Zee Kannada News 3rd Opinion Poll: ಬಿಜೆಪಿಗೆ ಗೇಮ್ ಚೇಂಜರ್ ಆಗ್ತಾರಾ ಮೋದಿ? ಕಾಂಗ್ರೆಸ್ ಗೆ ವರವಾದಿತೇ ಪ್ರಿಯಾಂಕಾ, ರಾಹುಲ್ ಗಾಂಧಿ ಮಿಂಚಿನ ಸಂಚಾರ?

ಮೇ 10 ರ ಚುನಾವಣೆಗೆ ಕೇವಲ ಮೂರು ದಿನ ಬಾಕಿ ಇದೆ. ಇನ್ನೂ ಅಂತಿಮ ಫಲಿತಾಂಶ ಮೇ 13 ಕ್ಕೆ ಪ್ರಕಟಗೊಳ್ಳಲಿದೆ. ಅದಕ್ಕೂ ಮೊದಲು ಜೀ ಕನ್ನಡ ನ್ಯೂಸ್ ಮತ್ತು MATRIZE ಸಂಸ್ಥೆಯ ಸಹಯೋಗದೊಂದಿಗೆ ಜನರ ನಾಡಿ ಮಿಡಿತವನ್ನು ಹಿಡಿಯುವ ಪ್ರಯತ್ನ ಮಾಡಿದೆ.ಇದಕ್ಕಾಗಿ ರಾಜ್ಯ ವಿಧಾನಸಭೆಯ ಎಲ್ಲಾ 224 ಕ್ಷೇತ್ರಗಳ ಬಗ್ಗೆ 3 ಲಕ್ಷದ 36 ಸಾವಿರ ಜನರ ಮೂಲಕ ಅಭಿಪ್ರಾಯವನ್ನು ಸಂಗ್ರಹಿಸಿದೆ.

Written by - Zee Kannada News Desk | Last Updated : May 7, 2023, 10:20 PM IST
  • ಜೀ ಕನ್ನಡ ನ್ಯೂಸ್ ತನ್ನ ಮೂರನೆಯ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಹಲವು ವಿಷಯಗಳನ್ನು ಮಾನದಂಡವಾಗಿ ಪರಿಣಮಿಸಿದೆ.
  • ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರು ರಾಜ್ಯದಲ್ಲಿಯೇ ಟಿಕಾಣಿ ಹೂಡಿ ಭರ್ಜರಿ ಚುನಾವಣಾ ಪ್ರಚಾರವನ್ನು ನಡೆಸುತ್ತಿದ್ದಾರೆ.
  • ಕೊನೆಯ ಹಂತದ ಪ್ರಚಾರ ಜನರ ಮೇಲೆ ಯಾವ ರೀತಿ ಪರಿಣಾಮ ಬೀರಬಲ್ಲದು ಎನ್ನುವುದನ್ನು ನಾವು ತಿಳಿಯಬೇಕಾಗಿದೆ.
Zee Kannada News 3rd Opinion Poll: ಬಿಜೆಪಿಗೆ ಗೇಮ್ ಚೇಂಜರ್ ಆಗ್ತಾರಾ ಮೋದಿ? ಕಾಂಗ್ರೆಸ್ ಗೆ ವರವಾದಿತೇ ಪ್ರಿಯಾಂಕಾ, ರಾಹುಲ್ ಗಾಂಧಿ ಮಿಂಚಿನ ಸಂಚಾರ? title=

