ಲಕ್ಷ್ಮಣ್ ಸವದಿಗೆ ಟಿಕೆಟ್ ವಿಚಾರ; ಸಿಡಿ ವಿಚಾರ ಬಿಟ್ಟು ಮಾತನಾಡಿ ಎಂದ ಬಿ.ವೈ.ವಿಜಯೇಂದ್ರ

ಜನರಿಗೆ ವಿದ್ಯುತ್, ಅಕ್ಕಿ ಉಚಿತವಾಗಿ ನೀಡುತ್ತೇನೆಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಇಷ್ಟು ದಿನ ಏನು ಮಾಡುತಿದ್ದರು? ಜನರ ಕಣ್ಣಿಗೆ ಮಣ್ಣು ಎರಚುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

Written by - Puttaraj K Alur | Last Updated : Mar 13, 2023, 09:10 PM IST
  • ಯಾರು ಸೂಕ್ತ ಅಭ್ಯರ್ಥಿ ಎಂಬುದನ್ನು ಹೈಕಮಾಂಡ್ ನಾಯಕರು ಬಗೆಹರಿಸುತ್ತಾರೆ
  • ಗೊಂದಲ ಮೀರಿ ಪಕ್ಷದ ನಾಯಕರು, ಕಾರ್ಯಕರ್ತರು ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುತ್ತಾರೆ
  • ಲಕ್ಷ್ಮಣ್ ಸವದಿಗೆ ಅಥಣಿಯಿಂದ ಟಿಕೆಟ್ ಕೊಡುವ ವಿಚಾರವಾಗಿ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ
ಲಕ್ಷ್ಮಣ್ ಸವದಿಗೆ ಟಿಕೆಟ್ ವಿಚಾರ; ಸಿಡಿ ವಿಚಾರ ಬಿಟ್ಟು ಮಾತನಾಡಿ ಎಂದ ಬಿ.ವೈ.ವಿಜಯೇಂದ್ರ title=
'ಸಿಡಿ ವಿಚಾರ ಬಿಟ್ಟು ಮಾತನಾಡಿ'

ಚಿಕ್ಕೋಡಿ: ಲಕ್ಷ್ಮಣ್ ಸವದಿಗೆ ಅಥಣಿಯಿಂದ ಟಿಕೆಟ್ ಕೊಡುವ ವಿಚಾರವಾಗಿ ಮಾತನಾಡಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ‘ಯಾರು ಸೂಕ್ತ ಅಭ್ಯರ್ಥಿ ಎಂಬುದನ್ನು ಹೈಕಮಾಂಡ್ ನಾಯಕರು ಬಗೆಹರಿಸುತ್ತಾರೆ’ ಎಂದು ಹೇಳಿದ್ದಾರೆ.

ಚಿಕ್ಕೋಡಿಯಲ್ಲಿ ಸೋಮವಾರ ಮಾನಾಡಿರುವ ಅವರು,  ಸಿಡಿ ವಿಚಾರ ಬಿಟ್ಟು ಮಾತನಾಡಿ ಎಂದು ಹೇಳಿದರು. ಬಿಜೆಪಿ ರಾಷ್ಟ್ರೀಯ ಪಕ್ಷ, ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದೆ. ಮುಂದಿನ ಬಾರಿ ಅಧಿಕಾರಕ್ಕೆ ಬರುವ ಪಕ್ಷವಾಗಿರುವುದರಿಂದ ಸಹಜವಾಗಿ ಪೈಪೋಟಿ ಇರುತ್ತದೆ. ಏನೇ ಪೈಪೋಟಿ ಇದ್ದರೂ ಕೇಂದ್ರ ನಾಯಕರು ಕುಂತು ಬಗೆಹರಿಸುತ್ತಾರೆ. ಯಾರು ಸೂಕ್ತ ಅಭ್ಯರ್ಥಿ ಎಂಬುದನ್ನು ಅವರೇ ನಿರ್ಧರಿಸಲಿದ್ದಾರೆ’ ಎಂದು ಹೇಳಿದರು.

