ಸಮುದ್ರದಲ್ಲಿ ಮುಳುಗುತ್ತಿದ್ದ ಒಂದೇ ಕುಟುಂಬದ 7 ಮಂದಿ ಪ್ರವಾಸಿಗರು ಸೇರಿ 8 ಮಂದಿ ರಕ್ಷಣೆ

Gokarna Main Beach: ಪರಶುರಾಮ(44), ರುಕ್ಮಿಣಿ(38), ಧೀರಜ್(14), ಅಕ್ಷರ(14), ಖುಷಿ(13), ದೀಪಿಕಾ(12) ಮತ್ತು ನಂದ ಕಿಶೋರ(10) ಸಮುದ್ರದಲ್ಲಿ ಮುಳುಗಡೆಯಾಗಿದ್ದ ಒಂದೇ ಕುಟುಂಬಸ್ಥರಾಗಿದ್ದಾರೆ. ಇದಲ್ಲದೇ ಪಿಂಡ ಪ್ರಧಾನಕ್ಕೆ ಬಂದಿದ್ದ ಹುಬ್ಬಳ್ಳಿಯ ಎಲ್.ವಿ.ಪಾಟೀಲ್ (30) ಎಂಬುರನ್ನು ರಕ್ಷಣೆ ಮಾಡಲಾಗಿದೆ. ​

Written by - Puttaraj K Alur | Last Updated : Oct 10, 2023, 04:16 PM IST
  • ಸಮುದ್ರದಲ್ಲಿ ಮುಳುಗುತ್ತಿದ್ದ ಒಂದೇ ಕುಟುಂಬದ 7 ಮಂದಿ ಪ್ರವಾಸಿಗರು ಸೇರಿ 8 ಮಂದಿಯ ರಕ್ಷಣೆ
  • ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಮುಖ್ಯ ಬೀಚ್‍ನಲ್ಲಿ ಈ ಘಟನೆ ನಡೆದಿದೆ
  • ಒಂದೇ ಕುಟುಂಬದ 7 ಮಂದಿ ಮತ್ತು ಪಿಂಡ ಪ್ರಧಾನಕ್ಕೆ ಬಂದಿದ್ದ ಓರ್ವನನ್ನು ರಕ್ಷಿಸಲಾಗಿದೆ
ಸಮುದ್ರದಲ್ಲಿ ಮುಳುಗುತ್ತಿದ್ದ ಒಂದೇ ಕುಟುಂಬದ 7 ಮಂದಿ ಪ್ರವಾಸಿಗರು ಸೇರಿ 8 ಮಂದಿ ರಕ್ಷಣೆ title=
8 ಮಂದಿಯ ರಕ್ಷಣೆ

ಕಾರವಾರ: ಸಮುದ್ರದಲ್ಲಿ ಮುಳುಗುತ್ತಿದ್ದ ಒಂದೇ ಕುಟುಂಬದ 7 ಮಂದಿ ಪ್ರವಾಸಿಗರು ಸೇರಿದಂತೆ 8 ಮಂದಿಯನ್ನು ರಕ್ಷಿಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಮುಖ್ಯ ಬೀಚ್‍ನಲ್ಲಿ ನಡೆದಿದೆ. ಪ್ರತ್ಯೇಕ ಘಟನೆಯಲ್ಲಿ 8 ಜನರನ್ನು ಲೈಪ್ ಗಾರ್ಡ್ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಒತ್ತು: ಅರಿವು ಸಾಲ ಯೋಜನೆಗೆ ಹೆಚ್ಚುವರಿ ಅನುದಾನ ಒದಗಿಸಲು ಮುಖ್ಯಮಂತ್ರಿ ಸೂಚನೆ

ಗೋಕರ್ಣ ಪ್ರವಾಸಕ್ಕೆ ಬಂದಿದ್ದ ಒಂದೇ ಕುಟುಂಬದ 7 ಮಂದಿ ಹಾಗೂ ಪಿಂಡ ಪ್ರಧಾನಕ್ಕೆ ಬಂದಿದ್ದ ಓರ್ವ‌ನನ್ನು ರಕ್ಷಿಸಲಾಗಿದೆ. ಹುಬ್ಬಳ್ಳಿಯಿಂದ ಗೋಕರ್ಣ ಪ್ರವಾಸಕ್ಕೆ ಬಂದಿದ್ದ ಒಂದೇ ಕುಟುಂಬದ 7 ಮಂದಿ & ಪಿಂಡ ಪ್ರಧಾನಕ್ಕೆ ಬಂದಿದ್ದ ಓರ್ವ‌ ನೀರುಪಾಲಾಗುತ್ತಿದ್ದರು.

ಇದನ್ನೂ ಓದಿ: Police Constable Suicide: ನೇಣು ಬಿಗಿದುಕೊಂಡು ಪೊಲೀಸ್ ಕಾನ್‌ಸ್ಟೇಬಲ್ ಆತ್ಮಹತ್ಯೆ..!

ಪರಶುರಾಮ(44), ರುಕ್ಮಿಣಿ(38), ಧೀರಜ್(14), ಅಕ್ಷರ(14), ಖುಷಿ(13), ದೀಪಿಕಾ(12) ಮತ್ತು ನಂದ ಕಿಶೋರ(10) ಸಮುದ್ರದಲ್ಲಿ ಮುಳುಗಡೆಯಾಗಿದ್ದ ಒಂದೇ ಕುಟುಂಬಸ್ಥರಾಗಿದ್ದಾರೆ. ಇದಲ್ಲದೇ ಪಿಂಡ ಪ್ರಧಾನಕ್ಕೆ ಬಂದಿದ್ದ ಹುಬ್ಬಳ್ಳಿಯ ಎಲ್.ವಿ.ಪಾಟೀಲ್ (30) ಎಂಬುರನ್ನು ರಕ್ಷಣೆ ಮಾಡಲಾಗಿದೆ. ಲೈಪ್ ಗಾರ್ಡ್ ಸಿಬ್ಬಂದಿಗಳಾದ ಶಿವಪ್ರಸಾದ ಅಂಬಿಗ ಮತ್ತು ಲೋಕೇಶ್ ಹರಿಕಾಂತ ಅವರು 8 ಜನರನ್ನು ರಕ್ಷಣೆ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News