ಬೆಂಗಳೂರು: ಮೇ 10 ರ ಚುನಾವಣೆಗೆ ಕೇವಲ ಮೂರು ದಿನ ಬಾಕಿ ಇದೆ. ಇನ್ನೂ ಅಂತಿಮ ಫಲಿತಾಂಶ ಮೇ 13 ಕ್ಕೆ ಪ್ರಕಟಗೊಳ್ಳಲಿದೆ. ಅದಕ್ಕೂ ಮೊದಲು ಜೀ ಕನ್ನಡ ನ್ಯೂಸ್ MATRIZE ಸಂಸ್ಥೆಯ ಸಹಯೋಗದೊಂದಿಗೆ ಜನರ ನಾಡಿ ಮಿಡಿತವನ್ನು ಹಿಡಿಯುವ ಪ್ರಯತ್ನ ಮಾಡಿದೆ.ಇದಕ್ಕಾಗಿ ರಾಜ್ಯ ವಿಧಾನಸಭೆಯ ಎಲ್ಲಾ 224 ಕ್ಷೇತ್ರಗಳ ಬಗ್ಗೆ 3 ಲಕ್ಷದ 36 ಸಾವಿರ ಜನರ ಮೂಲಕ ಅಭಿಪ್ರಾಯವನ್ನು ಸಂಗ್ರಹಿಸಿದೆ.

ಜೀ ಕನ್ನಡ ನ್ಯೂಸ್ ತನ್ನ ಮೂರನೆಯ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಹಲವು ವಿಷಯಗಳನ್ನು ಮಾನದಂಡವಾಗಿ ಪರಿಣಮಿಸಿದೆ.ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರು ರಾಜ್ಯದಲ್ಲಿಯೇ ಟಿಕಾಣಿ ಹೂಡಿ ಭರ್ಜರಿ ಚುನಾವಣಾ ಪ್ರಚಾರವನ್ನು ನಡೆಸುತ್ತಿದ್ದಾರೆ.ಈ ಸಂದರ್ಭದಲ್ಲಿ ಈ ನಾಯಕರುಗಳ ಕೊನೆಯ ಹಂತದ ಪ್ರಚಾರ ಜನರ ಮೇಲೆ ಯಾವ ರೀತಿ ಪರಿಣಾಮ ಬೀರಬಲ್ಲದು ಎನ್ನುವುದನ್ನು ನಾವು ತಿಳಿಯಬೇಕಾಗಿದೆ.ಒಂದೆಡೆ ಬಿಜೆಪಿ ಪರವಾಗಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ರಂತಹ ನಾಯಕರು ತಮ್ಮ ಪ್ರಚಾರದ ಮೂಲಕ ಮತದಾರರನ್ನು ಬಿಜೆಪಿ ಪರವಾಗಿ ವಾಲುವಂತೆ ಮಾಡುತ್ತಾರೆಯೇ? ಅಥವಾ ಕಾಂಗ್ರೆಸ್ ಪಕ್ಷದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರ ಅಬ್ಬರದ ಪ್ರಚಾರವು ಕಾಂಗ್ರೆಸ್ ಪಕ್ಷಕ್ಕೆ ಎಷ್ಟರ ಮಟ್ಟಿಗೆ ವರವಾಗಲಿದೆ ? ಎನ್ನುವಂತಹ ಪ್ರಶ್ನೆಗಳಿಗೆ ಮೇ 10 ರಂದು ನಡೆಯುವ ಮತದಾನ ಮತ್ತು ಮೇ 13 ರಂದು ಪ್ರಕಟವಾಗುವ ಫಲಿತಾಂಶಕ್ಕೂ ಮೊದಲು ಜನಾಭಿಪ್ರಾಯದ ಮೂಲಕ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಜೀ ಕನ್ನಡ ನ್ಯೂಸ್ ಮಾಡಿದೆ.

