Jog Falls: ಕೊರೊನಾ ಆತಂಕದ ನಡುವೆ 'ಜೋಗ' ಜಲಪಾತಕ್ಕೆ ಪ್ರವಾಸಿಗರ ದಂಡು

ವಾರಾಂತ್ಯ ಹಾಗೂ ಕ್ರಿಸ್ಮಸ್ ರಜೆ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದ್ದು, ಪ್ರವಾಸಿಗರಿಂದ ಜೋಗ ಜಲಪಾತ ತುಂಬಿ ತುಳುಕುತ್ತಿದೆ‌. ಶನಿವಾರದಿಂದ ಒಂದೇ ಸಮನೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.

Written by - Zee Kannada News Desk | Edited by - Yashaswini V | Last Updated : Dec 27, 2021, 11:30 AM IST
  • ಈಗಾಗಲೇ ಜೋಗ ಜಲಪಾತ ಸೇರಿದಂತೆ, ಸಾಗರ ಸುತ್ತಮುತ್ತಲಿನ ರೆಸಾರ್ಟ್ ಗಳು ಮತ್ತು ಹೋಟೆಲ್ ಗಳು ಪ್ರವಾಸಿಗರಿಂದ ಭರ್ತಿ
  • ಪ್ರವಾಸಿಗರ ವಾಹನಗಳಿಂದ ಟ್ರಾಫಿಕ್ ಜಾಮ್
  • ಟ್ರಾಫಿಕ್ ನಿಯಂತ್ರಣಕ್ಕೆ ಪೊಲೀಸರು ಹಾಗೂ ಹೋಂಗಾರ್ಡ್ಸ್ ಪರದಾಟ
Jog Falls: ಕೊರೊನಾ ಆತಂಕದ ನಡುವೆ 'ಜೋಗ' ಜಲಪಾತಕ್ಕೆ ಪ್ರವಾಸಿಗರ ದಂಡು title=
Jog Falls Tourism

ಶಿವಮೊಗ್ಗ: ಕೊರೊನಾ ರೂಪಾಂತರಿ 'ಒಮಿಕ್ರಾನ್' ಆತಂಕದ ನಡುವೆ ಜೋಗ ಜಲಪಾತಕ್ಕೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ವಾರಾಂತ್ಯ ಹಾಗೂ ಕ್ರಿಸ್ಮಸ್ ರಜೆ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದ್ದು, ಪ್ರವಾಸಿಗರಿಂದ ಜೋಗ ಜಲಪಾತ ತುಂಬಿ ತುಳುಕುತ್ತಿದೆ‌. ಶನಿವಾರದಿಂದ ಒಂದೇ ಸಮನೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಟ್ರಾಫಿಕ್ ಕಿರಿಕಿರಿ:
ಸಿಗಂದೂರು, ವರದಹಳ್ಳಿಗೆ ಭೇಟಿಕೊಟ್ಟು ಜೋಗದ ಅಂದ ಸವಿಯಲು ಪ್ರವಾಸಿಗರು (Tourists) ಬರುತ್ತಿದ್ದಾರೆ. ಪ್ರವಾಸಿಗರ ವಾಹನಗಳಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ‌. ಟ್ರಾಫಿಕ್ ನಿಯಂತ್ರಣಕ್ಕೆ ಪೊಲೀಸರು ಹಾಗೂ ಹೋಂಗಾರ್ಡ್ಸ್ ಪರದಾಡುತ್ತಿದ್ದದ್ದು ಕಂಡು ಬಂದಿದೆ.

ಇದನ್ನೂ ಓದಿ-  ತಿರುಪತಿ ಭಕ್ತರಿಗೆ ಮಹತ್ವದ ಮಾಹಿತಿ, ಇಂದಿನಿಂದ ಸರ್ವದರ್ಶನ ಟಿಕೆಟ್ ಬಿಡುಗಡೆ

ಈಗಾಗಲೇ ಜೋಗ ಜಲಪಾತ (Jog Falls) ಸೇರಿದಂತೆ, ಸಾಗರ ಸುತ್ತಮುತ್ತಲಿನ ರೆಸಾರ್ಟ್ ಗಳು ಮತ್ತು ಹೋಟೆಲ್ ಗಳು ಪ್ರವಾಸಿಗರಿಂದ ಭರ್ತಿಯಾಗಿವೆ. ಈ ವರ್ಷದ ಕೊನೆಯವರೆಗೂ ಇದೇ ರೀತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ‌ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ-  ಮಿಮ್ಸ್ ನ 9 ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಕರೋನಾ ಸೋಂಕು..!

ಪ್ರವಾಸಿಗರ ಆಕ್ರೋಶ:
ಇಷ್ಟೆಲ್ಲದರ ನಡುವೆ ಜೋಗ ಜಲಪಾತದ ಬಳಿ ತೆರಳುವ ಪ್ರವೇಶ ದ್ವಾರ ಮುಚ್ಚಿದ್ದಕ್ಕೆ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ‌. ಜಲಪಾತದ ವೈಭವವನ್ನು ಸಮೀಪದಿಂದ ಕಣ್ಣು ತುಂಬಿಕೊಳ್ಳಲು ಅವಕಾಶ ನೀಡದಿರುವುದಕ್ಕೆ ಪ್ರವಾಸಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆದೆ. ಪ್ರವೇಶ ಶುಲ್ಕ ಪಡೆದಿದ್ದರೂ  ಫಾಲ್ಸ್ ಗೆ ತೆರಳುವ ಮೆಟ್ಟಿಲುಗಳ ಆರಂಭದ ಗೇಟ್ ಗೆ ಬೀಗ ಹಾಕಲಾಗಿದ್ದು, ಬೀಗ ತೆರವು ಮಾಡುವಂತೆ ಪ್ರವಾಸಿಗರು ಆಗ್ರಹಿಸುತ್ತಿದ್ದಾರೆ‌‌.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News