ಯುಗಾದಿ ಹಬ್ಬದ ಪ್ರಯುಕ್ತ ವಾಯುವ್ಯ ಸಾರಿಗೆಯಿಂದ ವಿಶೇಷ ಬಸ್ ಗಳ ವ್ಯವಸ್ಥೆ

ಯುಗಾದಿ ಹಬ್ಬದ ಹಿನ್ನೆಲೆ  ವಾಯುವ್ಯ ಸಾರಿಗೆ ವಿಶೇಷ ಬಸ್ ಗಳ ವ್ಯವಸ್ಥೆ ಮಾಡಿದೆ. 

Written by - Zee Kannada News Desk | Last Updated : Apr 4, 2024, 12:13 AM IST
  • ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಬ್ಬಕ್ಕೆ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿದೆ.
  • ಮುಸಲ್ಮಾನರ ರಂಜಾನ್ ಹಬ್ಬ ಕೂಡ ಇದೇ ಸಮಯದಲ್ಲಿ ಬಂದಿದ್ದು, ಒಟ್ಟಿಗೆ ಏಪ್ರಿಲ್ 6 ರಿಂದ 15 ರವರೆಗೆ ಸಿಗುವ ಸಾಧ್ಯತೆಗಳಿವೆ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದರು.
  • ಬೆಂಗಳೂರು, ಪುಣೆ, ಗೋವಾ ಮತ್ತಿತರ ಪ್ರಮುಖ ಸ್ಥಳಗಳಿಂದ ಹುಬ್ಬಳ್ಳಿಗೆ ಹೆಚ್ಚುವರಿ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
ಯುಗಾದಿ ಹಬ್ಬದ ಪ್ರಯುಕ್ತ ವಾಯುವ್ಯ ಸಾರಿಗೆಯಿಂದ ವಿಶೇಷ ಬಸ್ ಗಳ ವ್ಯವಸ್ಥೆ title=

ಯುಗಾದಿ ಹಬ್ಬದ ಹಿನ್ನೆಲೆ  ವಾಯುವ್ಯ ಸಾರಿಗೆ ವಿಶೇಷ ಬಸ್ ಗಳ ವ್ಯವಸ್ಥೆ ಮಾಡಿದೆ. 

ಇದನ್ನು ಓದಿ : Priyamani : ಮಿಂಚಿನ ಬಣ್ಣದ ಲೆಹಂಗಾದಲ್ಲಿ ಪ್ರಿಯಾಮಣಿ :ಫೋಟೋಸ್ ಇಲ್ಲಿದೆ

ಯುಗಾದಿ ಎಂಬುದು ಭಾರತೀಯರ ಪಾಲಿನ ಹೊಸ ವರ್ಷವಾಗಿದ್ದು, ಊರುಗಳಿಗೆ ತೆರಳುವವರಿಗೆ ಅನುಕೂಲವಾಲೆಂದು ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಬ್ಬಕ್ಕೆ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿದೆ.

 ಯುಗಾದಿ ಹಬ್ಬಕ್ಕೆ ಸಾಲು ಸಾಲು ರಜೆ ರಜೆಗಳು ಇವೆ. ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಹೆಚ್ಚುವರಿ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ.

 ಮುಸಲ್ಮಾನರ ರಂಜಾನ್ ಹಬ್ಬ ಕೂಡ ಇದೇ ಸಮಯದಲ್ಲಿ ಬಂದಿದ್ದು, ಒಟ್ಟಿಗೆ ಏಪ್ರಿಲ್ 6 ರಿಂದ 15 ರವರೆಗೆ ಸಿಗುವ ಸಾಧ್ಯತೆಗಳಿವೆ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದರು.

ಸರ್ಕಾರಿ, ಖಾಸಗಿ ಉದ್ಯೋಗಿಗಳು, ಉದ್ಯಮಿಗಳು ಹಬ್ಬದ ಆಚರಣೆಗಾಗಿ ಊರುಗಳಿಗೆ ಪ್ರಯಾಣ ಬೆಳೆಸಲಿದ್ದು, ಅವರ ಅನುಕೂಲಕ್ಕಾಗಿ ಏಪ್ರಿಲ್ 5ರಂದು ಶುಕ್ರವಾರ ದಿಂದ 7 ರವಿವಾರ ವವರೆಗೆ ಬೆಂಗಳೂರು, ಪುಣೆ, ಗೋವಾ ಮತ್ತಿತರ ಪ್ರಮುಖ ಸ್ಥಳಗಳಿಂದ ಹುಬ್ಬಳ್ಳಿಗೆ ಹೆಚ್ಚುವರಿ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

ಇದನ್ನು ಓದಿ : ವಿಜಯಪುರ :  ಕೊಳವೆ ಬಾವಿಗೆ ಬಿದ್ದ ಬಾಲಕ, ಚಾಲ್ತಿಯಲ್ಲಿರುವ ರಕ್ಷಣಾ ಕಾರ್ಯಾಚರಣೆ 

ಈ ಅವಧಿಯಲ್ಲಿ ಜಿಲ್ಲೆಯೊಳಗೆ ವಿವಿಧ ಸ್ಥಳಗಳು ಹಾಗೂ ಅಕ್ಕಪಕ್ಕದ ಜಿಲ್ಲೆಗಳ ನಡುವೆಯೂ ಸಹ ಪ್ರಯಾಣಿಕರ ಹೆಚ್ಚಳಕ್ಕೆ ತಕ್ಕಂತೆ ಹೆಚ್ಚುವರಿ ಬಸ್ಸುಗಳನ್ನು ಬಿಡಲಾಗುತ್ತದೆ , ಹೆಚ್ಚಿನ ಸೀಟುಗಳನ್ನು ಕಾಯ್ದಿರಿಸಿದರೆ ಏಕಮುಖ ಪ್ರಯಾಣಕ್ಕೆ ಶೇಕಡ 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ರವಿವಾರ, 9 ರಂದು ಮಂಗಳವಾರ ಚಾಂದ್ರಮಾನ ಯುಗಾದಿ, 11ರಂದು ಗುರುವಾರ ರಂಜಾನ್,13 ರಂದು ಎರಡನೇ ಶನಿವಾರ ಹಾಗೂ14 ರಂದು ರವಿವಾರ ಹೀಗೆ ಎಂಟು ದಿನಗಳ ಅವಧಿಯಲ್ಲಿ 5 ಸಾರ್ವಜನಿಕ ರಜೆಗಳು ಇವೆ ಎಂದು ರಾಮನಗೌಡರ ಮಾಹಿತಿ ನೀಡಿದರು ಮತ್ತು  https://www.ksrtc.in ಅಥವಾ KSRTC Mobile App ನಲ್ಲಿ ಟಿಕೆಟ್ ಕಾಯ್ದಿರಸಬಹುದಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News