ಈ ಸಮೀಕ್ಷೆಯಲ್ಲಿ ಜನರಿಗೆ ಯಾವ ಪಕ್ಷ ಅಧಿಕಾರದಲ್ಲಿದ್ದಾಗ ಅತಿ ಹೆಚ್ಚಿನ ಪ್ರಗತಿಯಾಗಿದೆ ಎನ್ನುವ ಪ್ರಶ್ನೆಯನ್ನು ಜನರ ಮುಂದಿಟ್ಟಾಗ ಶೇ 31 ರಷ್ಟು ಜನರು ಕಾಂಗ್ರೆಸ್ ಎಂದು ಹೇಳಿದರೆ, ಶೇ 36 ರಷ್ಟು ಜನರು ಬಿಜೆಪಿ ಎನ್ನುವ ಅಭಿಪ್ರಾಯಕ್ಕೆ ಬಂದಿದ್ದಾರೆ.ಇನ್ನೂ ಜೆಡಿಎಸ್ ಶೇ 11 ರಷ್ಟು ಎಂದು ಹೇಳಿದ್ದಾರೆ. ಶೇ 22 ರಷ್ಟು ಜನರ ಅಂತಹ ಯಾವುದೇ ವ್ಯತ್ಯಾಸವಿಲ್ಲ ಮೂರು ಪಕ್ಷಗಳು ಒಂದೇ ಎಂದು ಹೇಳಿದ್ದಾರೆ.

ಈಗಾಗಲೇ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆ ಪ್ರಣಾಳಿಕೆ ಮೂಲಕ ಹಲವು ಭರವಸೆಗಳನ್ನು ನೀಡಿವೆ,ಈ ಸಂದರ್ಭದಲ್ಲಿ ಯಾವ ಪಕ್ಷದ ಪ್ರಣಾಳಿಕೆಯ ಭರವಸೆಗಳು ಹೆಚ್ಚು ಪರಿಣಾಮ ಬೀರಿದೆ ಎನ್ನುವ ಪ್ರಶ್ನೆಯನ್ನು ಜನರ ಮುಂದಿಟ್ಟಾಗ ಶೇ 41 ರಷ್ಟು ಜನ ಬಿಜೆಪಿ ಎಂದು ಹೇಳಿದರೆ ಶೇ 40 ರಷ್ಟು ಜನರು ಕಾಂಗ್ರೆಸ್ ಎಂದು ಹೇಳಿದ್ದಾರೆ ಇನ್ನೂ ಜೆಡಿಎಸ್ ಪ್ರಣಾಳಿಕೆಯ ಭರವಸೆಗಳು ಶೇ 14 ರಷ್ಟು ಜನರ ಮೇಲೆ ಪ್ರಭಾವ ಬೀರಿವೆ.ಇದರಲ್ಲಿ ಶೇ 15 ರಷ್ಟು ಜನರು ತಮಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಹೆಚ್ಚು ಚರ್ಚೆಯಾಗಿರುವ ವಿಷಯವೆಂದರೆ ಅದು ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭಜರಂಗದಳದಂತಹ ಸಂಘಟನೆಯನ್ನು ನಿಷೇಧಿಸುವ ಭರವಸೆ ನೀಡಿದೆ.ಈಗ ಬಿಜೆಪಿಯು ಇದನ್ನೇ ಮುಖ್ಯ ಚುನಾವಣಾ ವಿಷಯವನ್ನಾಗಿ ಮಾಡಿಕೊಂಡಿದೆ. ಪ್ರಧಾನಿ ಮೋದಿ ಕೂಡ ತಮ್ಮ ಚುನಾವಣಾ ಭಾಷಣಗಳುದ್ದಕ್ಕೂ ಕೂಡ ಹೆಚ್ಚಾಗಿ ಪ್ರಸ್ತಾಪಿಸುವುದರ ಮೂಲಕ ತಮ್ಮ ಪ್ರಚಾರವನ್ನು ಇನ್ನಷ್ಟು ತೀಕ್ಷ್ಣಗೊಳಿಸಿದ್ದಾರೆ.

