ಔಷಧಿ ಖರೀದಿ ಮಾಡಿದ ಜನರ ಮಾಹಿತಿ ನೀಡದ 110 ಮೆಡಿಕಲ್ ಶಾಪ್ ಲೈಸೆನ್ಸ್ ರದ್ದು

ರಾಜ್ಯ ಸರ್ಕಾರ ಆರೋಗ್ಯ ಅಗತ್ಯತೆಗಳನ್ನು ತಲುಪಿಸಲು ಮತ್ತು ಹೆಚ್ಚಿನ ಅಪಾಯದಲ್ಲಿರುವವರನ್ನು ರಕ್ಷಿಸಲು ಹಾಗೂ ಸಾಂಕ್ರಾಮಿಕ ರೋಗದ ಪ್ರಾಥಮಿಕ ಲಕ್ಷಣಗಳನ್ನು ಗುರುತಿಸುವ ದೃಷ್ಟಿಯಿಂದ ಔಷಧ ಅಂಗಡಿಗಳಿಂದ ಖರೀದಿಸಿದವರ ಮಾಹಿತಿಯನ್ನು ಕಲೆಹಾಕುತ್ತಿದೆ. 

Last Updated : Jul 7, 2020, 08:13 AM IST
ಔಷಧಿ ಖರೀದಿ ಮಾಡಿದ ಜನರ ಮಾಹಿತಿ ನೀಡದ 110 ಮೆಡಿಕಲ್ ಶಾಪ್ ಲೈಸೆನ್ಸ್ ರದ್ದು title=

ಬೆಂಗಳೂರು: COVID 19 ಸಂಬಂಧಪಟ್ಟಂತೆ ರೋಗ ಲಕ್ಷಣಗಳಾದ ನೆಗಡಿ, ಕೆಮ್ಮು, ಜ್ವರ ILI/SARIಗಳಿಗೆ ಔಷಧಿ ಖರೀದಿಸುವವರು ತಮ್ಮ ಹೆಸರು, ವಿಶಾಸ ಮತ್ತು ದೂರವಾಣಿ ಸಂಖ್ಯೆಯ ವಿವರಗಳನ್ನು ಫಾರ್ಮ ಪೋರ್ಟಲ್ ನಲ್ಲಿ ಭರ್ತಿ ಮಾಡಿ ಮೆಡಿಕಲ್ ಸ್ಟೊರ್ ಗೆ ನೀಡಬೇಕು ಮತ್ತು ಮೆಡಿಕಲ್ ಸ್ಟೋರ್ ನವರು‌ ಅದನ್ನು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಬೇಕು. ರಾಜ್ಯಾದ್ಯಂತ ಈ‌ ರೀತಿಯ ‌ನಿಯಮ ಪಾಲಿಸದ 110 ಔಷಧಿ ಅಂಗಡಿಗಳ ಪರವಾನಗಿಗಳನ್ನು
ಅಮಾನತುಗೊಳಿಸಲಾಗಿದೆ.

ರಾಜ್ಯ ಸರ್ಕಾರ ಆರೋಗ್ಯ ಅಗತ್ಯತೆಗಳನ್ನು ತಲುಪಿಸಲು ಮತ್ತು ಹೆಚ್ಚಿನ ಅಪಾಯದಲ್ಲಿರುವವರನ್ನು ರಕ್ಷಿಸಲು ಹಾಗೂ ಸಾಂಕ್ರಾಮಿಕ ರೋಗದ ಪ್ರಾಥಮಿಕ ಲಕ್ಷಣಗಳನ್ನು ಗುರುತಿಸುವ ದೃಷ್ಟಿಯಿಂದ ಔಷಧ ಅಂಗಡಿಗಳಿಂದ ಖರೀದಿಸಿದವರ ಮಾಹಿತಿಯನ್ನು ಕಲೆಹಾಕುತ್ತಿದೆ. ಆದುದರಿಂದ ಔಷಧಿ ಖರೀದಿಸಿದವರ ವಿವರವನ್ನು ಸಂಗ್ರಹಿಸುವ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದೆ.

ಇದಕ್ಕಾಗಿ ಆರೋಗ್ಯ ಮತ್ತು ಕುಟುಂಬ ಇಲಾಖೆ ಔಷಧಿ ಖರೀದಿಸುವವರ ಮಾಹಿತಿಯನ್ನು ವೆಬ್ ಗೆ ಹಾಕಲು ತಿಳಿಸಲಾಗಿತ್ತು. ಆದರೆ ಇದರಲ್ಲಿ ವಿಫಲವಾಗಿರುವ 110 ಮೆಡಿಕಲ್ ಶಾಪ್ ಗಳನ್ನು ನಿರ್ದಿಷ್ಟ ಅವಧಿಗೆ ಅಮಾನತ್ತು ಮಾಡಲಾಗಿದೆ.

ಪರವಾಗಿ ರದ್ದಾದ ಜಿಲ್ಲಾವಾರು ಮೆಡಿಕಲ್ ಸ್ಟೋರ್ ಗಳ ವಿವರ‌ ಹೀಗಿದೆ...

  • ಕಲಬುರ್ಗಿ- 70
  • ಬೆಂಗಳೂರು -03
  • ಬೀದರ್ - 4
  • ಬಿಜಾಪುರ - 15
  • ಮೈಸೂರು- 4
  • ರಾಯಚೂರು-9
  • ಬಾಗಲಕೋಟೆ- 5
     

Trending News