Karnataka Assembly Election: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಂಡೆಗಳ ನಾಡಲ್ಲಿ ಗೆಲ್ಲೋರ್ ಯಾರು?

Karnataka Assembly Election: ಯಾದಗಿರಿ ಜಿಲ್ಲೆಯು ಯಾದಗಿರಿ, ಶಹಪುರ, ಸುರಪುರ, ಗುರುಮಠಕಲ್ ಎಂಬ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಈ ಬಾರಿಯ ಎಲೆಕ್ಷನ್ ಅಖಾಡದಲ್ಲಿ ವಿವಿಧ ಪಕ್ಷಗಳ ನಾಯಕರ ನಡುವೆ ಬಾರೀ ಪೈಪೋಟಿ ಏರ್ಪಟ್ಟಿದೆ. 

Written by - Yashaswini V | Last Updated : Apr 28, 2023, 07:00 PM IST
  • ಯಾದಗಿರಿ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ಮಾಹಿತಿ
  • ಯಾದಗಿರಿ, ಶಹಪುರ, ಸುರಪುರ, ಗುರುಮಠಕಲ್ ಕ್ಷೇತ್ರ
  • ಬಂಡೆಗಳ ನಾಡಲ್ಲಿ ಈ ಬಾರಿ ಅದ್ಭುತ ಎಲೆಕ್ಷನ್ ಬೆಳೆ..!
Karnataka Assembly Election: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಂಡೆಗಳ ನಾಡಲ್ಲಿ ಗೆಲ್ಲೋರ್ ಯಾರು?  title=

Karnataka Assembly Election 2023: ಯಾದಗಿರಿ ಜಿಲ್ಲೆಯಲ್ಲಿ ಒಟ್ಟು ನಾಲ್ಕು ವಿಧಾನಸಭಾ ಕ್ಷೇತಗಳಿವೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಂಡೆಗಳ ನಾಡಲ್ಲಿ ಗೆಲ್ಲೋರ್ ಯಾರು? ಯಾದಗಿರಿ ಜಿಲ್ಲೆಯು ಯಾದಗಿರಿ, ಶಹಪುರ, ಸುರಪುರ, ಗುರುಮಠಕಲ್ ಎಂಬ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಈ ಬಾರಿಯ ಎಲೆಕ್ಷನ್ ಅಖಾಡದಲ್ಲಿ ವಿವಿಧ ಪಕ್ಷಗಳ ನಾಯಕರ ನಡುವೆ ಬಾರೀ ಪೈಪೋಟಿ ಏರ್ಪಟ್ಟಿದೆ.  ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾದಗಿರಿ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಯಾರ ಕಡೆ ಜನರ ಒಲವಿದೆ ಎಂದು ತಿಳಿಯೋಣ... 

ಯಾದಗಿರಿ ರಾಜ್ಯದ 30ನೇ ಜಿಲ್ಲೆಯಾಗಿ 2010ರಲ್ಲಿ ರಚನೆಯಾಯಿತು. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ಯಾದಗಿರಿ ಜಿಲ್ಲೆ ಅಸ್ವಿತ್ವಕ್ಕೆ ಬಂದಿತು. ಮಲ್ಲಿಕಾರ್ಜುನ ಖರ್ಗೆ, ಬಾಬುರಾವ ಚಿಂಚನಸೂರು, ಡಾ.ಎ.ಬಿ.ಮಾಲಕರೆಡ್ಡಿ, ಶರಣಬಸಪ್ಪ ದರ್ಶನಾಪುರ, ರಾಜುಗೌಡ ಸೇರಿ ವಿವಿಧ ರಾಜಕಾರಣಿಗಳ ಕರ್ಮ ಭೂಮಿ
ಜಿಲ್ಲೆಯಲ್ಲಿ 6 ತಾಲೂಕು, ಶಹಾಪುರ, ಸುರಪುರ, ಯಾದಗಿರಿ, ಗುರುಮಠಕಲ್ ನಾಲ್ಕು ವಿಧಾನಸಭಾ ಕ್ಷೇತ್ರಗಳು ಇವೆ. ಈ ಜಿಲ್ಲೆಯ ಕ್ಷೇತ್ರಾವಾರು ವಿವರ ಕೆಳಕಂಡಂತಿದೆ. 

