Karnataka Crime : ಕದಿಯಲು ಬಂದು ಮನೆ ಮಾಲೀಕನ ಕೈಗೆ ರೆಡ್ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಕಳ್ಳ!

ಮಾಲೀಕ ಕಳ್ಳನನ್ನ ಥಳಿಸಿದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

Written by - Channabasava A Kashinakunti | Last Updated : Dec 18, 2021, 12:02 PM IST
  • ಮನೆಗೆ ಕದಿಯಲು ನುಗ್ಗಿದ್ದ ಖದೀಮ
  • ಖದೀಮನನ್ನು ಹಿಡಿದು ತಳಿಸಿದ ಮನೆ ಮಾಲೀಕ
  • ಮಾಲೀಕ ಕಳ್ಳನನ್ನ ಥಳಿಸಿದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ
Karnataka Crime : ಕದಿಯಲು ಬಂದು ಮನೆ ಮಾಲೀಕನ ಕೈಗೆ ರೆಡ್ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಕಳ್ಳ! title=

ರಾಮನಗರ : ಮನೆಗೆ ಕದಿಯಲು ನುಗ್ಗಿದ್ದ ಖದೀಮನನ್ನು ಮಾಲೀಕ ಹಿಡಿದು ತಳಿಸಿದ ಘಟನೆ ಶಾಂತಿನಗರದಲ್ಲಿ ನಡೆದಿದೆ. ಮಾಲೀಕ ಕಳ್ಳನನ್ನ ಥಳಿಸಿದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಸತೀಶ್ ಕುಮಾರ್ ಎಂಬುವವರ ಮನೆಗೆ ಕಳ್ಳ(Thief) ಕಳ್ಳತನ ಮಾಡಲು ಒಳಗೆ ನುಗ್ಗಿ ಬಂದಿದ್ದ. ಮನೆ ಮಾಲೀಕ ಸತೀಶ್ ಕುಮಾರ್ ಹಾಗೂ ಅವರ ತಂದೆ ಚಂದ್ರಶೇಖರಯ್ಯ ಇಬ್ಬರು ಕಳ್ಳನನ್ನು ಹಿಡಿದಿದ್ದಾರೆ. ಆದ್ರೆ ಕಳ್ಳ ಮನೆಯಲ್ಲಿ ಯಾರು ಇಲ್ಲವೆಂದು ಮನೆಗೆ ನುಗ್ಗಿದ್ದ. ನಂತರ ಮನೆಯಲ್ಲಿದ್ದ ಗಂಡಸರನ್ನ ಕಂಡು ಬೆಚ್ಚಿಬಿದ್ದು ಪರಾರಿಯಾಗಲು ಯತ್ನಿಸಿದ. ಅಷ್ಟರಲ್ಲೇ ಮನೆಯವರ ಚೀರಾಟ ಕೇಳಿ ನೆರವಿಗೆ ಸ್ಥಳೀಯರು ಧಾವಿಸಿದರು. 

ಇದನ್ನೂ ಓದಿ : Bangalore Crime : ಹಣಕ್ಕಾಗಿ ಪ್ರೇಯಸಿಯನ್ನೇ ಕೊಂದ ಪ್ರಿಯಕರ‌‌‌‌!

ಸ್ಥಳೀಯರಿಂದಲೂ ಕೂಡ ಕಳ್ಳನಿಗೆ ಧರ್ಮದೇಟು ನೀಡಿದ್ದಾರೆ. ಕಳ್ಳನ ಚಲನವಲನ ಸಿಸಿಟಿವಿ(CCTv)ಯಲ್ಲಿ ಸೆರೆಯಾಗಿದೆ.

ಸಧ್ಯ ಸ್ಥಳೀಯರು ಕಳ್ಳನನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ. ಐಜೂರು ಪೊಲೀಸ್ ಠಾಣೆ(Ijuru Police Station)ಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News