ಉಡುಪಿ: ಕೇಂದ್ರ ಸರಕಾರ ಕಾರ್ಮಿಕರ ರಾಜ್ಯ ವಿಮಾ ನಿಗಮದ ಮೂಲಕ ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದಿದ್ದು, ವಿಮಾದಾರರಾಗಿ ನೋಂದಾಯಿತ ಕಾರ್ಮಿಕರು ಹಲವಾರು ಕಾರಣಗಳಿಂದ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾದಾಗ ಅವರಿಗೆ ನಿರುದ್ಯೋಗ ಅವಧಿಗೆ ನಗದು ಪರಿಹಾರ ನೀಡಲಾಗುತ್ತದೆ.
ಈ ಯೋಜನೆ ಜೂನ್ ಅಂತ್ಯದವರೆಗೆ ಚಾಲ್ತಿಯಲ್ಲಿ ಇರುತ್ತದೆ. ಕಾರ್ಮಿಕರ ರಾಜ್ಯ ವಿಮಾ ನಿಗಮದಲ್ಲಿ ನೋಂದಣಿಯಾದ ಕನಿಷ್ಟ 2 ವರ್ಷಗಳ ಅವಧಿಯಲ್ಲಿ ವಂತಿಗೆಯನ್ನು ಪಾವತಿಸಿ ನಿರುದ್ಯೋಗಿ(Unemployment)ಯಾದ ವಿಮಾದಾರ 2020 ರ ಮಾ.23 ರ ಪೂರ್ವದಲ್ಲಿ ನಿರುದ್ಯೋಗಿಯಾಗಿ ಆಗಿದ್ದಲ್ಲಿ ದಿನಗಳಿಕೆಯ ಶೇ. 25 ರಂತೆ ಗರಿಷ್ಠ 90 ದಿನಗಳ ನಿರುದ್ಯೋಗ ಪರಿಹಾರ ನೀಡಲಾಗುವುದು.
Basavaraj Bommai: ಪಂಚಮಸಾಲಿ ಮೀಸಲಾತಿ ಬಗ್ಗೆ ಮಹತ್ವದ ಮಾಹಿತಿ ನೀಡಿದ ಸಚಿವ ಬೊಮ್ಮಾಯಿ!
2020 ರ ಮಾ.24 ರಿಂದ ಡಿ. 31 ರ ಅವಧಿಯಲ್ಲಿ ನಿರುದ್ಯೋಗಿಯಾಗಿದ್ದಲ್ಲಿ ಶೇ. 50 ರಂತೆ ಗರಿಷ್ಠ 90 ದಿನಗಳ ನಿರುದ್ಯೋಗ ಪರಿಹಾರ ನೀಡಲಾಗುವುದು. ವಿಮಾ(Insurance)ದಾರರು www.esic.nic.in ವೆಬ್ಸೈಟ್ನಲ್ಲಿ ಅರ್ಜಿ ಸಲಿಸಬಹುದಾಗಿದೆ.
Corona Vaccination - 60 ದಿನಗಳಲ್ಲಿ 50 ಕೋಟಿ ಭಾರತೀಯರಿಗೆ ಲಸಿಕೆ ಹೇಗೆ ಸಾಧ್ಯ? ಇಲ್ಲಿದೆ Azim Premji Idea
ವಿಮಾದಾರರು ಸಲ್ಲಿಸಿದ ಅರ್ಜಿ(Application)ಯನ್ನು ಸ್ಥಳೀಯ ಇಎಸ್ಐ ಕಚೇರಿ ಸ್ವೀಕರಿಸಿ, ವಿಮಾದಾರ ನಿರುದ್ಯೋಗಿ ಎಂಬುದನ್ನು ಖಚಿತಪಡಿಸಿಕೊಂಡ ನಂತರದಲ್ಲಿ ಪರಿಹಾರ ವಿಮಾದಾರನ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ಉಡುಪಿ ಉಪವಿಭಾಗದ ಕಾರ್ಮಿಕ ಅಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Siddaramaiah: 'ಬಿಜೆಪಿಯವರು ಧರ್ಮದ ಹೆಸರಲ್ಲಿ ಸಮಾಜ ಒಡೆಯುವ ಅಲ್ಪಮಾನವರು'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.