ಬೆಂಗಳೂರು: ಇಲ್ಲಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿರುವ ಪ್ರಯೋಗಾಲದಯಲ್ಲಿ ಹೈಡ್ರೋಜನ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ವಿಜ್ಞಾನಿಯೊಬ್ಬರು ಮೃತಪಟ್ಟಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ.
ಬುಧವಾರ ‘ಹೈಡ್ರೋಸಾನಿಕ್ ಮತ್ತು ಶಾಕ್ ವೇವ್ ಫಾರ್ ಹೈಪರ್ಸಾನಿಕ್ ಲ್ಯಾಬ್ನಲ್ಲಿ’ ಪ್ರಯೋಗ ನಡೆಯುವಾಗಲೇ ದುರ್ಘಟನೆ ಸಂಭವಿಸಿದೆ. ಹೈಡ್ರೋಜನ್ ಗ್ಯಾಸ್ ಸಿಲಿಂಡರ್ ಸ್ಫೋಟದಿಂದಾಗಿ ವಿಜ್ಞಾನಿ ಮನೋಜ್ ಕುಮಾರ್ ಮೃತಪಟ್ಟಿದ್ದಾರೆ. ಉಳಿದಂತೆ ಕಾರ್ತಿಕ್, ನರೇಶ್, ಅತುಲ್ಯಾ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದಾಶಿವ ನಗರ ಪೊಲೀಸರು ಘಟನೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
Sadashivanagar police: One scientist has died, three others critically injured following a suspected hydrogen cylinder explosion at aerospace lab at Indian Institute of Science, Bengaluru. More details awaited. #Karnataka pic.twitter.com/uOlaN9GUPb
— ANI (@ANI) December 5, 2018
ಘಟನೆ ಸಂಬಂಧ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.