4.5 ಲಕ್ಷ ರೂ ಹೋಟೆಲ್ ಬಿಲ್ ಪಾವತಿಸದಿರುವ ಆರೋಪ ಅಲ್ಲಗಳೆದ ನಟಿ ಪೂಜಾ ಗಾಂಧಿ

ಮುಂಗಾರು ಮಳೆ ಹುಡುಗಿ ಪೂಜಾ ಗಾಂಧಿ ಈಗ ಬೆಂಗಳೂರಿನ ಲಕ್ಸುರಿ ಹೋಟೆಲ್ ವೊಂದರ 4.5 ಲಕ್ಷ ರೂ ಬಿಲ್ ನ್ನು ಪಾವತಿಸದೆ ಹೋಟೆಲ್ ನಿಂದ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಕೆಲವು ದಿನಗಳ ಕಾಲ ಹೋಟೆಲ್ ನಲ್ಲಿ ಉಳಿದುಕೊಂಡಿದ್ದ ಪೂಜಾ ಗಾಂಧಿ,ಯಾವಾಗ ತಮ್ಮ ಬಿಲ್ 4.5 ಲಕ್ಷ ಎಂದು ತಿಳಿಯಿತು, ಆಗ ಹಣವನ್ನು ಪಾವತಿಸದೇ ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

Last Updated : Mar 19, 2019, 06:03 PM IST
4.5 ಲಕ್ಷ ರೂ ಹೋಟೆಲ್ ಬಿಲ್ ಪಾವತಿಸದಿರುವ ಆರೋಪ ಅಲ್ಲಗಳೆದ ನಟಿ ಪೂಜಾ ಗಾಂಧಿ  title=
Photo courtesy: Facebook

ಬೆಂಗಳೂರು: ಮುಂಗಾರು ಮಳೆ ಹುಡುಗಿ ಪೂಜಾ ಗಾಂಧಿ ಈಗ ಬೆಂಗಳೂರಿನ ಲಕ್ಸುರಿ ಹೋಟೆಲ್ ವೊಂದರ 4.5 ಲಕ್ಷ ರೂ ಬಿಲ್ ನ್ನು ಪಾವತಿಸದೆ ಹೋಟೆಲ್ ನಿಂದ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಕೆಲವು ದಿನಗಳ ಕಾಲ ಹೋಟೆಲ್ ನಲ್ಲಿ ಉಳಿದುಕೊಂಡಿದ್ದ ಪೂಜಾ ಗಾಂಧಿ,ಯಾವಾಗ ತಮ್ಮ ಬಿಲ್ 4.5 ಲಕ್ಷ ಎಂದು ತಿಳಿಯಿತು, ಆಗ ಹಣವನ್ನು ಪಾವತಿಸದೇ ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಇದನ್ನು ತಿಳಿದ ಹೋಟಲ್ ಸಿಬ್ಬಂಧಿ ಹತ್ತಿರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿಕೊಂಡಿದ್ದಾರೆ. ನಂತರ ವಿಚಾರಣೆ ಕರೆದ ಪೊಲೀಸರ ಬಳಿಯೇ 2 ಲಕ್ಷ ರೂವನ್ನು ಪಾವತಿಸಿ ಉಳಿದ ಹಣವನ್ನು ಪಾವತಿಸಲು ಹೋಟೆಲ್ ಸಿಬ್ಬಂಧಿಗೆ ಪೂಜಾ ಗಾಂಧಿ ಕಾಲಾವಕಾಶವನ್ನು ಕೋರಿದ್ದಾರೆ. ಆದರೆ ಈ ವಿಚಾರವಾಗಿ ಹೊಟೆಲ್ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಿದೆ ಎನ್ನಲಾಗಿದೆ. ಅಚ್ಚರಿ ಎಂದರೆ ಈ ವಂಚನೆ ಪ್ರಕರಣದಲ್ಲಿ ಪೂಜಾ ಗಾಂಧಿಯವರ ಜೊತೆ ರಾಜಕಾರಣಿಯೊಬ್ಬರ ಹೆಸರು ಕೂಡ ತಳುಕು ಹಾಕಿಕೊಂಡಿದೆ ಎನ್ನಲಾಗಿದೆ.ಈಗ ಪೊಲೀಸರು ಈ ಘಟನೆಯ ವಿಚಾರವಾಗಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ. 

ಆರೋಪ ಅಲ್ಲಗಳೆದ ನಟಿ ಪೂಜಾ ಗಾಂಧಿ 

ಆದರೆ ಇನ್ನೊಂದೆಡೆ ಹೋಟೆಲ್ ಹಣ ಪಾವತಿಸದಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ಪೂಜಾ ಗಾಂಧಿ " ಸಿನಿಮಾ ಚಿತ್ರೀಕರಣದ ವಿಚಾರವಾಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದು ನಿಜ, ಬಾಕಿ ಉಳಿಸಿಕೊಂಡಿರುವ ವಿಚಾರವಾಗಿ ಮೂರನೇ ವ್ಯಕ್ತಿ ಪೊಲೀಸರಿಗೆ ದೂರು ನೀಡಿ ಆರೋಪ ಮಾಡಿರುವ ವಿಚಾರಕ್ಕೆ ಮತ್ತು ತಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು. 

Trending News