ಏಳನೇ ವೇತನ ಆಯೋಗದ ವರದಿ ತಕ್ಷಣ ಜಾರಿಗೊಳಿಸಲು ಅಶೋಕ್ ಸಜ್ಜನ್ ಆಗ್ರಹ

Seventh Pay Commission: ಈಗ ಮುಖ್ಯ ಮಂತ್ರಿಗಳು ಈ ಕೂಡಲೇ ಏಳನೇ ವೇತನ ಆಯೋಗದ ವರದಿಯನ್ನು ತರಿಸಿಕೊಂಡು ಯಥಾವತ್ತಾಗಿ ಜಾರಿಗೊಳಿಸಬೇಕು, ವಿಳಂಬವಾದಲ್ಲಿ ಎರಡನೇ ಬಾರಿ ಶೇ, ಮೂವತ್ತು ಮಧ್ಯಂತರ ಪರಿಹಾರ ಘೋಷಿಸಬೇಕೆಂದು ಆಗ್ರಹಿಸಿದರು.

Written by - Yashaswini V | Last Updated : Nov 7, 2023, 02:38 PM IST
  • ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯು ಐದಾರು ವರ್ಷಗಳಲ್ಲಿ ಕೇವಲ ಎರಡು ಬಾರಿ ಮಾತ್ರ ನಡೆದಿದೆ.
  • ಈ ಬಾರಿ ವರ್ಗಾವಣೆ ಅಧಿನಿಯಮದ ಪ್ರಕಾರ ವಲಯ ವರ್ಗಾವಣೆ ಅಥವಾ ಕಡ್ಡಾಯ ವರ್ಗಾವಣೆ ಈ ಕೂಡಲೇ ಪ್ರಾರಂಭಿಸಬೇಕೆಂದು ಸಂಘದ ಗೌರವಾಧ್ಯಕ್ಷ ಎಲ್. ಆಯ್, ಲಕ್ಕಮ್ಮನವರ ಆಗ್ರಹಿಸಿದರು.
ಏಳನೇ ವೇತನ ಆಯೋಗದ ವರದಿ ತಕ್ಷಣ ಜಾರಿಗೊಳಿಸಲು ಅಶೋಕ್ ಸಜ್ಜನ್ ಆಗ್ರಹ title=

Seventh Pay Commission: ರಾಜ್ಯ ಸರ್ಕಾರಿ ನೌಕರರ ಏಳನೇ ವೇತನ ಆಯೋಗದ ವರದಿಯನ್ನು ತಕ್ಷಣವೇ ಜಾರಿಗೊಳಿಸುವಂತೆ ಅಶೋಕ್ ಸಜ್ಜನ್  ಆಗ್ರಹಿಸಿದ್ದಾರೆ. 

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಆಶೋಕ ಎಮ್, ಸಜ್ಜನ, ಈ ರಾಜ್ಯದ ಒಟ್ಟು ನೌಕರರಲ್ಲಿ ಶಿಕ್ಷಕರು ಶೇ.ಐವತ್ತಕ್ಕೂ ಹೆಚ್ಚು ಇದ್ದೇವೆ. ರಾಜ್ಯ ಸರ್ಕಾರಿ ನೌಕರರ ಏಳನೇ ವೇತನ ಆಯೋಗವು ರಚನೆಯಾಗಿ ಇದೇ ನವಂಬರ್ ಹತ್ತೊಂಭತ್ತಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿದೆ. ಈ ಹಿಂದೆ ಆರು ತಿಂಗಳೊಳಗಾಗಿ ಜಾರಿಯಾಗಬೇಕಾಗಿದ್ದ ವೇತನ ಆಯೋಗದ ವರದಿ ಅಂದಿನ ಮುಖ್ಯ ಮಂತ್ರಿಗಳು ನಾವೆಲ್ಲ ಹೋರಾಟಕ್ಕೆ ಇಳಿದ ಮೇಲೆ  ಶೇ.ಹದಿನೇಳು ಮಧ್ಯಂತರ ಪರಿಹಾರ ನೀಡಿದರು. ಆದರೆ,  ಈ ಮಧ್ಯ ಚುನಾವಣೆ ಬಂದಿದ್ದರಿಂದ ಅದು ಮತ್ತೆ ಆರು ತಿಂಗಳು ಮೇ ಐದರಂದು ಮುಂದೂಡಿದರು.

ಈಗ ಮುಖ್ಯ ಮಂತ್ರಿಗಳು ಈ ಕೂಡಲೇ ಏಳನೇ ವೇತನ ಆಯೋಗದ ವರದಿಯನ್ನು ತರಿಸಿಕೊಂಡು ಯಥಾವತ್ತಾಗಿ ಜಾರಿಗೊಳಿಸಬೇಕು, ವಿಳಂಬವಾದಲ್ಲಿ ಎರಡನೇ ಬಾರಿ ಶೇ, ಮೂವತ್ತು ಮಧ್ಯಂತರ ಪರಿಹಾರ ಘೋಷಿಸಬೇಕೆಂದು ಆಗ್ರಹಿಸಿದರು.

