ದಾರೆ. ಮೊದಲ ಹಂತದ ಯೋಜನೆಯಡಿ ಸುಮಾರು 50 ಕಿ.ಮೀ ರಸ್ತೆ ನಿರ್ಮಿಸಲು ಸುಮಾರು 22 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಹನ ದಟ್ಟಣೆ ನಿವಾರಣೆಗೆ ಸುರಂಗ ರಸ್ತೆಗಳ ನಿರ್ಮಾಣ ಸಂಬಂಧ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸುರಂಗ ರಸ್ತೆ ನಿರ್ಮಾಣ ಸಲಹಾ ಸಂಸ್ಥೆ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ರಾಜ್ಯಸಭೆ ಮಾಜಿ ಸದಸ್ಯ ರಾಜೀವ್ ಗೌಡ, ಬಿಬಿಎಂಪಿ ಸೇರಿದಂತೆ ನಾನಾ ಇಲಾಖೆಗಳ ನಿವೃತ್ತ ಮುಖ್ಯ ಎಂಜಿನಿಯರ್ ಗಳು ಉಪಸ್ಥಿತರಿದ್ದರು.
ಇದನ್ನೂ ಓದಿ- Vegetable Price: ತರಕಾರ ಬೆಲೆ ನೋಡಿ ಗ್ರಾಹಕರು ಸುಸ್ತೋ ಸುಸ್ತು
ಸಭೆಯಲ್ಲಿ ಸುರಂಗ ರಸ್ತೆ ನಿರ್ಮಾಣ ಸಲಹಾ ಸಂಸ್ಥೆ ಅಧಿಕಾರಿಗಳು, ರಾಷ್ಟ್ರೀಯ ಸಲಹಾ ಸಂಸ್ಥೆ ಪ್ರತಿನಿಧಿಗಳ ಸಲಹೆಯನ್ನ ಕೂಡ ಪಡೆದಿದ್ದಾರೆ.
ಬೆಂಗಳೂರಿನಲ್ಲಿ ಸಲಹಾ ಸಂಸ್ಥೆ ಅಧಿಕಾರಿಗಳ ಜತೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಭೆಯ ಮುಖ್ಯಾಂಶಗಳು:
>> ಬೆಂಗಳೂರಿಗೆ 100 ಕಿಮೀ ಸುರಂಗ ರಸ್ತೆಯ ಅಗತ್ಯವಿದೆ, ಮೊದಲ ಹಂತದಲ್ಲಿ 50 ಕಿಮೀ ನಿರ್ಮಾಣ
>> ಬೆಂಗಳೂರು ಕೇಂದ್ರದ ಸುತ್ತಲ ಹೊರವಲಯಗಳಿಗೆ ಸುರಂಗ ಸಂಪರ್ಕ ರಸ್ತೆಗಳು
>> ಮೊದಲ ಹಂತದಲ್ಲಿ 50 ಕಿಲೋಮೀಟರ್ ರಸ್ತೆ ನಿರ್ಮಾಣಕ್ಕೆ ಪ್ಲಾನ್
>> ಖಾಸಗಿ ಸಹಭಾಗಿತ್ಬದಲ್ಲಿ 22 ಸಾವಿರ ಕೋಟಿ ವೆಚ್ಚದ ಸುರಂಗ ರಸ್ತೆ ನಿರ್ಮಾಣಕ್ಕೆ ಪ್ಲಾನ್
>> ಎಲಿವೇಟೆಡ್ ಕಾರಿಡಾರ್ ಬದಲು ಸುರಂಗ ಕಾರಿಡಾರ್ ಮಾಡಲು ಡಿಕೆಶಿ ಪ್ಲಾನ್
>> ಫ್ಲೈಓವರ್ ಕಾರಿಡಾರ್ ನಿರ್ಮಿಸುವಾಗ ಜನರಿಗೆ ಕಿರಿಕಿರಿ, ಟ್ರಾಫಿಕ್ ಜಾಮ್
>> ಫ್ಲೈಓವರ್ ಕಾರಿಡಾರ್ ನಿರ್ಮಿಸಲು ಭೂಸ್ವಾದೀನ ಕೂಡ ಮಾಡಬೇಕು
>> ಸುರಂಗ ರಸ್ತೆಗೆ ಫ್ಲೈಓವರ್ ನಷ್ಟು ಭೂಸ್ವಾದೀನ ಬೇಕಿಲ್ಲ, ಟ್ರಾಫಿಕ್ ಕಿರಿಕಿರಿಯೂ ಕಡಿಮೆ
>> ಪಿಪಿಪಿ (ಪಬ್ಲಿಕ್ ಪ್ರೈವೇಟ್ ಪಾರ್ಟ್ನರ್ - ಖಾಸಗಿ ಸಹಭಾಗಿತ್ವ) ಅಥವಾ ಬಿಓಟಿ (ಬಿಲ್ಟ್ ಆಪರೇಟ್ ಟ್ರಾನ್ಸಫರ್ - ನಿರ್ಮಾಣ - ನಿರ್ವಹಣೆ) ಮಾದರಿಯಲ್ಲಿ ನಿರ್ಮಿಸಲು ಯೋಚನೆ
>> ಸುರಂಗ ರಸ್ತೆಗೆ ಟೋಲ್ ವಿಧಿಸಿ ನಿರ್ಮಿಸಿದವರ ಹಣ ವಾಪಸ್ ಗೆ ಯೋಚನೆ
>> ಭೂಸ್ವಾದೀನ ಮತ್ತು ವ್ಯವಸ್ಥೆಯ ಸಹಕಾರ ಮಾತ್ರ ಸರ್ಕಾರದ ಜವಾಬ್ದಾರಿ, ಹಣ ಸಂಪೂರ್ಣ ಖಾಸಗಿಯದು.
