ಬೆಂಗಳೂರು: 2024ರ ಹೊಸ ವರ್ಷಾಚರಣೆಯಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬರೋಬ್ಬರಿ 8 ಸಾವಿರ ಕೆಜಿ ತ್ಯಾಜ್ಯವನ್ನು ಸಂಗ್ರಹಿಸಲಾಗಿದೆ. ಸಿವಿಕ್ ಬಾಡಿ ನಡೆಸುತ್ತಿರುವ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಲಿಮಿಟೆಡ್ (BSWML) ಸೋಮವಾರ ನಗರದ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ (CBD) ಯಿಂದ 8 ಟನ್ ತ್ಯಾಜ್ಯವನ್ನು ಸಂಗ್ರಹಿಸಿದೆ ಎಂದು ಹೇಳಿದೆ.
ಅಧಿಕಾರಿಗಳ ಪ್ರಕಾರ, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ರೆಸಿಡೆನ್ಸಿ ರಸ್ತೆ, ರಿಚ್ಮಂಡ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ ಮತ್ತು ಕಸ್ತೂರ್ಬಾ ರಸ್ತೆ ಸೇರಿದಂತೆ ಇತರೆಡೆಗಳಿಂದ ಅಪಾರ ಪ್ರಮಾಣದ ತ್ಯಾಜ್ಯ ಸಂಗ್ರಹವಾಗಿದೆ. ತ್ಯಾಜ್ಯ ಸಂಗ್ರಹಿಸಲು ಸುಮಾರು 80 ಪೌರ ಕಾರ್ಮಿಕರು, ಮೂವರು ಮೇಲ್ವಿಚಾರಕರು, ಒಂದು ಕಾಂಪ್ಯಾಕ್ಟರ್ ಮತ್ತು 7 ಆಟೋ ಟಿಪ್ಪರ್ಗಳನ್ನು ನಿಯೋಜಿಸಲಾಗಿತ್ತು.
ಇದನ್ನೂ ಓದಿ: ‘ಫೋಟೋಶೂಟ್’ ಮಾಡಿಸ್ಬೇಡ ಎಂದ ಪೋಷಕರು: ವಿದ್ಯಾರ್ಥಿನಿ ಆತ್ಮಹತ್ಯೆ..!
ಬರೋಬ್ಬರಿ 8 ಟನ್ ಕಸ ಸಂಗ್ರಹಿಸಿರುವ ಪೈಕಿ ಹೆಚ್ಚಾಗಿ ಪ್ಲಾಸ್ಟಿಕ್ ಕವರ್ಗಳು, ಪಾದರಕ್ಷೆಗಳು, ಮದ್ಯದ ಬಾಟಲಿಗಳು ಮತ್ತು ಬಟ್ಟೆಗಳು ಸಿಕ್ಕಿವೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯು ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಹೊಸ ವರ್ಷಾಚರಣೆಗೆ ಸಂಬಂಧಿಸಿದಂತೆ ಬೆಂಗಳೂರಿನ ಪ್ರಮುಖ ಪ್ರದೇಶಗಳ ರಸ್ತೆಗಳಲ್ಲಿ ಡಸ್ಟ್ಬಿನ್ಗಳನ್ನು ಇರಿಸಲಾಗಿತ್ತು. ಆದರೆ ಹೊಸ ವರ್ಷವನ್ನು ಆಚರಿಸಲು ಸೇರಿದ್ದ ಲಕ್ಷಾಂತರ ಜನರು ಡಸ್ಟ್ಬಿನ್ಗಳಲ್ಲಿ ತ್ಯಾಜ್ಯವನ್ನು ಹಾಕದೆ ರಸ್ತೆಯಲ್ಲಿಯೇ ಹಾಕಿದ್ದಾರೆ. ಬಹುತೇಕ ವಿದ್ಯಾವಂತರು ಅನಿಸಿಕೊಂಡವರೇ ಈ ರೀತಿ ವರ್ತಿಸಿದ್ದಾರೆ. ಕಸದ ತೊಟ್ಟಿಗಳಲ್ಲಿ ಹಾಕದೆ ಹೊರಗಡೆ ತ್ಯಾಜ್ಯವನ್ನು ಎಸೆಯಲಾಗಿದೆ. ನಾವು ತ್ಯಾಜ್ಯವನ್ನು ಸಂಗ್ರಹಿಸದೇ ಇದ್ದಿದ್ದರೆ ಸೋಮವಾರ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿತ್ತು ಅಂತಾ ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ವರ್ಷದ ಕೊನೆ ದಿನ ದಾಖಲೆಯ ಮದ್ಯ ಮಾರಾಟ: ಒಂದೇ ದಿನದಲ್ಲಿ 18.85 ಕೋಟಿ ರೂ. ವಹಿವಾಟು
ಪ್ರತಿವರ್ಷವೂ ಹೊಸ ವರ್ಷಾಚರಣೆ ದಿನ ಇದೇ ರೀತಿ ಆಗುತ್ತದೆ. ಪಾರ್ಟಿ ಮಾಡಲು ಬರುವವರು ಮದ್ಯದ ಬಾಟಲಿಗಳು ಸೇರಿದಂತೆ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ನಾವು ಈ ಬಗ್ಗೆ ಅರಿವು ಮೂಡಿಸಿದರೂ ಪ್ರಯೋಜನವಾಗಿಲ್ಲ. ಬೆಂಗಳೂರಿನ ಪ್ರಮುಖ ರಸ್ತೆಗಳು ಈ ದಿನದಂದು ತ್ಯಾಜ್ಯವಸ್ತುಗಳಿಂದ ತುಂಬಿರುತ್ತವೆ ಅಂತಾ ಅಧಿಕಾರಿ ಬೇಸರ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.