Karnataka Election 2023 Updates: ಮತದಾನ ಪ್ರಕ್ರಿಯೆ ಆರಂಭ: ಮತಗಟ್ಟೆಗೆ ಬಂದ ಬೆಕ್ಕು

ಕರ್ನಾಟಕ ಚುನಾವಣೆ 2023: ಹುಬ್ಬಳ್ಳಿಯಲ್ಲಿ ಮತದಾರರ ಜೊತೆಗೆ ಬೆಕ್ಕು ಕೂಡ ಮತಗಟ್ಟೆಗೆ ಬಂದಿರುವ ಘಟನೆ ನಡೆದಿದೆ. ಈ ಬೆಕ್ಕನ್ನು ಕಂಡು ಮತಗಟ್ಟೆ ಸಿಬ್ಬಂದಿ ಅಚ್ಚರಿ ಗೊಂಡಿದ್ದು, ಅದನ್ನು ದೂರ ಕಳುಹಿಸಲು ಕೂಡ ಪ್ರಯತ್ನಿಸಿದ್ದಾರೆ.  

Written by - Yashaswini V | Last Updated : May 10, 2023, 10:37 AM IST
  • ಹುಬ್ಬಳ್ಳಿಯಲ್ಲಿ ಮತದಾರರ ಜೊತೆಗೆ ಮತಗಟ್ಟೆಗೆ ಬಂದ ಬೆಕ್ಕು
  • ಮತದಾರರೊಂದಿಗೆ ಸರತಿಯಲ್ಲಿ ಕುರ್ಚಿ ಮೇಲೆ ಕುಳಿತ ಬೆಕ್ಕು
  • ಬೆಕ್ಕನ್ನು ನೋಡಿ ಅಚ್ಚರಿಯಾದ ಮತಗಟ್ಟೆ ಸಿಬ್ಬಂದಿ
Karnataka Election 2023 Updates: ಮತದಾನ ಪ್ರಕ್ರಿಯೆ ಆರಂಭ: ಮತಗಟ್ಟೆಗೆ ಬಂದ ಬೆಕ್ಕು title=

Karnataka Assembly Election 2023: ರಾಜ್ಯಾದ್ಯಂತ ಪ್ರಜಾಪ್ರಭುತ್ವದ ಹಬ್ಬ ಕಳೆಗಟ್ಟಿದೆ. ಇಂದು ಮುಂಜಾನೆಯಿಂದಲೇ ಮತದಾರರು ಬಹಳ ಉತ್ಸಾಹದಿಂದ ಬಂದು ಮತದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಚ್ಚರಿ ಎಂಬಂತೆ ಮತದಾನಕ್ಕಾಗಿ ಬೆಕ್ಕು ಕೂಡ ಮತದಾರರೊಂದಿಗೆ ಮತಗಟ್ಟೆಗೆ ಭೇಟಿ ನೀಡಿದೆ.

ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ವಿಧಾನಸಭಾ ಚುನಾವಣಾ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಮತದಾರರು ಮತಗಟ್ಟೆಗಳಿಗೆ ಆಗಮಿಸುವುದು ಸಾಮಾನ್ಯ. ಆದರೆ ಹುಬ್ಬಳ್ಳಿಯಲ್ಲಿ ಮತದಾರರ ಜೊತೆಗೆ ಮತಗಟ್ಟೆಗೆ ಬೆಕ್ಕು ಬಂದಿರುವುದು ನಿಜಕ್ಕೂ ವಿಶೇಷವಾಗಿದೆ.

ಇದನ್ನೂ ಓದಿ- Karnataka assembly election 2023ಕರ್ನಾಟಕದಲ್ಲಿ ಮತದಾನ ಪ್ರಾರಂಭ: ಮತ ಚಲಾಯಿಸಲಿದ್ದಾರೆ 5 ಕೋಟಿಗೂ ಹೆಚ್ಚು ಮತದಾರರು!

ಹೌದು.. ಮತದಾರರೊಂದಿಗೆ ಸರತಿಯಲ್ಲಿ ಕುರ್ಚಿ ಮೇಲೆ ಕುಳಿತ ಬೆಕ್ಕು ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದೆ. ಬೆಕ್ಕನ್ನು ನೋಡಿ ಮತಗಟ್ಟೆ ಸಿಬ್ಬಂದಿ ಅಚ್ಚರಿಯಾಗಿದ್ದಾರೆ. ಮತಗಟ್ಟೆಯಿಂದ ಆ ಬೆಕ್ಕನ್ನು ದೂರ ಕಳಿಸಲು ಅಲ್ಲಿದ್ದ ಜನ ಪ್ರಯತ್ನಿಸಿದರಾದರೂ ಬೆಕ್ಕು ಮಾತ್ರ ಕುರ್ಚಿ ಬಿಟ್ಟು ಅಲುಗಾಡದೆ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ- Karnataka Election 2023 Live: ಕರ್ನಾಟಕ ವಿಧಾನಸಭಾ ಚುನಾವಣೆ ಮತದಾನ ಪ್ರಕ್ರಿಯೆ ಆರಂಭ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News