ಇದನ್ನೂ ಓದಿ- ಪಬ್ ಬಾರ್ ಹೋಟೆಲ್ ಗಳಿಗೆ ಬಿಬಿಎಂಪಿಯಿಂದ ಶೀಘ್ರದಲ್ಲೇ ಹೊಸ ಗೈಡ್ ಲೈನ್ಸ್

ಈ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್‌ .ಪಡಕ್ಷರಿಯವರು ಸರ್ಕಾರದ ಮನವೊಲಿಸಬೇಕು. ಇಲ್ಲವಾದಲ್ಲಿ ಮತ್ತೆ ಹೋರಾಟಕ್ಕೆ ಕರೆ ಕೊಡಬೇಕೆಂದು ಹೇಳಿದರು. 

ನವೆಂಬರ್ 5 ರಂದು ಹುಬ್ಬಳ್ಳಿ ಮಹಾನಗರದಲ್ಲಿ ಜರುಗಿದ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಕಾರ್ಯಕಾರಿ ಸಭೆಯಲ್ಲಿ ರಾಜ್ಯದ 31 ಜಿಲ್ಲೆಯ ಸಂಘದ ಪ್ರಮುಖರು ಹಾಗೂ ರಾಜ್ಯ ಸಂಘದ ಎಲ್ಲಾ ಹಂತದ ಪದಾಧಿಕಾರಿಗಳು ಪಾಲ್ಗೊಂಡು, ಮಹತ್ವದ ಏಳನೇ ವೇತನ ಜಾರಿಯಾಗಬೇಕು, ಹಳೆಯ ಪಿಂಚಣಿ ಜಾರಿಗೆಯಾಗಬೇಕು, ಅಲ್ಲದೇ ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ ವರ್ಗಾವಣೆ ಪ್ರತಿವರ್ಷ ಆಗಬೇಕು ಎಂದು ಹೇಳಿದರು.

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯು ಐದಾರು ವರ್ಷಗಳಲ್ಲಿ ಕೇವಲ ಎರಡು ಬಾರಿ ಮಾತ್ರ ನಡೆದಿದೆ ಈ ಬಾರಿ ವರ್ಗಾವಣೆ ಅಧಿನಿಯಮದ ಪ್ರಕಾರ ವಲಯ ವರ್ಗಾವಣೆ ಅಥವಾ ಕಡ್ಡಾಯ ವರ್ಗಾವಣೆ ಈ ಕೂಡಲೇ ಪ್ರಾರಂಭಿಸಬೇಕೆಂದು ಸಂಘದ ಗೌರವಾಧ್ಯಕ್ಷ ಎಲ್. ಆಯ್, ಲಕ್ಕಮ್ಮನವರ ಆಗ್ರಹಿಸಿದರು.

ಇದನ್ನೂ ಓದಿ- "ರಾಜ್ಯದ ಬಗ್ಗೆ ಟೀಕೆಗಳನ್ನು ಮಾಡುವುದು ಪ್ರಧಾನಮಂತ್ರಿಯವರಿಗೆ ಶೋಭೆ ತರುವಂಥದ್ದಲ್ಲ"

ವರ್ಷದಲ್ಲಿ ಎರಡು ಬಾರಿ ಶಿಕ್ಷಕರಿಗೆ ಸಹ ಶಿಕ್ಷಕರಿಂದ ಮುಖ್ಯ ಶಿಕ್ಷಕರ ಹುದ್ದೆಗೆ ಮುಖ್ಯ ಶಿಕ್ಷಕರ ಹುದ್ದೆಯಿಂದ ಹಿರಿಯ ಶಿಕ್ಷಕರ ಹುದ್ದೆಗೆ ಪದೋನ್ನತಿ ಪ್ರಕ್ರಿಯೆ ಕೂಡಲೇ ಪ್ರಾರಂಭಿಸಬೇಕು. ಮುಂಬಡ್ತಿ ಪಡೆಯದೇ ಅದೆಷ್ಟೋ ನಮ್ಮ ವೃತ್ತಿ ಬಾಂಧವರು ಹಾಗೆಯೇ ನಿವೃತ್ತಿಯಾಗುತ್ತಿರುವುದ ಬೇಸರದ ಸಂಗತಿಯಾಗಿದೆ ಮುಂದುವರೆದು ಈ ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಎಂಭತ್ತು ಸಾವಿರ ಪದವಿಧರ ಶಿಕ್ಷಕರಿದ್ದು ಅವರಿಗೆ ಒಂದರಿಂದ ಐದು ಮಾತ್ರ ಎಂದು ಪಿ.ಎಸ್.ಟಿ. ಅಂತ ಪರಿಗಣಿಸಿದ್ದಾರೆ. ಎಂಭತ್ತು ಸಾವಿರ ಪದವಿಧರ ಶಿಕ್ಷಕರನ್ನು ಸೇವಾ ಜೇಷ್ಠತೆಯೊಂದಿಗೆ ಆರರಿಂದ ಎಂಟಕ್ಕೆ ವಿಲೀನಗೊಳಿಸಬೇಕು. 

ಆರ್ಥಿಕ ಸೌಲಭ್ಯ ನೀಡಬೇಕು ಹಾಗೂ ಆರರಿಂದ ಎಂಟಕ್ಕೆ ಸುಯುತ್ತಿಗೊಳಿಸಬೇಕು, ಹೊಸ ಪಿಂಚ ಯೋಜನೆ ಕೈ ಬಿಟ್ಟು ಹೊಸ ಪಿಂಚಣಿ ಯೋಜನೆ ತಕ್ಷಣ ಜಾರಿಗೊಳಿಸಬೇಕು ಎಂದು ಸಂಘದ ಮಹಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ಆಗ್ರಹಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News