ಬೆಂಗಳೂರು: ಕೊರೋನಾ (Coronavirus) ಲಾಕ್ ಡೌನ್ (Lockdown) ಪರಿಸ್ಥಿತಿಯಲ್ಲಿ ದಿನವಿಡೀ ಆಶಾ ಕಾರ್ಯಕರ್ತೆಯರು ದುಡಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ನೆರವಿಗೆ ಬರಲು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯರಾದ ಡಿ.ಕೆ. ಸುರೇಶ್ (DK Suresh) ಅವರು ಮಾಡಿಕೊಂಡಿದ್ದ ಮನವಿ ಮೇರೆಗೆ ಬಮೂಲ್ ಸಂಸ್ಥೆ ತನ್ನ ವ್ಯಾಪ್ತಿಯಲ್ಲಿ ಬರುವ ಎಲ್ಲ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ನೀಡಲು ನಿರ್ಧರಿಸಿದೆ.
I thank President Narasimha Murthy, Managing Director & Board of Directors BAMUL, for coming forward to sponsor Rs 3000 for each 'Asha Karyakartas' of Bangalore Urban, Bangalore Rural & Ramanagara district which fall under BAMUL jurisdiction. pic.twitter.com/I8FiZHZNZ5
— DK Suresh (@DKSureshINC) April 15, 2020
ಸಂಸದ ಡಿ.ಕೆ. ಸುರೇಶ್ ಅವರು ದಿನಾಂಕ 09-04-2020 ರಂದು ಬಮುಲ್ BAMUL (ಬೆಂಗಳೂರು ಸಹಕಾರ ಹಾಲು ಒಕ್ಕೂಟ) ಸಂಸ್ಥೆಯ ಆಡಳಿತ ಮಂಡಳಿಗೆ ಪತ್ರ ಬರೆದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆ ಒಳಗೊಂಡಂತೆ ಬಮುಲ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ರೂ. 5,000 ಪ್ರೋತ್ಸಾಹ ಧನ ನೀಡಲು ಮನವಿ ಮಾಡಿದ್ದರು.
ದಿನಸಿ, ತರಕಾರಿ ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ ಕ್ರಮ ವಹಿಸಿ: ಸಚಿವ ಎಸ್.ಟಿ. ಸೋಮಶೇಖರ್
ಸಂಸದರು ಬರೆದ ಪತ್ರದ ಹಿನ್ನೆಲೆಯಲ್ಲಿ ಬಮುಲ್ ಸಂಸ್ಥೆಯು ನಿರ್ದೇಶಕರ ಸಭೆ ನಡೆಸಿ ಆಶಾ ಕಾರ್ಯಕರ್ತೆಯರಿಗೆ ರೂ.3,000 ಸಹಾಯ ಧನ ನೀಡುವ ನಿರ್ಣಯ ಕೈಗೊಂಡಿದೆ.
ಅಧಿಕ ಧರಕ್ಕೆ ಮಾಸ್ಕ್ ಹಾಗೂ ಸ್ಯಾನಿಟೇಜರ್ ಮಾರಾಟ: ದೂರು ದಾಖಲಿಸಿಕೊಂಡು ದಂಡ ವಸೂಲಿ
ತಮ್ಮ ಸಲಹೆಗಳನ್ನು ಪುರಸ್ಕರಿಸಿದ್ದಕ್ಕೆ ಬಮೂಲ್ ಸಂಸ್ಥೆ ಆಡಳಿತ ಮಂಡಳಿಗೆ ಸಂಸದ ಡಿ.ಕೆ. ಸುರೇಶ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಶ್ರಮವನ್ನು ಗುರುತಿಸಿ ಪ್ರೋತ್ಸಾಹ ಧನ ನೀಡಿದ ಬಮುಲ್ ಸಂಸ್ಥೆ ಕ್ರಮಕ್ಕೆ ಸಾರ್ವಜನಿಕ ವಲಯದಿಂದಲೂ ಪ್ರಶಂಸೆ ವ್ಯಕ್ತವಾಗಿದೆ.