WATCH: ಬೆಂಗಳೂರಿನ ನಡು ರಸ್ತೆಯಲ್ಲೇ ವಿದ್ಯಾರ್ಥಿನಿಯರ ಮಾರಾಮಾರಿ

WATCH: ಬೆಂಗಳೂರಿನ ನಡು ರಸ್ತೆಯಲ್ಲೇ ವಿದ್ಯಾರ್ಥಿನಿಯರ ಮಾರಾಮಾರಿ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. 

Written by - VISHWANATH HARIHARA | Edited by - Chetana Devarmani | Last Updated : May 18, 2022, 01:47 PM IST
  • ಬೆಂಗಳೂರಿನ ನಡು ರಸ್ತೆಯಲ್ಲೇ ವಿದ್ಯಾರ್ಥಿನಿಯರ ಮಾರಾಮಾರಿ
  • ಮಾರಾಮಾರಿ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌
  • ಹೊಡೆದಾಟದ ಕಾರಣವೂ ಅಧಿಕೃತವಾಗಿ ತಿಳಿದುಬಂದಿಲ್ಲ
WATCH: ಬೆಂಗಳೂರಿನ ನಡು ರಸ್ತೆಯಲ್ಲೇ ವಿದ್ಯಾರ್ಥಿನಿಯರ ಮಾರಾಮಾರಿ  title=
ವೈರಲ್

ಬೆಂಗಳೂರು: ಹತ್ತಾರು ವಿದ್ಯಾರ್ಥಿಗಳು ಯೂನಿಫಾರ್ಮ್‌ ಧರಿಸಿಯೇ ಹೊಡೆದಾಡಿಕೊಂಡ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಬೆಂಗಳೂರಿನ ಶಾಲೆಯೊಂದರ ಮುಂದೆ ಬಾಲಕಿಯರ ಗುಂಪೊಂದು ಪರಸ್ಪರ ಹಲ್ಲೆ ಮಾಡುತ್ತಿರುವ ದೃಶ್ಯ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಘಟನೆ ಯಾವಾಗ ನಡೆದಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಹೊಡೆದಾಟದ ಕಾರಣವೂ ಅಧಿಕೃತವಾಗಿ ತಿಳಿದುಬಂದಿಲ್ಲ.

ಇದನ್ನೂ ಓದಿ: Video: ವಿದ್ಯುತ್ ಕಂಬ ಏರಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡ 21ರ ಯುವತಿ

ಜಗಳದಲ್ಲಿ ತೊಡಗಿದ್ದ ವಿದ್ಯಾರ್ಥಿಗಳ ಸಮವಸ್ತ್ರವನ್ನು ನೋಡಿ, ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಹೊಡೆದಾಟವು ಎರಡು ಶಾಲೆಗಳ ವಿದ್ಯಾರ್ಥಿಗಳ ನಡುವಿನ ಘರ್ಷಣೆಯಂತಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಪ್ರಸಿದ್ಧ ಬಿಷಪ್ ಕಾಟನ್ ಬಾಲಕಿಯರ ಶಾಲೆಯ ಸ್ಟೂಡೆಂಟ್ಸ್‌ ಕೂಡಾ ಈ ವೈರಲ್‌ ವಿಡಿಯೋದಲ್ಲಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಹುಡುಗಿಯರು ಒಬ್ಬರಿಗೊಬ್ಬರು ಕಪಾಳಮೋಕ್ಷ ಮಾಡುತ್ತಿರುವುದು ಮತ್ತು ಕೂದಲು ಎಳೆದುಕೊಳ್ಳುವುದನ್ನು ಕಾಣಬಹುದು. ಅಲ್ಲದೇ ಓರ್ವ ವಿದ್ಯಾರ್ಥಿನಿ ಇತರರನ್ನು ಹೊಡೆಯಲು ಕೋಲು ತೆಗೆದುಕೊಳ್ಳುವುದನ್ನು ಸಹ ಕಾಣಬಹುದು. ಕೆಲವು ಹುಡುಗರು ಕೂಡ ಸ್ಥಳದಲ್ಲಿ ಹಾಜರಿದ್ದರು. ಇದನ್ನು ಕಂಡ ಕೆಲ ಸಾರ್ವಜನಿಕರು ಜಗಳ ಬಿಡಿಸಲು ಪ್ರಯತ್ನಿಸುವ ದೃಶ್ಯ ಕೂಡ ಸೆರೆಯಾಗಿದೆ. 

ಇದನ್ನೂ ಓದಿ: Ration Card : ಪಡಿತರ ಚೀಟಿದಾರರೆ ತಕ್ಷಣ ಈ ಕೆಲಸ ಮಾಡಿ : ಇಲ್ಲದಿದ್ದರೆ ನಿಮಗೆ ಸಿಗಲ್ಲ ರೇಷನ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News