ರಾಜ್ಯದಲ್ಲಿಯೇ 30 ನೇ ಜಿಲ್ಲೆಯಾದ ಯಾದಗಿರಿ ಚಿಕ್ಕಜಿಲ್ಲೆಯಾದ್ರೂ ಘಟಾನುಘಟಿ ನಾಯಕರಿಗೆ ರಾಜಕೀಯ ಜನ್ಮ ನೀಡಿದೆ.   ಎಐಸಿಸಿ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಪ್ತ ಖಾತೆಯ ಮಾಚಿ ಸಚಿವ ಬಾಬುರಾವ ಚಿಂಚನಸೂರ ಮಾಜಿ ಸಚಿವರಾದ ಎಬಿ ಮಲಕರಡ್ಡಿ.,ಶರಣಬಸಪ್ಪ ದರ್ಶಾನಪೂರ, ರಾಜುಗೌಡ ಹೀಗೆ  ನಾಯಕರನ್ನು ಯಾದಗಿರಿಯಿಂದ ರಾಜ್ಯಕ್ಕೆ ಕೊಟ್ಟಿದೆ. ಯಾದಗಿರಿ 2010 ರಲ್ಲಿ ಅಂದಿನ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ  ಅಖಂಡ ಕಲಬುರಗಿ ಜಿಲ್ಲೆಯಿಂದ ವಿಭಜಿತಗೊಳಿಸಿ  ಯಾದಗಿರಿ ಜಿಲ್ಲೆಯನ್ನಾಗಿ ಘೋಷಣೆ ಮಾಡಿದ ನಂತರ  2 ಚುನಾವಣೆ ಕಂಡಿದೆ. ಜಿಲ್ಲೆಯಲ್ಲಿ 6 ತಾಲ್ಲೂಕುಗಳಿದ್ದು, ಶಹಾಪುರ, ಸುರಪುರ, ಯಾದಗಿರಿ, ಗುರುಮಠಕಲ್ ವಿಧಾನಸಭಾ ಸೇರಿ 4 ಕ್ಷೇತ್ರ ಒಳಗೊಂಡಿದೆ.

ಮೂರು ಪಕ್ಷಗಳಿಗಗೆ ಅಧಿಕಾರವನ್ನು ಯಾದಗಿರಿ ಜಿಲ್ಲೆಯಲ್ಲಿ ಕೊಟ್ಟಿದೆ. ಇರುವ ನಾಲ್ಕು ಕ್ಷೇತ್ರಗಳಲ್ಲಿ ಮೂರು ಪಕ್ಷ ಆಡಳಿತದಲ್ಲಿವೆ.  ಹಾಲಿ ಶಾಸಕರು
ಬಿಜೆಪಿ: ವೆಂಕಟರಡ್ಡಿಗೌಡ ಮುದ್ನಾಳ, ಯಾದಗಿರಿ, ನರಸಿಂಹನಾಯಕ(ರಾಜುಗೌಡ) ಸುರಪುರ. ಕಾಂಗ್ರೇಸ್ : ಶರಣಬಸಪ್ಪಗೌಡ ದರ್ಶಾನಪೂರ ಶಹಾಪೂರ
ಜೆಡಿಎಸ್ : ನಾಗನಗೌಡ ಕಂದಕೂರ ಗುರಮಿಠಕಲ್.
 
