ಗೋಹತ್ಯೆ ನಿಷೇಧದ ಬಗ್ಗೆ ಜಾಣಮೌನ ವಹಿಸುವ JDSನಿಂದ ನಂದಿನಿ ಹಾಲಿಗೆ ಹುಳಿ ಹಿಂಡುವ ಕೆಲಸ: ಬಿಜೆಪಿ

ಸಿಂಗಾಪುರ್, ದುಬೈ, ಸೌದಿ ಅರೇಬಿಯಾದಂಥ ವಿದೇಶಿ ಮಾರುಕಟ್ಟೆಯಲ್ಲಿ ನಂದಿನಿ ಯಶಸ್ವಿ ವ್ಯವಹಾರ ನಡೆಸಲು ಬಿಜೆಪಿ‌ ಕಾರಣ. ಕೆಎಂಎಫ್‌ನ ಶೇ.15ರಷ್ಟು ವಹಿವಾಟು ಹೊರ ರಾಜ್ಯಗಳಿಂದಲೇ ಆಗುತ್ತಿದೆ ಎಂದು ಬಿಜೆಪಿ‌ ಹೇಳಿದೆ.

Written by - Puttaraj K Alur | Last Updated : Apr 10, 2023, 06:25 PM IST
  • ನಂದಿನಿ Vs ಅಮುಲ್ ವಿವಾದ ವಿಚಾರವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಬಿಜೆಪಿ ಆಕ್ರೋಶ
  • ಹಾಲಿನ ಬಗ್ಗೆ ಹುಸಿ ಪ್ರೀತಿ ತೋರುವವರು ಗೋಮಾತೆಯ ರಕ್ಷಣೆಗೆ ಎಂದಾದರೂ ನಿಂತಿದ್ದರೇ?
  • ಗೋಹತ್ಯೆ ನಿಷೇಧದ‌ ಬಗ್ಗೆ ಜಾಣಮೌನ ವಹಿಸುವ JDS ರಾಜಕೀಯಕ್ಕೆ ನಂದಿನಿ ಹಾಲಿಗೆ ಹುಳಿ ಹಿಂಡುವ ಕೆಲಸ ಮಾಡುತ್ತಿದೆ
ಗೋಹತ್ಯೆ ನಿಷೇಧದ ಬಗ್ಗೆ ಜಾಣಮೌನ ವಹಿಸುವ JDSನಿಂದ ನಂದಿನಿ ಹಾಲಿಗೆ ಹುಳಿ ಹಿಂಡುವ ಕೆಲಸ: ಬಿಜೆಪಿ title=
ನಂದಿನಿ Vs ಅಮುಲ್ ವಿವಾದ

ಬೆಂಗಳೂರು: ನಂದಿನಿ Vs ಅಮುಲ್ ವಿವಾದ ವಿಚಾರವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಸೋಮವಾರ ಸರಣಿ ಟ್ವೀಟ್ ಮಾಡಿದ್ದು, ‘ಹಾಲಿನ ಬಗ್ಗೆ ಹುಸಿ ಪ್ರೀತಿ ತೋರುವವರು ಗೋಮಾತೆಯ ರಕ್ಷಣೆಗೆ ಎಂದಾದರೂ ನಿಂತಿದ್ದರೇ? 2010ರಲ್ಲಿ ಮೊದಲ ಬಾರಿ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡಿಸಿದವರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು. ಕಾಂಗ್ರೆಸ್ ಪರಂಪರೆಯ ಅಂದಿನ ರಾಜ್ಯಪಾಲರು ಅದಕ್ಕೆ ಸಹಿ ಮಾಡಲಿಲ್ಲ. 2020ರಲ್ಲಿ  ಮತ್ತೆ ಕಾಯ್ದೆ ಜಾರಿಗೆ ತಂದದ್ದೂ ನಾವೇ’ ಎಂದು ಹೇಳಿದೆ.

