ಕರ್ನಾಟಕ ಉಚ್ಛ ನ್ಯಾಯಾಲಯದ ರಾಷ್ಟ್ರೀಯ ಇ-ಲೋಕ ಅದಾಲತ್‍ನಲ್ಲಿ 323 ಪ್ರಕರಣಗಳ ಇತ್ಯರ್ಥ

ಕರ್ನಾಟಕ ಉಚ್ಛ ನ್ಯಾಯಾಲಯ ಪೀಠ, ಧಾರವಾಡದಲ್ಲಿ ಇಂದು ರಾಷ್ಟ್ರೀಯ ಇ-ಲೋಕ ಅದಾಲತ್ ಜರುಗಿತು. ಅದಾಲತ್‍ನಲ್ಲಿ ನ್ಯಾಯಮೂರ್ತಿಗಳಾದ ಎಸ್.ಆರ್. ಕೃಷ್ಣಕುಮಾರ್, ಸೂರಜ್ ಗೋವಿಂದ ರಾಜ್,  ಎಸ್. ವಿಶ್ವಜಿತ್ ಶೆಟ್ಟಿ, ಎಸ್.ಬಿ. ಅಮರಣ್ಣವರ್, ಎಂ.ಜಿ. ಉಮಾ ಹಾಗೂ ಇವರೊಂದಿಗೆ ಲೋಕ ಅದಾಲತ್‍ನ ಸದಸ್ಯರಾದ ಎಲ್.ಟಿ. ಮಂಟಗಣಿ, ಜೆ.ಎಸ್. ಶೆಟ್ಟಿ,   ಎಮ್.ಸಿ. ಹುಕ್ಕೇರಿ, ಎಸ್.ಎಸ್. ಬಡವಡಗಿ ಮತ್ತು ಸುನಂದಾ ಪಾಟೀಲ ಪಾಲ್ಗೋಂಡಿದ್ದರು. 

Last Updated : Sep 19, 2020, 08:57 PM IST
ಕರ್ನಾಟಕ ಉಚ್ಛ ನ್ಯಾಯಾಲಯದ ರಾಷ್ಟ್ರೀಯ ಇ-ಲೋಕ ಅದಾಲತ್‍ನಲ್ಲಿ 323 ಪ್ರಕರಣಗಳ ಇತ್ಯರ್ಥ title=
Photo Courtsey : https://karnatakajudiciary.kar.nic.in/

ಬೆಂಗಳೂರು: ಕರ್ನಾಟಕ ಉಚ್ಛ ನ್ಯಾಯಾಲಯ ಪೀಠ, ಧಾರವಾಡದಲ್ಲಿ ಇಂದು ರಾಷ್ಟ್ರೀಯ ಇ-ಲೋಕ ಅದಾಲತ್ ಜರುಗಿತು. ಅದಾಲತ್‍ನಲ್ಲಿ ನ್ಯಾಯಮೂರ್ತಿಗಳಾದ ಎಸ್.ಆರ್. ಕೃಷ್ಣಕುಮಾರ್, ಸೂರಜ್ ಗೋವಿಂದ ರಾಜ್,  ಎಸ್. ವಿಶ್ವಜಿತ್ ಶೆಟ್ಟಿ, ಎಸ್.ಬಿ. ಅಮರಣ್ಣವರ್, ಎಂ.ಜಿ. ಉಮಾ ಹಾಗೂ ಇವರೊಂದಿಗೆ ಲೋಕ ಅದಾಲತ್‍ನ ಸದಸ್ಯರಾದ ಎಲ್.ಟಿ. ಮಂಟಗಣಿ, ಜೆ.ಎಸ್. ಶೆಟ್ಟಿ,   ಎಮ್.ಸಿ. ಹುಕ್ಕೇರಿ, ಎಸ್.ಎಸ್. ಬಡವಡಗಿ ಮತ್ತು ಸುನಂದಾ ಪಾಟೀಲ ಪಾಲ್ಗೋಂಡಿದ್ದರು. 

ದ್ವೇಷ ಭಾಷಣದ ಬಗೆಗಿನ ಅರ್ಜಿ ವಜಾಗೊಳಿಸಿದ ಉಚ್ಚ ನ್ಯಾಯಾಲಯ

ಕರ್ನಾಟಕ ಉಚ್ಛ ನ್ಯಾಯಲಯ ಪೀಠದಲ್ಲಿ ರಾಷ್ಟ್ರೀಯ ಇ-ಲೋಕ ಅದಾಲತ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಒಟ್ಟು  5 ಪೀಠಗಳನ್ನು ಆಯೋಜಿಸಲಾಗಿತ್ತು. ಅದಾಲತ್‍ನಲ್ಲಿ ಒಟ್ಟು 476 ಪ್ರಕರಣಗಳನ್ನು ವಿಚಾರಣೆಗೆಂದು ಗುರುತಿಸಿಕೊಳ್ಳಲಾಗಿತ್ತು. ಆ ಪೈಕಿ ಒಟ್ಟು 323 ಪ್ರಕರಣಗಳನ್ನು ರೂ.5,61,34,000/- ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು ಎಂದು ಅಧಿಕ ವಿಲೇಖನಾಧಿಕಾರಿಗಳು ಮತ್ತು ಉಚ್ಛ ನ್ಯಾಯಾಲಯ ಧಾರವಾಡ ಪೀಠದ ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ರೋಣ ವಾಸುದೇವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Trending News