ಅಮ್ಮನ ಶವ ಮನೆಯಲ್ಲಿದ್ದರೂ ಪರೀಕ್ಷೆ ಬರೆದ ಮಾದರಿ ವಿದ್ಯಾರ್ಥಿನಿ

ಯಾವುದೇ ಸಾಧನೆಗೆ ಗುರಿ ಎಂಬುದು ಬಹಳ ಮುಖ್ಯ. ಪರಿಸ್ಥಿತಿ ಎಂತಹದ್ದೇ ಆಗಿದ್ದರು ನಿರ್ದಿಷ್ಟ ಗುರಿಯತ್ತ ಗಮನಹರಿಸಬೇಕು ಎಂದು ಹೇಳುವುದನ್ನು ನಾವು ಕೇಳಿಯೇ ಇರುತ್ತೇವೆ. ಇದಕ್ಕೆ ಉತ್ತಮ ನಿದರ್ಶನ ಈ ವಿದ್ಯಾರ್ಥಿನಿ.

Written by - Yashaswini V | Last Updated : Jul 13, 2022, 11:09 AM IST
  • ಶಾಂತಪುರದ ನಾಗರಾಜ್ ಮತ್ತು ಅನುರಾಧ ದಂಪತಿ ಪುತ್ರಿ ಸ್ಫೂರ್ತಿ
  • ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.90ರಷ್ಟು ಅಂಕ ಪಡೆದಿರುವ ಸ್ಫೂರ್ತಿ
  • ಬಿಎಸ್ಸಿ ಕೃಷಿ ಪದವಿ ಮಾಡುವ ಇಚ್ಚೆ ಹೊಂದಿರುವ ಸ್ಫೂರ್ತಿ
ಅಮ್ಮನ ಶವ ಮನೆಯಲ್ಲಿದ್ದರೂ ಪರೀಕ್ಷೆ ಬರೆದ ಮಾದರಿ ವಿದ್ಯಾರ್ಥಿನಿ   title=
Inspirational student

ಶಿವಮೊಗ್ಗ:  ಹೆತ್ತವ್ವ ಹಠಾತ್ ನಿಧನರಾಗಿದ್ದಾರೆ. ಇಡೀ ಮನೆಯೇ ಶೋಕ ಸಾಗರದಲ್ಲಿ ಮುಳುಗಿದೆ. ಮನೆಯಲ್ಲಿ ಬಂಧು ಬಾಂದವರು ನೆರೆದಿದ್ದಾರೆ. ಶವಸಂಸ್ಕಾರಕ್ಕೆ ಸಿದ್ಧತೆ ನಡೆಯುತ್ತಿರುವಾಗಲೇ ಕರುಳ ಕುಡಿಯಾದ ಮಗಳು ನಾನು ಪರೀಕ್ಷೆ ಬರೆದು ಬರುವೆ ಆ ನಂತರ ಅಮ್ಮನ ಶವಸಂಸ್ಕಾರ ಮಾಡಿ ಎಂದು ಕಣ್ಣೀರು ಹಾಕುತ್ತಾಳೆ. ಮಗಳ ಇಚ್ಚೆಯಂತೆ ಕುಟುಂಬದವರು ಆಕೆಯನ್ನು ಪರೀಕ್ಷೆಗೆ ಕಳಿಸುತ್ತಾರೆ...  ಇದು ಯಾವುದೋ ಒಂದು ಕಥೆಯಲ್ಲಿ ಸತ್ಯ ಸಂಗತಿ. ಇದು ಸ್ಫೂರ್ತಿ ಎಂಬ ವಿದ್ಯಾರ್ಥಿನಿಯ ಮಾದರಿ ನಡೆ.