#BJPYeBharavase ಹ್ಯಾಶ್‍ಟ್ಯಾಗ್‍ ಬಳಸಿ ಟ್ವೀಟ್ ಮಾಡಿರುವ ಬಿಜೆಪಿ, ‘ಗೋಹತ್ಯೆ ನಿಷೇಧದ‌ ಬಗ್ಗೆ ಜಾಣಮೌನ ವಹಿಸುವ ಜೆಡಿಎಸ್ ರಾಜಕೀಯಕ್ಕಾಗಿ ನಂದಿನಿ ಹಾಲಿಗೆ ಹುಳಿ ಹಿಂಡುವ ಕೆಲಸ ಮಾಡುತ್ತಿದೆ. ಸಿಂಗಾಪುರ್, ದುಬೈ, ಸೌದಿ ಅರೇಬಿಯಾದಂಥ ವಿದೇಶಿ ಮಾರುಕಟ್ಟೆಯಲ್ಲಿ ನಂದಿನಿ ಯಶಸ್ವಿ ವ್ಯವಹಾರ ನಡೆಸಲು ಬಿಜೆಪಿ‌ ಕಾರಣ. ಕೆಎಂಎಫ್‌ನ ಶೇ.15ರಷ್ಟು ವಹಿವಾಟು ಹೊರ ರಾಜ್ಯಗಳಿಂದಲೇ ಆಗುತ್ತಿದೆ’ ಎಂದು ಹೇಳಿದೆ.

ಇದನ್ನೂ ಓದಿ: Amul vs Nandini: ಅಮೂಲ್ ಪರ ಬಿಜೆಪಿ ನಿಂತಿರುವುದೇ ನಂದಿನಿಗೆ ಅಪಾಯ- ಕಾಂಗ್ರೆಸ್

‘ಹೈನುಗಾರಿಕೆಗೆ ಬಿಜೆಪಿ ನೀಡಿದಷ್ಟು ಪ್ರೋತ್ಸಾಹ ‌ಹಿಂದಿನ ಯಾವ ಆಡಳಿತವೂ ನೀಡಿಲ್ಲ. 25 ಲಕ್ಷ ಹೈನುಗಾರರಿಗೆ ಸಾಲ ಸೌಲಭ್ಯಕ್ಕಾಗಿ ಕ್ಷೀರ ಸಮೃದ್ಧಿ ಸಹಕಾರಿ ಬ್ಯಾಂಕ್ ಸ್ಥಾಪನೆ, ಪ್ರತಿ ಲೀಟರ್‌ಗೆ ₹5 ಪ್ರೋತ್ಸಾಹಧನ, ಗೋಹತ್ಯೆ ನಿಷೇಧ‌ ಕಾಯ್ದೆ ಮತ್ತು ಮೆಗಾ ಡೈರಿಗಳ ಸ್ಥಾಪನೆ ಮಾಡಲಾಗಿದೆ. ದೊಡ್ಲ (ತೆಲಂಗಾಣ), ಹೆರಿಟೇಜ್ (ಆಂಧ್ರ), ಆರೋಕ್ಯ (ತಮಿಳುನಾಡು), ಮಿಲ್ಕಿ ಮಿಸ್ಟ್ (ತ. ನಾಡು), ತಿರುಮಲ ( ತ. ನಾಡು ) ಮತ್ತು ಹಟ್ಸನ್ (ತ.ನಾಡು) ಎಲ್ಲವೂ ನಂದಿನಿ‌ ಎದುರಿಸಿದ ಬ್ರ್ಯಾಂಡ್‌ಗಳೇ. ಹಾಲಿನ ಹುಡಿ ಉತ್ಪಾದನೆ ಸಾಮರ್ಥ್ಯವನ್ನು ದಿನಕ್ಕೆ 320 ಟನ್‌ಗೆ ಹೆಚ್ಚಿಸಿದ್ದು ನಾವು’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

‘ನಂದಿನಿ ಮೂಲಕ 25 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಹೈನುಗಾರರ ದಿಕ್ಕು ತಪ್ಪಿಸಬಹುದು ಎಂಬುದು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಹುನ್ನಾರ. ಆದರೆ ಎಲ್ಲಾ ರೀತಿಯಿಂದಲೂ ಪ್ರಪಂಚಕ್ಕೆ ತೆರೆದುಕೊಂಡಿರುವ ಕರ್ನಾಟಕದ ಹೈನುಗಾರರು ನಿಮ್ಮ ಅಗ್ಗದ ಚುನಾವಣಾ ಪ್ರಚಾರಕ್ಕೆ ಮಾರುಹೋಗುವುದಿಲ್ಲ’ವೆಂದು ಬಿಜೆಪಿ ಕುಟುಕಿದೆ.

ಇದನ್ನೂ ಓದಿ: Karnataka Assembly Elections: ಕುಮಟಾ ಕಾಂಗ್ರೆಸ್ ನಲ್ಲಿ ಅಸಮಾಧಾನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News