ಲೋಕಾಪುರ ಪಟ್ಟಣದ ಬಳಿ 5 ಕೋಟಿ ರೂ. ಹಣ ಜಪ್ತಿ

ಹುಬ್ಬಳ್ಳಿಯಿಂದ ಮುಧೋಳ ಮಾರ್ಗವಾಗಿ ಸಾಗಿಸುತ್ತಿದ್ದ ಐದು ಕೋಟಿ ರೂ ಹಣವನ್ನು ಮುಧೋಳ ಚುನಾವಣಾಧಿಕಾರಿಗಳು,ಪ್ಲೈಯಿಂಗ್ ಸ್ಕ್ವಾಡ್,ಲೋಕಾಪುರ ಪೊಲೀಸರು ಸೇರಿ ವಶಕ್ಕೆ ತೆಗೆದುಕೊಂಡಿದ್ದಾರೆ.

Written by - Zee Kannada News Desk | Last Updated : Apr 29, 2023, 04:59 PM IST
  • ಈ ಹಣವು ಯುನಿಯನ್ ಬ್ಯಾಂಕ್ ಗೆ ಸೇರಿದ ಹಣ ಎನ್ನುವ ಮಾಹಿತಿ ಲಭ್ಯವಾಗಿದ್ದು,
  • ಇದನ್ನು ಬೊಲೆರೋ ವಾಹನದಲ್ಲಿ ಹುಬ್ಬಳ್ಳಿಯ ಯುನಿಯನ್ ಬ್ಯಾಂಕ್ ನಿಂದ ಮುಧೋಳ್ ಯುನಿಯನ್ ಬ್ಯಾಂಕ್ ಗೆ ಸಾಗಿಸಲಾಗುತ್ತಿತ್ತು,
  • ಆದರೆ ಸೂಕ್ತ ದಾಖಲೆಗಳು ಇಲ್ಲದ ಕಾರಣ ಈ ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಲೋಕಾಪುರ ಪಟ್ಟಣದ ಬಳಿ 5 ಕೋಟಿ ರೂ. ಹಣ ಜಪ್ತಿ title=

ಮುಧೋಳ್: ಹುಬ್ಬಳ್ಳಿಯಿಂದ ಮುಧೋಳ ಮಾರ್ಗವಾಗಿ ಸಾಗಿಸುತ್ತಿದ್ದ ಐದು ಕೋಟಿ ರೂ ಹಣವನ್ನು ಮುಧೋಳ ಚುನಾವಣಾಧಿಕಾರಿಗಳು,ಪ್ಲೈಯಿಂಗ್ ಸ್ಕ್ವಾಡ್,ಲೋಕಾಪುರ ಪೊಲೀಸರು ಸೇರಿ ವಶಕ್ಕೆ ತೆಗೆದುಕೊಂಡಿದ್ದಾರೆ.

​ಇದನ್ನೂ ಓದಿ-ಮಧುಮೇಹಿಗಳಿಗೂ ಪಾರ್ಶ್ವವಾಯುವಾಗಬಹುದು ! ಈ ಲಕ್ಷಣಗಳಿದ್ದರೆ ಎಚ್ಚರವಿರಲಿ

ಅಕ್ರಮವಾಗಿ ಸಾಗಿಸುತ್ತಿದ್ದ ಹಣಕ್ಕೆ ಸೂಕ್ತ ದಾಖಲೆಗಳು ಇಲ್ಲದ ಹಿನ್ನೆಲೆಯಲ್ಲಿ ಹಣವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.ಲೋಕಾಪುರ ಬಳಿ ಲಕ್ಷಾನಟ್ಟಿ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ವೇಳೆ ಹಣವನ್ನು ಜಪ್ತಿ ಮಾಡಲಾಗಿದ್ದು ಮತ್ತು ಕಾರಿನಲ್ಲಿದ್ದ ಐವರನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ-Sugar Patient ಗಳಿಗೆ ವರಕ್ಕೆ ಸಮಾನ ಈ ವಿಶಿಷ್ಠ ರೀತಿಯ ವೈಟ್ ರೈಸ್!

ಈ ಹಣವು ಯುನಿಯನ್ ಬ್ಯಾಂಕ್ ಗೆ ಸೇರಿದ ಹಣ ಎನ್ನುವ ಮಾಹಿತಿ ಲಭ್ಯವಾಗಿದ್ದು, ಇದನ್ನು ಬೊಲೆರೋ ವಾಹನದಲ್ಲಿ ಹುಬ್ಬಳ್ಳಿಯ ಯುನಿಯನ್ ಬ್ಯಾಂಕ್ ನಿಂದ ಮುಧೋಳ್ ಯುನಿಯನ್ ಬ್ಯಾಂಕ್ ಗೆ ಸಾಗಿಸಲಾಗುತ್ತಿತ್ತು, ಆದರೆ ಸೂಕ್ತ ದಾಖಲೆಗಳು ಇಲ್ಲದ ಕಾರಣ ಈ ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.ಮತ್ತು ಈ ವಿಚಾರವಾಗಿ ಅವರು ಹೆಚ್ಚಿನ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News