ಚಾಮರಾಜನಗರದಲ್ಲಿ ಮಹಿಳಾ ಮತದಾರರೇ ಅಧಿಕ: ಹೊಸ ವೋಟರ್ಸ್ 12 ಸಾವಿರ

Karnataka Assembly Election: ಜಿಲ್ಲೆಯಲ್ಲಿ 195 ಮಂದಿ ಸೇವಾ ಮತದಾರರು ಇದ್ದು 97 ಸೆಕ್ಟರ್ ಅಧಿಕಾರಿಗಳು, 12 ಪ್ಲೈಯಿಂಗ್ ಸ್ಕ್ವಾಡ್ ತಂಡ,16 ಜಿಲ್ಲಾ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಜೊತೆಗೆ, ಮಾದರಿ ನೀತಿ ಸಂಹಿತೆ ಪಾಲನೆ ಮೇಲೆ ನಿಗಾ ಇಡುವ ಉದ್ದೇಶದಿಂದ 37 ಮಂದಿ ಇರಲಿದ್ದಾರೆ.

Written by - Yashaswini V | Last Updated : Mar 29, 2023, 06:04 PM IST
  • ವಾಹನಗಳ ಅಕ್ರಮ ವಹಿವಾಟು ಮತ್ತು ನೀತಿ ಸಂಹಿತೆ ಉಲ್ಲಂಘನೆ ಚಟುವಟಿಕೆ ತಡೆಯುವ ಉದ್ದೇಶದಿಂದ 11 ಅಂತರಾಜ್ಯ ಚೆಕ್ ಪೋಸ್ಟ್ 8 ಅಂತರ್ಜಿಲ್ಲಾ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ.
  • 3 ಪಾಳಿಯಲ್ಲಿ 24*7 ಸಿಬ್ಬಂದಿ ಕರ್ತವ್ಯ ನಿರ್ವಹಿಸುವವರು ಜೊತೆಗೆ ಕಂಟ್ರೋಲ್ ರೂಂಗಳನ್ನು ತೆರೆಯಲಾಗಿದೆ
ಚಾಮರಾಜನಗರದಲ್ಲಿ ಮಹಿಳಾ ಮತದಾರರೇ ಅಧಿಕ: ಹೊಸ ವೋಟರ್ಸ್ 12 ಸಾವಿರ title=

Karnataka Assembly Election 2023: ರಾಜ್ಯ ವಿಧಾನಸಭೆ ಚುನಾವಣಾ ದಿನಾಂಕ ಘೋಷಣೆ ಹಾಗೂ ನೀತಿ ಸಂಹಿತೆ ಇಂದಿನಿಂದ ಜಾರಿಯಾದ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೊ ಜಂಟಿ ಸುದ್ದಿಗೋಷ್ಠಿ ನಡೆಸಿದರು. 

ಮೊದಲಿಗೆ ಜಿಲ್ಲಾಧಿಕಾರಿ ರಮೇಶ್ ಮಾತನಾಡಿ, 2018 ರ ಚುನಾವಣೆಯಲ್ಲಿ 976 ಇದ್ದ ಮತಗಟ್ಟೆಗಳ ಸಂಖ್ಯೆ ಈ ಬಾರಿ 982ಕ್ಕೆ ಏರಿದೆ‌‌. ಇವುಗಳಲ್ಲಿ ಹನೂರಿನಲ್ಲಿ 253 ಮತಗಟ್ಟೆ, ಕೊಳ್ಳೇಗಾಲದಲ್ಲಿ241 ಚಾಮರಾಜನಗರದಲ್ಲಿ 239 ಹಾಗೂ ಗುಂಡ್ಲುಪೇಟೆಯಲ್ಲಿ ಒಟ್ಟು 249 ಮತಗಟ್ಟೆಗಳು ಸ್ಥಾಪನೆಯಾಗಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 195 ಮಂದಿ ಸೇವಾ ಮತದಾರರು ಇದ್ದು 97 ಸೆಕ್ಟರ್ ಅಧಿಕಾರಿಗಳು, 12 ಪ್ಲೈಯಿಂಗ್ ಸ್ಕ್ವಾಡ್ ತಂಡ,16 ಜಿಲ್ಲಾ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಜೊತೆಗೆ, ಮಾದರಿ ನೀತಿ ಸಂಹಿತೆ ಪಾಲನೆ ಮೇಲೆ ನಿಗಾ ಇಡುವ ಉದ್ದೇಶದಿಂದ 37 ಮಂದಿ ಇರಲಿದ್ದಾರೆ ಎಂದು ಡಿಸಿ ತಿಳಿಸಿದರು. 

