WATCH: ಒಂದೇ ಓವರ್ ನಲ್ಲಿ W,W,W,W,wd,1,W ಮೂಲಕ ವಿಶ್ವದಾಖಲೆ ನಿರ್ಮಿಸಿದ ಕನ್ನಡಿಗ..!

ಅಭಿಮನ್ಯು ಮಿಥುನ್ ಶುಕ್ರವಾರ ಟಿ 20 ಪಂದ್ಯದಲ್ಲಿ ಓವರ್‌ನಲ್ಲಿ ಐದು ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕರ್ನಾಟಕ ಪರ ಮಿಥುನ್ ಹರಿಯಾಣ ವಿರುದ್ಧದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಹ್ಯಾಟ್ರಿಕ್ ಸೇರಿದಂತೆ ಓವರ್‌ನಲ್ಲಿ ಐದು ವಿಕೆಟ್ ಪಡೆದರು.

Last Updated : Nov 29, 2019, 08:34 PM IST
WATCH: ಒಂದೇ ಓವರ್ ನಲ್ಲಿ  W,W,W,W,wd,1,W ಮೂಲಕ ವಿಶ್ವದಾಖಲೆ ನಿರ್ಮಿಸಿದ ಕನ್ನಡಿಗ..! title=
Photo courtesy: Twitter (BCCI)

ನವದೆಹಲಿ: ಅಭಿಮನ್ಯು ಮಿಥುನ್ ಶುಕ್ರವಾರ ಟಿ 20 ಪಂದ್ಯದಲ್ಲಿ ಓವರ್‌ನಲ್ಲಿ ಐದು ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕರ್ನಾಟಕ ಪರ ಮಿಥುನ್ ಹರಿಯಾಣ ವಿರುದ್ಧದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಹ್ಯಾಟ್ರಿಕ್ ಸೇರಿದಂತೆ ಓವರ್‌ನಲ್ಲಿ ಐದು ವಿಕೆಟ್ ಪಡೆದರು.

ಶ್ರೀಲಂಕಾದ ಲಸಿತ್ ಮಾಲಿಂಗ ನಂತರ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಕಬಳಿಸಿದ ಟಿ 20 ಯಲ್ಲಿ ಮಿಥುನ್ ಏಕೈಕ ಬೌಲರ್ ಆಗಿದ್ದಾರೆ. ಶ್ರೀಲಂಕಾದ ಮಾಲಿಂಗ್ ಈ ವರ್ಷ ನ್ಯೂಜಿಲೆಂಡ್ ವಿರುದ್ಧದ ಟಿ 20 ಐ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು.

19 ಓವರ್‌ಗಳಲ್ಲಿ 3 ವಿಕೆಟ್‌ಗೆ 192 ರನ್‌ಗಳಿಸಿ, ಹರಿಯಾಣ ಒಟ್ಟು 200 ಕ್ಕಿಂತ ಹೆಚ್ಚಿನದನ್ನು ದಾಖಲಿಸಲು ಮುಂದಾಯಿತು ಆದರೆ ಮಿಥುನ್‌ರ  ಬೌಲಿಂಗ್ ನಿಂದ ಅವರು ಹರ್ಯಾಣ 8 ಕ್ಕೆ 194 ಕ್ಕೆ ಗಳಿಸಿತು. ಮಿಥುನ್ ಕೊನೆಯ ಓವರ್‌ನಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದರು ಮತ್ತು ಕೇವಲ ವೈಡ್ ಸೇರಿ 2 ರನ್‌ಗಳನ್ನು ನೀಡಿದರು. 

ಆರಂಭದಲ್ಲಿ ಮಿಥುನ್ ತಮ್ಮ 3 ಓವರ್‌ಗಳಲ್ಲಿ 37 ರನ್ ನೀಡಿದ್ದರು. ಆದರೆ ಅಂತಿಮ ಓವರ್ ನಂತರ ಅವರ ಅಂಕಿ ಅಂಶ 39 ಕ್ಕೆ 5 ಆಗಿತ್ತು. ಇದುವರೆಗೆ ನಾಲ್ಕು ಟೆಸ್ಟ್ ಮತ್ತು ಐದು ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.ತಮಿಳುನಾಡು ವಿರುದ್ಧದ ವಿಜಯ್ ಹಜಾರೆ ಟ್ರೋಫಿ ಫೈನಲ್‌ನಲ್ಲಿ ಮಿಥುನ್ ಹ್ಯಾಟ್ರಿಕ್ ಕೂಡ ಪಡೆಯುವ ಮೂಲಕ ಕರ್ನಾಟಕ ಟ್ರೋಫಿಯನ್ನು ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

Trending News