ಈ ವಿಚಾರವಾಗಿ ಜನರಿಗೆ ಕೇಳಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಜನರು ಶೇ 22 ರಷ್ಟು ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗುತ್ತದೆ ಎಂದು ಹೇಳಿದರೆ ಶೇ 44 ರಷ್ಟು ಜನರು ಈ ವಿಷಯ ಕಾಂಗ್ರೆಸ್ ಗೆ ನಷ್ಟವಾಗುತ್ತದೆ ಎಂದು ಹೇಳಿದ್ದಾರೆ. ಇನ್ನೂ ಶೇ 19 ರಷ್ಟು ಜನರು ಇದರಿಂದ ಯಾವುದೇ ಪರಿಣಾಮವಾಗುವುದಿಲ್ಲ ಎಂದು ಹೇಳಿದ್ದಾರೆ.ಶೇ 15 ರಷ್ಟು ಜನರು ಈ ವಿಚಾರವಾಗಿ ಏನನ್ನೂ ಹೇಳುವುದು ಕಷ್ಟಕರ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇನ್ನೂ ಪ್ರಧಾನಿ ಮೋದಿ ಅವರ ರ್ಯಾಲಿ ಮತ್ತು ಪ್ರಚಾರದ ಭಾಷಣಗಳು ಬಿಜೆಪಿ ಪಾಲಿಗೆ ಗೇಮ್ ಚೇಂಜರ್ ಆಗಬಲ್ಲವೇ ಎಂದು ಕೇಳಿದಾಗ ಶೇ 54 ರಷ್ಟು ಜನರು ಖಂಡಿತಾ ಪರಿಣಾಮ ಬೀರುತ್ತವೆ ಎಂದು ಹೇಳಿದ್ದಾರೆ.ಶೇ 28 ಜನರು ಸಾಧಾರಣ ಪರಿಣಾಮ ಬೀರಲಿವೆ ಎಂದು ಹೇಳಿದ್ದಾರೆ. ಶೇ 18 ರಷ್ಟು ಜನರು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನೂ  ಕಾಂಗ್ರೆಸ್ ಪಕ್ಷದ ವಿಚಾರಕ್ಕೆ ಬರುವುದಾದರೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಪ್ರಚಾರ ರಾಜ್ಯದಲ್ಲಿ ಎಷ್ಟರ ಮಟ್ಟಿಗೆ ಲಾಭ ತಂದುಕೊಡುತ್ತವೆ ಎನ್ನುವ ಪ್ರಶ್ನೆಯನ್ನು ಜನರ ಮುಂದಿಟ್ಟಾಗ ಶೇ 28 ರಷ್ಟು ಜನರು ಹೆಚ್ಚಿನ ಲಾಭ ತಂದು ಕೊಡುತ್ತದೆ ಎಂದು ಹೇಳಿದರೆ ಶೇ 34 ರಷ್ಟು ಜನರು ಒಂದು ಹಂತಕ್ಕೆ ಲಾಭವನ್ನು ತರುತ್ತವೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.ಇನ್ನೂ ಶೇ 38 ರಷ್ಟು ಜನರು ಅಂತಹ ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಇನ್ನೂ ಈ ಬಾರಿಯ ವಿಧಾನಸಭಾ ಚುನಾವಣೆಯ ಪ್ರಮುಖ ಚರ್ಚಾ ವಿಷಯ ಯಾವುದು ಎನ್ನುವ ಪ್ರಶ್ನೆಯನ್ನು ಇಟ್ಟಾಗ ಇದಕ್ಕೆ  ಶೇ 12 ರಷ್ಟು ಜನರು ನಿರುದ್ಯೋಗ ಎಂದು ಹೇಳಿದರೆ , ಶೇ 11 ರಷ್ಟು ಜನರು ರಾಜ್ಯ ಸರ್ಕಾರದ ಸಾಧನೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.ಇದರ ಜೊತೆ ನರೇಂದ್ರ ಮೋದಿ ಕೂಡ ಪ್ರಮುಖ ಚರ್ಚಾ ವಿಷಯ ಎಂದು ಶೇ 10 ರಷ್ಟು ಜನರು ಹೇಳಿದ್ದಾರೆ. ಶೇ 8 ರಷ್ಟು ಜನರು ಸ್ಥಳೀಯ ವಿಷಯಗಳೇ ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ಚರ್ಚಾ ವಿಷಯಗಳಾಗಿವೆ ಎಂದು ಹೇಳಿದ್ದಾರೆ.ಅಭಿವೃದ್ದಿ ಕೆಲಸಗಳು ಶೇ,7, ಮುಖಮಂತ್ರಿ ಅಭ್ಯರ್ಥಿ-ಶೇ 6, ಜಾತಿ ವಿಚಾರ-ಶೇ 6, ಉತ್ತಮ ಅಭ್ಯರ್ಥಿ ವಿಚಾರ ಶೇ 6 ರಷ್ಟು ಇರಲಿವೆ ಎಂದು ಕೆಲವರು ಹೇಳಿದ್ದಾರೆ.ಇನ್ನೂ ಕೆಲವು ಜನರು  ಶಾಸಕರ ಕೆಲಸಗಳು ಶೇ 5, ಪಕ್ಷಗಳ ಪರ-ವಿರೋಧ-ಶೇ 5, ಹಾಗೂ ರೈತರ ಸಮಸ್ಯೆಗಳು ಶೇ 4,ಧ್ರುವೀಕರಣ ಶೇ 4 ಎನ್ನುವ ಅಭಿಪ್ರಾಯವನ್ನು  ವ್ಯಕ್ತಪಡಿಸಿದ್ದಾರೆ.ಇದರ ಜೊತೆಗೆ ಭ್ರಷ್ಟಾಚಾರ, ಬೆಲೆ ಏರಿಕೆ ವಿಚಾರಗಳು ಕ್ರಮವಾಗಿ ಶೇ 4, ಹಾಗೂ ಶೇ 3 ರಷ್ಟು ಪ್ರಮುಖ ಚರ್ಚಾ ವಿಷಯವಾಗಲಿವೆ ಎಂದು ಹೇಳಿದ್ದರೆ, ಇತರೆ ವಿಷಯಗಳು ಪ್ರಮುಖ ಚರ್ಚಾ ವಿಷಯಗಳಾಗಲಿವೆ ಎಂದು ಶೇ 9 ರಷ್ಟು ಜನರು ಹೇಳಿದ್ದಾರೆ.