ಇದನ್ನೂ ಓದಿ- "ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರುವುದಾಗಿದ್ದರೆ, ಮೋದಿ ಅವರನ್ನು ಯಾಕೆ ವಾರಕ್ಕೊಮ್ಮೆ ರಾಜ್ಯಕ್ಕೆ ಕರೆಸುತ್ತಿದ್ದರು?"

ಎಸ್ಪಿ ಪದ್ಮಿನಿ ಸಾಹೊ ಮಾತನಾಡಿ, ವಾಹನಗಳ ಅಕ್ರಮ ವಹಿವಾಟು ಮತ್ತು ನೀತಿ ಸಂಹಿತೆ ಉಲ್ಲಂಘನೆ ಚಟುವಟಿಕೆ ತಡೆಯುವ ಉದ್ದೇಶದಿಂದ 11 ಅಂತರಾಜ್ಯ ಚೆಕ್ ಪೋಸ್ಟ್ 8 ಅಂತರ್ಜಿಲ್ಲಾ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. 3 ಪಾಳಿಯಲ್ಲಿ 24*7 ಸಿಬ್ಬಂದಿ ಕರ್ತವ್ಯ ನಿರ್ವಹಿಸುವವರು ಜೊತೆಗೆ ಕಂಟ್ರೋಲ್ ರೂಂಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು. 

ಮಹಿಳಾ ಮತದಾರರು ಅಧಿಕ: 
ಹನೂರು ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆ ಜಿಲ್ಲೆಯಲ್ಲಿ ಅಧಿಕವಾಗಿದೆ. ಹನೂರಿನಲ್ಲಿ ಪುರುಷ ಮತದಾರರು 110797  ಇದ್ದು ಮಹಿಳಾ ಮತದಾರರು 108387 ರಷ್ಟಿದ್ದಾರೆ. ಉಳಿದಂತೆ, ಕೊಳ್ಳೇಗಾಲದಲ್ಲಿ 106235 ಪುರುಷರು- 108909 ಮಹಿಳೆಯರು, ಚಾಮರಾಜನಗರದಲ್ಲಿ ಪುರುಷರು-101744 ಮಹಿಳೆಯರು106012, ಗುಂಡ್ಲುಪೇಟೆ ಕ್ಷೇತ್ರದಲ್ಲಿ 104187 ಪುರುಷ ಮತದಾರರು ಇದ್ದು 107918 ಮಹಿಳಾ ಮತದಾರರು ಇದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ 422963 ಪುರುಷ ಮತದಾರರು 431226 ಮಹಿಳಾ ಮತದಾರರು , 68 ತೃತೀಯ ಲಿಂಗಿ ಮತದಾರರು ಇದ್ದಾರೆ. 

ಇದನ್ನೂ ಓದಿ- Karnataka Assembly Elections: ಚುನಾವಣೆ ಎದುರಿಸಲು ಬಿಜೆಪಿ ಸನ್ನದ್ಧ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

12 ಸಾವಿರದಷ್ಟು ಹೊಸ ಮತದಾರರು ಜಿಲ್ಲೆಯಲ್ಲಿದ್ದು ವಿಶೇಷಚೇತನ ಮತದಾರರು 11965 , 80 ವರ್ಷ ದಾಟಿರುವ ಮತದಾರರು 23300 ರಷ್ಟು ಜಿಲ್ಲೆಯಲ್ಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News