ಗುಡುಗು-ಮಿಂಚಿನಿಂದ ಇಮ್ಮಡಿಗೊಂಡ ಶಾರದಾಂಬೆ ದೇಗುಲದ ಸೌಂದರ್ಯ

ಕಳೆದ ಎರಡು ದಿನಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ನಿನ್ನೆ ಮಳೆ ಆರಂಭಕ್ಕೂ ಮುನ್ನ ಆರಂಭವಾದ ಗುಡುಗು-ಸಿಡಿಲಿನ ಮಧ್ಯೆ ಶೃಂಗೇರಿ ಶಾರದಾಂಭೆ ದೇಗುಲದ ದೃಶ್ಯಕಾವ್ಯ ನೊಡುಗರ ಮನಸೊರೆಗೊಂಡಿದೆ. 

Written by - Yashaswini V | Last Updated : Apr 15, 2022, 02:42 PM IST
  • ಗುಡುಗು-ಮಿಂಚಿನ ಸಮ್ಮಿಲನದಿಂದ ಶೃಂಗೇರಿ ಶಾರದಾಂಬೆ ದೇಗುಲದ ಸುಂದರ ನೋಟ
  • ಗುಡುಗು-ಮಿಂಚಿನ ಸಮ್ಮಿಲನದಿಂದ ಶೃಂಗೇರಿ ಶಾರದಾಂಬೆ ದೇವಸ್ಥಾನದ ಸೊಬಗು ಇಮ್ಮಡಿಗೊಂಡಿದೆ
  • ಹಿಂದೆಂದೂ ಕಾಣದ ರೀತಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾಂಬೆ ದೇಗುಲದ ಸುಂದರ ನೋಟ ಕ್ಯಾಮರಾ ಕಣ್ಣಲ್ಲಿ ಸೆರೆ
ಗುಡುಗು-ಮಿಂಚಿನಿಂದ ಇಮ್ಮಡಿಗೊಂಡ ಶಾರದಾಂಬೆ ದೇಗುಲದ ಸೌಂದರ್ಯ title=
Sringeri sharadamba temple beautiful seenary

ಶೃಂಗೇರಿ: ಗುಡುಗು-ಮಿಂಚಿನ ಸಮ್ಮಿಲನದಿಂದ ಹಿಂದೆಂದೂ ಕಾಣದ ರೀತಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾಂಭೆ ದೇಗುಲದ ನಯನ ಮನೋಹರ ದೃಶ್ಯ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. 

ಕಳೆದ ಎರಡು ದಿನಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ನಿನ್ನೆ ಮಳೆ ಆರಂಭಕ್ಕೂ ಮುನ್ನ ಆರಂಭವಾದ ಗುಡುಗು-ಸಿಡಿಲಿನ ಮಧ್ಯೆ ಶೃಂಗೇರಿ ಶಾರದಾಂಭೆ ದೇಗುಲದ ದೃಶ್ಯಕಾವ್ಯ ನೊಡುಗರ ಮನಸೊರೆಗೊಂಡಿದ್ದು, ಶಾರದಾಂಭೆ ದರ್ಶನಕ್ಕೆ ಬಂದಿದ್ದ ಭಕ್ತರೊಬ್ಬರು ಈ ಅಪರೂಪದ ದೃಶ್ಯವನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. 

ಇದನ್ನೂ ಓದಿ- Astro Tips: ಬೇಸಿಗೆಯಲ್ಲಿ ಮಾಡುವ ಈ ದಾನಗಳು ನಿಮ್ಮನ್ನು ಶ್ರೀಮಂತರನ್ನಾಗಿಸುತ್ತೆ!

ಈ ದೃಶ್ಯ ನೋಡುಗರಿಗೆ ಶೃಂಗೇರಿ ಶಾರದಾಂಭೆ ದೇಗುಲದ ಆಕಾಶದ ಮೇಲ್ಭಾಗದಲ್ಲಿ ಮಿಂಚಿನಿಂದ ಕೃತಕವಾಗಿ ಅಲಂಕರಿಸಿದಂತಿದೆ. ಪ್ರಕೃತಿಯೇ ಮಿಂಚಿನಿಂದ ಶಾರದಾಂಭೆ ದೇಗುಲಕ್ಕೆ ಲೈಟಿಂಗ್ ಸೌಲಭ್ಯ ಕಲ್ಪಿಸಿದಂತೆ ಭಾಸವಾಗಿದೆ. 

ಇದನ್ನೂ ಓದಿ- Trigrahi Yog 2022: ಮೇಷ ರಾಶಿಯಲ್ಲಿ 'ತ್ರಿಗ್ರಾಹಿ ಯೋಗ', ಈ 3 ರಾಶಿಯವರಿಗೆ ಧನವೃದ್ಧಿ

ದೇಗುಲದ ಮೇಲ್ಭಾಗದಲ್ಲೇ ಮಿಂಚು ಸಂಭವಿಸಿದ್ದರಿಂದ ಕಲ್ಲುಗಳಿಂದಲೇ ನಿರ್ಮಾಣಗೊಂಡಿರೋ ಪುರಾತನ ಶಾರದಾಂಬೆ ದೇಗುಲದ ಸೌಂದರ್ಯ ಕೂಡ ಇಮ್ಮಡಿಗೊಂಡಿದೆ.

ಗುಡುಗು-ಮಿಂಚಿನ ಸಮ್ಮಿಲನದಿಂದ ಶಾರದಾಂಭೆ ದೇಗುಲದ ನಯನ ಮನೋಹರ ದೃಶ್ಯ ಇಲ್ಲಿದೆ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News