ಯಾವ ಪಕ್ಷಕ್ಕೆ ಎಷ್ಟು ಮತ?  ಎಷ್ಟು  ಸ್ಥಾನ?

 

ಜೀ ಕನ್ನಡ ನ್ಯೂಸ್ & MATRIZE ನ ಸಮೀಕ್ಷೆಯ ಪ್ರಕಾರ,ರಾಜ್ಯದಲ್ಲಿ ಬಿಜೆಪಿ ಶೇಕಡಾ 42 ರಷ್ಟು ಮತಗಳನ್ನು ಪಡೆಯುವ ಸಾಧ್ಯತೆ ಇದ್ದರೆ. ಶೇ 41ರಷ್ಟು ಮತಗಳನ್ನು ಕಾಂಗ್ರೆಸ್ ಮತ್ತು ಜೆಡಿಎಸ್ 14 ಹಾಗೂ ಇತರರು ಶೇ 3ರಷ್ಟು ಮತಗಳನ್ನು ಪಡೆಯುವ ಸಾಧ್ಯತೆ ಇದೆ.ಅಂದರೆ ಶೇಕಡಾವಾರು ಮತಗಳ ಲೆಕ್ಕದಲ್ಲಿ ಬಿಜೆಪಿ ಕಾಂಗ್ರೆಸ್‌ಗಿಂತ ಶೇ.1ರಷ್ಟು ಹೆಚ್ಚು ಮತಗಳನ್ನು ಪಡೆಯುವ ಸಾಧ್ಯತೆ ಇದೆ.

ಇನ್ನೂ ಸೀಟುಗಳ ವಿಚಾರಕ್ಕೆ ಬರುವುದಾದರೆ ಬಿಜೆಪಿ 103 ರಿಂದ 118 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ.ಮತ್ತೊಂದೆಡೆ,ಕಾಂಗ್ರೆಸ್ 82 ರಿಂದ 97 ಸ್ಥಾನಗಳನ್ನು ಮತ್ತು ಜೆಡಿಎಸ್ 28 ರಿಂದ 33 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ. ಇನ್ನೂ ಇತರರು 1 ರಿಂದ 4 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News