ಬೆಳಗಾವಿ ಬಿಜೆಪಿಯಲ್ಲಿ ಗೊಂದಲ ವಿಚಾರವಾಗಿ ಮಾತನಾಡಿರುವ ಅವರು, ‘ಆಡಳಿತ ನಡೆಸುವ ಪಕ್ಷದಲ್ಲಿ ಸಹಜವಾಗಿ ಗೊಂದಲವಿದೆ. ಎಲ್ಲ  ಗೊಂದಲವನ್ನು ಮೀರಿ ಪಕ್ಷದ ನಾಯಕರು, ಕಾರ್ಯಕರ್ತರು ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುತ್ತಾರೆ’ ಎಂದು ಹೇಳಿದ್ದಾರೆ. ಶಿಸ್ತಿನ ಪಕ್ಷ ಅಂತಾ ಹೇಳುತ್ತಿರಿ, ಯಾಕೆ ಈ ಭಿನ್ನಾಭಿಪ್ರಾಯ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮೊಗದಲ್ಲಿ ನಗೆ ಬೀರಿ ಎಲ್ಲವೂ ಸರಿ ಹೋಗುತ್ತೆ ಎಂದರು.

ಇದನ್ನೂ ಓದಿ: Savitribai Phule Death Anniversary: ಕೇವಲ 9ನೇ ವಯಸ್ಸಿನಲ್ಲಿ ಮದುವೆ, ಬಳಿಕ ಸಾವಿತ್ರಿ ಬಾಯಿ ಫುಲೆ ಸಂಘರ್ಷ

ಬೆಂಗಳೂರು ಮತ್ತು ಮೈಸೂರು ನ್ಯಾಷನಲ್ ಹೈವೇ ವಿಚಾರವಾಗಿ ಮಾತನಾಡಿದ ಅವರು, ‘ಕಾಂಗ್ರೆಸ್ ಮುಂದೆ ಯಾವುದೇ ವಿಚಾರ ಉಳಿದಿಲ್ಲ. ಜನರಿಗೆ ವಿದ್ಯುತ್, ಅಕ್ಕಿ ಉಚಿತವಾಗಿ ನೀಡುತ್ತೇನೆಂದು ಹೇಳುತ್ತಾರೆ. ಇಷ್ಟು ದಿನ ಕಾಂಗ್ರೆಸ್ ನಾಯಕರು ಏನು ಮಾಡುತಿದ್ದರು? ಜನರ ಕಣ್ಣಿಗೆ ಮನ್ನು ಎರಚುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ. ಅವರಿಗೆ ಯಾವುದೇ ವಿಚಾರಗಳು ಗೊತ್ತಿಲ್ಲ, ಹೀಗಾಗಿ ಬೆಂ-ಮೈ ಹೈವೇ ಖ್ಯಾತೆ ತೆಗೆದಿದ್ದಾರೆ’ ಎಂದು ಕುಟುಕಿದರು.

ಶಿವಮೊಗ್ಗ ಏರ್ಪೋರ್ಟ್ ಕಾಮಗಾರಿ 2009ರಲ್ಲಿ ಪ್ರಾರಂಭವಾಯಿತು. ಆದರೆ ಮಧ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು, ಅದನ್ನು ಪುರ್ಣ ಮಾಡಲು ಅವರಿಗೆ ಆಗ್ಲಿಲ್ಲ. ಬಿ.ಎಸ್.ಯಡಿಯೂರಪ್ಪನವರು ಸಿಎಂ ಆದ ಮೇಲೆ ಪೂರ್ಣವಾಗಿದೆ ಎಂದರು. ವಲಸಿಗ ಬಿಜೆಪಿಯವರಿಗೆ ಟಿಕೆಟ್ ವಿಚಾರವಾಗಿ ಮಾತನಾಡಿದ ಅವರು, ‘ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ಪಕ್ಷ ತೀರ್ಮಾನ ಮಾಡುತ್ತದೆ ಎಂದು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಶಹಾಬಂದರ ಗ್ರಾಮದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Lok Sabha Election 2024 : ಲೋಕ ಚುನಾವಣೆಯಲ್ಲಿ ಸೊತ್ತಿದ್ದ 160 ಸ್ಥಾನಗಳನ್ನು ಗೆಲ್ಲಲು ಬಿಜೆಪಿ ಮಾಸ್ಟರ್‌ಪ್ಲಾನ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News