>> ಯಾದಗಿರಿ ವಿಧಾನಸಭಾ ಕ್ಷೇತ್ರ: 
ಇದೀಗ 2023ರ ಸಾರ್ವತ್ರಿಕ ಚುನಾವಣೆ ಅಖಾಡಕ್ಕೆ ಇಳಿಯಲು ವಿವಿಧ ಪಕ್ಷಗಳಿಂದ  ಪೈಪೋಟಿ ಏರ್ಪಟ್ಟಿದೆ. ಸದ್ಯ ಯಾದಗಿರಿ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು
ಬಿಜೆಪಿಯ ಹಾಲಿ ಶಾಸಕ ಅಭ್ಯರ್ಥಿ, ವೆಂಕಟರೆಡ್ಡಿಗೌಡ ಮುದ್ನಾಳ,
ಕಾಂಗ್ರೆಸ್ ಚನ್ನಾರೆಡ್ಡಿ ಪಾಟೀಲ ತುನ್ನೂರ.
ಜೆಡಿಎಸ್ ಪಕ್ಷದಿಂದ ಎ.ಬಿ. ಮಾಲಕರಡ್ಡಿ.
ಪಕ್ಷೇತರ : ಹಣಮೇಗೌಡ ಬೀರನಕಲ್ ಕಣದಲ್ಲಿದ್ದಾರೆ. 

ಕ್ಷೇತ್ರದ ಮತದಾರರ ವಿವರ:
ಒಟ್ಟು ಮತದಾರರು: 227988
ಪುರಷರು : 1,13,735
ಮಹಿಳೆಯರು: 1,14,253

ಯಾದಗಿರಿ ವಿಧಾನಸಭಾ ಕ್ಷೇತ್ರದ ಜಾತಿವಾರು  ಲೆಕ್ಕಾಚಾರ:  
ಲಿಂಗಾಯತ : 55000
ಪ. ಪಂಗಡ: 33000
ಕುರುಬ: 30000
ಮುಸ್ಲಿಂ:  45000
ಪರಿಶಿಷ್ಟ ಜಾತಿ : 43000
ಕಬ್ಬಲಿಗ :32000
ಇತರೆ : 40000

ಈ ಹಿಂದಿನ 2018ರಲ್ಲಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೆಂಕಟರಡ್ಡಿ ಮುದ್ನಾಳ ಗೆಲುವು ಪಡೆದಿದ್ದರು.

ಯಾದಗಿರಿ ವಿಧಾನಸಭಾ ಕ್ಷೇತ್ರ  ಬಿಜೆಪಿ ಪ್ಲಸ್: 
* ಬಿಜೆಪಿಯ ಸಂಘಟನಾತ್ಮಕ ಕಾರ್ಯ
* ಜಿಲ್ಲೆ ರಚಿಸಿದ್ದ ಯಡಿಯೂರಪ್ಪ ವರ್ಚಸ್ಸು
* ವೆಂಕಟರೆಡ್ಡಿ ಮುದ್ನಾಳ್ ಯಡಿಯೂರಪ್ಪನ ಆಪ್ತ
* ವೆಂಕಟರೆಡ್ಡಿ ಮುದ್ನಾಳ್ ಮನೆತನದ ವರ್ಚಸ್ಸು
* ನಗರದಲ್ಲಿ ಒಂದಾದ ಹಿಂದೂ ಮತಗಳು

ಯಾದಗಿರಿ ವಿಧಾನಸಭಾ ಕ್ಷೇತ್ರ ಬಿಜೆಪಿ ಮೈನಸ್: 
* ಶಾಸಕ ವೆಂಕಟರೆಡ್ಡಿ ಮುದ್ನಾಳ ಜನರ ಸಂಪರ್ಕದಲ್ಲಿಲ್ಲ
* ಶಾಸಕರಾಗಿದ್ದರೂ ಕ್ಷೇತ್ರದ ಅಭಿವೃದ್ಧಿ ಮಾಡಿಲ್ಲ
* ಆಂತರಿಕ ಕಚ್ಚಾಟ ಸ್ಥಳಿಯ ಮುಖಂಡರ ನಿರ್ಲಕ್ಷ್ಯ
* ಅಹಿಂದ ಮತಗಳು ಒಳೇಟು ಕೊಡೋ ಸಾಧ್ಯತೆ
* ಹಿಂದುತ್ವವನ್ನೇ ಹೆಚ್ಚಾಗಿ ನಂಬಿರೋದು
* ಹೆಚ್ಚಾಗಿದೆ ಶಾಸಕರ ಆಡಳಿತ ವಿರೋಧಿ ಅಲೆ

ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ಲಸ್:-  
* ಕಾಂಗ್ರೆಸ್ ಭದ್ರಕೋಟೆ
* ಜಿಲ್ಲೆಯಲ್ಲಿ ಪಕ್ಷಕ್ಕಿದೆ ಭದ್ರ ಬುನಾದಿ
* ಅಹಿಂದ ಮತಗಳು ಜೊತೆಗಿರೋದು
* ಕ್ಷೇತ್ರದ ಮೇಲೆ ಮಲ್ಲಿಕಾರ್ಜುನ ಖರ್ಗೆ ಅವರ ಹಿಡಿತ
* ಕಳೆದ ಬಾರಿಯ ತಪ್ಪನ್ನ ತಿದ್ದಿಕೊಂಡು ಹೋಗಲು *ಒಗ್ಗಟ್ಟಿನ ಮಂತ್ರ
* ಹಾಲಿ ಶಾಸಕರ ಆಡಳಿತ ವಿರೋಧಿ ಅಲೆ

ಕಾಂಗ್ರೆಸ್ ಮೈನಸ್: 
* ನಾಯಕರಲ್ಲಿ ಸಮನ್ವಯತೆ ಕೊರತೆ
* ಪಕ್ಷದಲ್ಲಿ ಸ್ವ ಪ್ರತಿಷ್ಟೆಗಾಗಿ ನಾಯಕರ ಗುದ್ದಾಟ
* ಸತತ ಕಾಂಗ್ರೆಸ್ ಗೆದ್ದಿದ್ರೂ ಅಭಿವೃದ್ಧಿ ಕಾಣದೇ ಹಿಂದುಳಿದ ಜಿಲ್ಲೆ ಅನ್ನೋ ಹಣೆಪಟ್ಟಿ
* ಕಾರ್ಯಕರ್ತರು, ನಾಯಕರ ದಂಡೇ ಇದ್ರೂ ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸು ಬೆಳೆಸಿಕೊಂಡಿರೋದು
* ಜೆಡಿಎಸ್ ಅಭ್ಯರ್ಥಿ ಎ ಬಿ ಮಲಕರಡ್ಡಿ  ಇರೋದು ಲಿಂಗಾಯತ , ಅಲ್ಪಸಂಖ್ಯಾತ  ಮತಗಳ ವಿಭಜನೆ

ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ  ಜೆಡಿಎಸ್ ಪ್ಲಸ್: 
* ಪ್ರಬಲ ನಾಯಕ ಜೆಡಿಎಸ್ ಅಭ್ಯರ್ಥಿ ಆಗಿರುವದು
* ಕಲ್ಯಾಣ ಕರ್ನಾಟಕ ಹಿರಿಯ ರಾಜಕಾರಿಣಿ ಈ ಭಾರಿ ಟಿಕೆಟ್ ಕೊಟ್ಟಿರುವದು.
* ಪಕ್ಕದ ಕ್ಷೇತ್ರ ಗುರುಮಠಕಲ್ ನಲ್ಲಿ ಜೆಡಿಎಸ್ ಶಾಸಕರು ಇರೋದ್ರಿಂದ ಒಂದಷ್ಟು ಬಲ
* ಕಳೆದೆ ಬಾರಿ ಎ ಬಿ ಮಲಕರಡ್ಡಿ ಸೋತಿರೋದ್ರಿಂದ ಹೆಚ್ಚಾದ ಅನುಕಂಪ.