ಹೊಸನಗರ ತಾಲೂಕು ಕೋಡೂರು ಸಮೀಪದ ಶಾಂತಪುರದ ಅನುರಾಧ ಎಂಬ ಮಹಿಳೆ ತೀವ್ರ ರಕ್ತದೊತ್ತಡದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಸೋಮವಾರ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ಕರೆತರಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ. ಮನೆಗೆ ಅಮ್ಮನ ಶವ ತರಲಾಯಿತು. ಮಂಗಳವಾರ ಬೆಳಗ್ಗೆ ಮಗಳು ಸ್ಫೂರ್ತಿಗೆ ಬಿಎಸ್ಸಿ ಕೃಷಿ ಪದವಿಗೆ ಕೃಷಿಕೋಟಾದಲ್ಲಿ ಪ್ರವೇಶ ಪಡೆಯಲು ಪ್ರಾಯೋಗಿಕ ಪರೀಕ್ಷೆ ಇತ್ತು. 

ಇದನ್ನೂ ಓದಿ- Honeytrap: ಹನಿಟ್ರ್ಯಾಪ್ ಮಾಡಿ ನಂತರ ಸಿಬಿಐ ಹೆಸರಲ್ಲಿ ಲಕ್ಷ ಲಕ್ಷ ವಂಚನೆ

ಈ ಕಠಿಣ ಸಂದರ್ಭದಲ್ಲಿಯೂ ಅಮ್ಮನ ಶವ ಮನೆಯಲ್ಲಿದ್ದರೂ ಮಗಳು ಪರೀಕ್ಷೆ ಬರೆಯುತ್ತೇನೆ ಎಂದು ಹೇಳುತ್ತಾಳೆ. ಇದಕ್ಕೆ ಕುಟುಂಬದವರೂ ಸಾಥ್ ನೀಡಿದ್ದಾರೆ.  ಶಿವಮೊಗ್ಗದ ಕೃಷಿ ಕಾಲೇಜಿನಲ್ಲಿ ಬೆಳಗ್ಗೆ 9 ಗಂಟೆಗೆ ಪರೀಕ್ಷೆಗೆ ಬಂದ ಯುವತಿ ಪರೀಕ್ಷೆ ಮುಗಿಸಿ ಮನೆಗೆ ಹೋದ ಮೇಲೆ ಅಮ್ಮನ ಶವಸಂಸ್ಕಾರ ನೆರವೇರಿಸಲಾಗಿದೆ.

ಸಹಪಾಠಿಗಳ ಮೂಲಕ ಅಮ್ಮನ ಶವ ಮನೆಯಲ್ಲಿದ್ದರೂ, ಪರೀಕ್ಷೆಗೆ ಬಂದಿದ್ದ ಸ್ಫೂರ್ತಿಯ ವಿಚಾರ ತಿಳಿಯುತ್ತಿದ್ದಂತೆ ಎಲ್ಲರಿಂದ ಆಕೆಗೆ ಮೆಚ್ಚುಗೆ ಮತ್ತು ಸಾಂತ್ವನದ ಮಾತುಗಳು ಕೇಳಿ ಬಂದವು.

ಇದನ್ನೂ ಓದಿ- ರಾಜ್ಯದ 541 ಪಿಯು ಕಾಲೇಜಲ್ಲಿ 3 ವರ್ಷದಿಂದ ವಿದ್ಯಾರ್ಥಿಗಳೇ ಇಲ್ಲ!

ಶಾಂತಪುರದ ನಾಗರಾಜ್ ಮತ್ತು ಅನುರಾಧ ದಂಪತಿ ಪುತ್ರಿ ಸ್ಫೂರ್ತಿ ಶಿವಮೊಗ್ಗದ ಮಹೇಶ್ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.90ರಷ್ಟು  ಅಂಕ ಪಡೆದಿದ್ದು, ಸಿಇಟಿಯನ್ನು ಬರೆದಿದ್ದಾಳೆ. ಬಿಎಸ್ಸಿ ಕೃಷಿ ಪದವಿ ಮಾಡುವ ಇಚ್ಚೆ ಹೊಂದಿರುವ ಸ್ಫೂರ್ತಿ ಇಂತಹ ನೋವಿನ ಸಂದರ್ಭದಲ್ಲಿಯೂ ಪರೀಕ್ಷೆ ಬರೆಯುವ ಮೂಲಕ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News