ಬಳ್ಳಾರಿ: ನಾಳೆ ನಡೆಯಲಿರುವ 73ನೇ ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯ ರಾಜ್‍ಪತ್‍ನಲ್ಲಿ ನಡೆಯಲಿರುವ ಪರೇಡ್‍ನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬಳ್ಳಾರಿಯ ವಿದ್ಯಾರ್ಥಿನಿ ಆಯ್ಕೆಯಾಗಿದ್ದಾಳೆ. ಕರ್ನಾಟಕ ಮತ್ತು ಗೋವಾ NCC ವಿದ್ಯಾರ್ಥಿಗಳ ತಂಡ ಪ್ರತಿನಿಧಿಸಲು ಬಳ್ಳಾರಿಯ NCC ಜೂನಿಯರ್ ವಿಂಗ್ ವತಿಯಿಂದ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿನಿ ಅವನಿ ಗಂಗಾವತಿ ಸೆಲೆಕ್ಟ್ ಆಗಿದ್ದಾರೆ.
ಇದನ್ನೂ ಓದಿ: ರಾಜಪಥ್‍ನಲ್ಲಿ ಕರ್ನಾಟಕ ಸ್ತಬ್ಧ ಚಿತ್ರ: ನಾರಿಶಕ್ತಿಯನ್ನು ಸ್ಮರಿಸಿದ ಕೇಂದ್ರ ಸಚಿವ ಜೋಶಿ
ಬಳ್ಳಾರಿಯ ಕೇಂದ್ರೀಯ ವಿದ್ಯಾಲಯದಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಕುಮಾರಿ ಅವನಿ ಗಂಗಾವತಿ NCC ಜೊತೆಗೆ, ಭರತನಾಟ್ಯ ಕಲಾವಿದೆಯೂ ಆಗಿದ್ದಾರೆ. ಹಲವು ಕಡೆ ಭರತ ನಾಟ್ಯ ಪ್ರದರ್ಶನ ನೀಡಿ ಪ್ರಶಸ್ತಿ ಪಡೆದಿದ್ದಾರೆ. ಜೊತೆಗೆ ಶಾಲೆಯಲ್ಲಿ ಶಿಕ್ಷಕರ ಅಚ್ಚು ಮೆಚ್ಚಿನ ವಿದ್ಯಾರ್ಥಿನಿಯಾಗಿದ್ದಾಳೆ.
ದೆಹಲಿಯಲ್ಲಿ ನಡೆಯುವ 73ನೇ ಗಣರಾಜ್ಯೋತ್ಸವಕ್ಕೆ ಕಲ್ಚರಲ್ ಇವೆಂಟ್ಸ್ ಗಾಗಿ ಬಳ್ಳಾರಿ NCC ಗ್ರೂಪ್‍ನಿಂದ (ಅಂದರೆ ಬಳ್ಳಾರಿ, ಕಲಬುರ್ಗಿ, ಬಿಜಾಪುರ, ಗದಗ, ಬಾಗಲಕೋಟೆ, ದಾವಣಗೆರೆ, ಬೀದರ್, ರಾಯಚೂರು ಸೇರಿಸಿ ರೂಪಿಸಿರುವ ತಂಡ) ಆಯ್ಕೆಯಾದ (ಜ್ಯೂನಿಯರ್ ವಿಂಗ್) ಏಕೈಕ ವಿದ್ಯಾರ್ಥಿನಿಯಾಗಿದ್ದಾಳೆ.
ಇದನ್ನೂ ಓದಿ: ಮಲೆಮಹದೇಶ್ವರ ಬೆಟ್ಟ ಬಳಿ ಗುಜರಾತ್ ಪ್ರವಾಸಿಗರ ಬಸ್ ಪಲ್ಟಿ- 15ಕ್ಕೂ ಹೆಚ್ಚು ಮಂದಿಗೆ ಗಾಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.