ಜೆಡಿಎಸ್ ಮೈನಸ್: 
*ಪಕ್ಷಕ್ಕೆ ನೆಲೆ ಇಲ್ಲ
* ಒಂದೇ ಕೋಮು ನಂಬಿರೋದು
* ನಾಯಕರು, ಕಾರ್ಯಕರ್ತರು ಇಲ್ಲ
* ವೈಯಕ್ತಿಕ ವರ್ಚಸ್ಸೂ ಪಕ್ಷದ ವರ್ಚಸ್ಸೂ ಇಲ್ಲ
 
>> ಗುರುಮಠಕಲ್ ವಿಧಾನಸಭಾ ಕ್ಷೇತ್ರ:- 
ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ರಾಜಕೀಯ ಜೀವನ ಆರಂಭಿಸಿದ ಕ್ಷೇತ್ರ ಕಲಬುರಗಿ  ಲೋಕಸಭಾ ವ್ಯಾಪ್ತಿಯ ಗುರುಮಠಕಲ್ ಕ್ಷೇತ್ರ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕ್ಷೇತ್ರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಕೈ ಸೇರಿತ್ತು. 

ಗುರುಮಠಕಲ್ ಮತಕ್ಷೇತ್ರದ ಮತದಾರರ ವಿವರ
ಒಟ್ಟು ಮತದಾರರು: 2,93,387
ಪುರಷರು :119316
ಮಹಿಳೆಯರು: 1,200,71

ಗುರುಮಠಕಲ್ ಮತಕ್ಷೇತ್ರದ ಜಾತಿವಾರು  ಲೆಕ್ಕಾಚಾರ: 
ಲಿಂಗಾಯತ : 42000
ಪ. ಪಂಗಡ: 17000
ಕುರುಬ: 28000
ಮುಸ್ಲಿಂ:  29000
ಪ.ಜಾತಿ : 37000
ಕಬ್ಬಲಿಗ :70000
ಇತರೆ : 40000

ಈ ಹಿಂದಿನ 2018 ರ ಚುನಾವಣೆಯಲ್ಲಿ ಜೆಡಿಎಸ್ ತನ್ನ ತೆಕ್ಕೆಗೆ ಗುರುಮಿಠಕಲ್ ಮತಕ್ಷೇತ್ರ ತೆಗೆದುಕೊಂಡಿತ್ತು.
ಜೆಡಿಎಸ್: ನಾಗನಗೌಡ ಕಂದಕೂರ ಮತಗಳು - 79627
ಪ್ರತಿಸ್ಪರ್ಧಿ :  ಬಾಬುರಾವ ಚಿಂಚನಸೂರ - 54147
ಗೆಲುವಿನ ಅಂತರ : 24480 .

ಗುರುಮಠಕಲ್ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪ್ಲಸ್:- 
* ಕಂದಕೂರು ಕುಟುಂಬದ ವರ್ಚಸ್ಸು
*ಮಾಜಿ ಪಿಎಂ ದೇವೇಗೌಡ್ರ ಕುಟುಂಬದ ಜೊತೆಗೆ ಉತ್ತಮ ಒಡನಾಟ
*ಶರಣಗೌಡ ಕಂದಕೂರು ಯುವ ನಾಯಕನಾಗಿದ್ದು, ಯುವಕರ ಪಡೆ ಕಟ್ಟಿದ್ದಾರೆ
*ಈ ಬಾರಿ ಜೆಡಿಎಸ್ ಶಾಸಕರಿದ್ದ, ಜನರೊಟ್ಟಿಗೆ ಉತ್ತಮ ಒಡನಾಟ. 

