ಇಂದು ಬಿಬಿಎಂಪಿ ಮೇಯರ್ ಚುನಾವಣೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 51ನೇ ಮಹಾಪೌರರಾಗಿರುವ ಸಂಪತ್ ರಾಜ್ ಅವರ ಅಧಿಕಾರಾವಧಿ ಇಂದಿಗೆ ಮುಕ್ತಾಯಗೊಳ್ಳಲಿದೆ.

Last Updated : Sep 28, 2018, 09:50 AM IST
ಇಂದು ಬಿಬಿಎಂಪಿ ಮೇಯರ್ ಚುನಾವಣೆ title=

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 51ನೇ ಮಹಾಪೌರರಾಗಿರುವ ಸಂಪತ್ ರಾಜ್ ಅವರ ಅಧಿಕಾರಾವಧಿ ಇಂದಿಗೆ ಮುಕ್ತಾಯಗೊಳ್ಳಲಿದ್ದು,  52ನೇ ಮೇಯರ್, ಉಪಮೇಯರ್ ಆಯ್ಕೆಗೆ ಇಂದು (ಸೆ.28) ಚುನಾವಣೆ ನಡೆಯಲಿದೆ. 

ಪಾಲಿಕೆ ಸದಸ್ಯರು, ರಾಜ್ಯಸಭೆ, ಲೋಕಸಭೆ, ವಿಧಾನಪರಿಷತ್ ಮತ್ತು ವಿಧಾನಸಭೆಯ ಸದಸ್ಯರು ಸೇರಿ ಒಟ್ಟು 259 ಜನರಿಗೆ ಮತ ಚಲಾಯಿಸುವ ಹಕ್ಕಿದೆ. ಬೆಳಗ್ಗೆ 8ರಿಂದ 9.30ರವರೆಗೆ ನಾಮಪತ್ರ ಸಲ್ಲಿಕೆಯಾಗಲಿದ್ದು, 11.30ರ ನಂತರ ಮತದಾನ ಪ್ರಕ್ರಿಯೆ ನಡೆಯಲಿದೆ.

ಕ್ಕಪೇಟೆ ವಿಧಾನಸಭಾ ಕ್ಷೇತ್ರದ ಜಯನಗರ ವಾರ್ಡಿನಿಂದ ಎರಡನೇ ಬಾರಿಗೆ ಕಾರ್ಪೋರೇಟರ್ ಆಗಿರುವ ಗಂಗಾಂಬಿಕಾ ಮಲ್ಲಿಕಾರ್ಜುನ  ಮೇಯರ್ ಸ್ಥಾನದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ ಸಂಖ್ಯಾಬಲದ ಕೊರತೆಯಿಂದಾಗಿ ತನ್ನ ಅಭ್ಯರ್ಥಿ ಯಾರೆಂಬುದನ್ನು ಘೋಷಿಸಿಲ್ಲ. ಆದರೆ, ನಾಮಪತ್ರ ಸಲ್ಲಿಸುವವರೆಗೂ ತನ್ನ ಅಭ್ಯರ್ಥಿ ಹೆಸರನ್ನು ಬಹಿರಂಗಪಡಿಸದಿರಲು ನಿರ್ಧರಿಸಿದೆ.

ಈ ಮಧ್ಯೆ ಜೆಡಿಎಸ್ ಪಕ್ಷದಿಂದ ರಮಿಳಾ ಉಮಾಶಂಕರ್ ಅಥವಾ ಭದ್ರೇಗೌಡ  ಉಪಮೇಯರ್ ಆಗುವ ಸಾಧ್ಯತೆ ಇದೆ. ಇದು ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ತೀರ್ಮಾನಕ್ಕೆ ಬಿಟ್ಟ ವಿಚಾರವಾಗಿದೆ ಎಂದು ಶಾಸಕ ಗೋಪಾಲಯ್ಯ ತಿಳಿಸಿದ್ದಾರೆ.
 

ಪಕ್ಷಗಳ ಬಲಾಬಲ
  ಬಿಜೆಪಿ ಕಾಂಗ್ರೆಸ್ ಜೆಡಿಎಸ್
ಕಾರ್ಪೊರೇಟರ್​ಗಳು 100 75 15
ಎಂಎಲ್ಎಗಳು  11 15 02
ಎಂಎಲ್​ಸಿಗಳು 06 08 04
ಲೋಕಸಭಾ ಸದಸ್ಯರು 03 02 -
ರಾಜ್ಯಸಭಾ ಸದಸ್ಯರು 02 06 01
ಪಕ್ಷೇತರ ಎಂಎಲ್​ಸಿ   01 - -
       
ಒಟ್ಟು  123 106 22

 

Trending News