ಇದನ್ನೂ ಓದಿ- ಟೋಮ್ಯಾಟೊಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್
ಎಲ್ಲೆಲ್ಲಿ ಬರಲಿದೆ ಸುರಂಗ ರಸ್ತೆ...?
- ಉತ್ತರದಿಂದ ದಕ್ಷಿಣ ಕಾರಿಡಾರ್ - ಬಳ್ಳಾರಿ ರಸ್ತೆ ಟು ಹೊಸೂರು ರೋಡ್ - ಒಟ್ಟು 27 ಕಿ.ಮೀ - ಯಲಹಂಕ - ಮೇಖ್ರಿ ಸರ್ಕಲ್ ಮಾರ್ಗವಾಗಿ ಕೇಂದ್ರೀಯ ರೇಷ್ಮೆಮಂಡಳಿವರೆಗೆ.
- ಪೂರ್ವದಿಂದ ಪಶ್ಚಿಮ ಕಾರಿಡಾರ್ 1 - ಕೆ.ಆರ್ ಪುರದಿಂದ ಗೊರಗುಂಟೆ ಪಾಳ್ಯ - 29 ಕಿಮೀ - ಹಳೇ ಮದ್ರಾಸ್ ರಸ್ತೆ - ಐಟಿಪಿಎಲ್ - ವರ್ತುಲ ರಸ್ತೆ, ರಾಮಮೂರ್ತಿ ನಗರ ಕಡೆಯಿಂದ ಹೊರಗುಂಟೆ ಪಾಳ್ಯವರೆಗೆ
- ಪೂರ್ವದಿಂದ ಪಶ್ಚಿಮ ಕಾರಿಡಾರ್ 2 - ಓಲ್ಡ್ ಏರ್ ಪೋರ್ಟ್ ರೋಡ್ ನಿಂದ ಮೈಸೂರು ರಸ್ತೆ - 28.90 ಕಿಮೀ - ವರ್ತೂರು ಕೋಡಿಯಿಂದ ಜ್ಞಾನಭಾರತಿವರೆಗೂ.
- ಸಂಪರ್ಕ ಕಾರಿಡಾರ್ 1 - 4.5 ಕಿಮೀ - ಸೇಂಟ್ ಜಾನ್ ಆಸ್ಪತ್ರೆ ಜಂಕ್ಷನ್ ನಿಂದ ಅಗರವರೆಗು
- ಸಂಪರ್ಕ ಕಾರಿಡಾರ್ 2 - 2.8 ಕಿಮೀ - ಪೂರ್ವ ಪಶ್ಚಿಮ ಕಾರಿಡಾರ್ 1 ಮತ್ತು 2ಕ್ಕೂ ಸಂಪರ್ಕಿಸುವ ಸುರಂಗ
- ಸಂಪರ್ಕ ಕಾರಿಡಾರ್ 3 - 6.45 ಕಿಮೀ - ವೀಲರ್ಸ್ ರಸ್ತೆ ಜಂಕ್ಷನ್ ನಿಂದ ಹೊರವರ್ತುಲ ರಸ್ತೆಯ ಕಲ್ಯಾಣನಗರಕ್ಕೆ ಸಂಪರ್ಕ ಸುರಂಗ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=38l6m8543Vk
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.