ಜೆಡಿಎಸ್ ಮೈನಸ್:
*ಪಕ್ಷದ ಮತದಾರರು ಇಲ್ಲದೇ ಇರೋದು
*ಕೇವಲ ವೈಯಕ್ತಿಕ ವರ್ಚಸ್ಸನ್ನೇ ನಂಬಿರೋದು
*ಶರಣಗೌಡ ಕಂದಕೂರ ಅಹಂಕಾರ ತೋರ್ತಾರೆ ಅನ್ನೋ ಆರೋಪ
*ಈ ಬಾರಿ ಶಾಸಕರಾಗಿ ಆಯ್ಕೆ ಆಗಿದ್ರೂ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದೇ ಇರೋದು.
*ತಳ ಮಟ್ಟದ ಸಮುದಾಯಗಳ ತುಳಿಯುತ್ತಾರೆ ಎಂಬ ಆರೋಪ

ಗುರುಮಠಕಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ಲಸ್: 
* ಮಲ್ಲಿಕಾರ್ಜುನ ಖರ್ಗೆ ಸತತ ಎಂಟು ಬಾರಿ ಶಾಸಕರಾಗಿ ಆಯ್ಕೆ ಆಗಿರೋದು
* ಪಕ್ಷಕ್ಕೆ ಭದ್ರ ಬುನಾದಿ 
* ಅಹಿಂದ ಮತದಾರರ ಸಂಖ್ಯೆ ಹೆಚ್ಚಳವಾಗಿರೋ ಕ್ಷೇತ್ರ
* ಖರ್ಗೆ ಹಿಡಿತ ಹೊಂದಿರುವ ಗುರುಮಠಕಲ್ ವಿಧಾನಸಭಾ ಕ್ಷೇತ್ರ.
* ಕೋಲಿ ಸಮಾಜದ ಬಾಬುರಾವ ಚಿಂಚನಸೂರ ಅಭ್ಯರ್ಥಿಯಾಗರೋದು.

ಕಾಂಗ್ರೆಸ್ ಮೈನಸ್:
*ಖರ್ಗೆ ಎಂಟು ಬಾರಿ ಶಾಸಕರಾಗಿ ಆಯ್ಕೆ ಆಗಿದ್ರು ಅಭಿವೃದ್ಧಿ ಆಗದೇ ಇರೋದು
*ಖರ್ಗೆ ಎಂಟು ಬಾರಿ ಶಾಸಕರಾಗಿದ್ರೂ ಎರಡನೇ ಹಂತದ ನಾಯಕರಿಲ್ಲ ಅನ್ನೋ ಕೊರಗು
*ಬಾಬುರಾವ್ ಚಿಂಚನಸೂರ ಪಕ್ಷ ತೊರೆದು ಬಂದ್ ಅಸಮಾದಾನಗೊಂಡ ಮೂಲ ನಾಯಕರು.
*ಬಿಜೆಪಿ ಕೋಲಿ ಸಮಾಜದ ನಾಯಕಯನ್ನು ಕಣಕ್ಕಿಳಿಸಿರುವದು ವಿಭಜನೆಯಾಗುವ ಸಾಧ್ಯತೆ ಕೋಲಿ ಸಮುದಾಯದ ಮತಗಳು.

ಗುರುಮಠಕಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪ್ಲಸ್:-
* ಹೊಸ ಮುಖದ ಪ್ರಯೋಗಕ್ಕೆ ಮುಂದಾದ ಬಿಜೆಪಿ.
* ಕೋಲಿ ಸಮಾಜದ ಮಹಿಳಾ ಅಭ್ಯರ್ಥಿ ಯಾಗಿರುವ ಲಲಿತಾ ಅನಪೂರ.
* ಬಿಜೆಪಿಯಪಕ್ಷ ಸಂಘಟನೆ
* ಕ್ಷೇತ್ರದಲ್ಲಿ ಹೆಚ್ಚಾದ ಕೋಳಿ, ಕಬ್ಬಲಿಗ ಸಮುದಾಯ
* ಮಹಿಳೆಗೆ ಸ್ಥಾನ ಮಾನ ಪಕ್ಷ ನೀಡಿ ಬಂದಿರೋದ್ರಿಂದ ಕೋಲಿ
* ಕಬ್ಬಲಿಗ ಸಮುದಾಯದ ಮತಗಳು ಹೆಚ್ಚಾಗಿ ಬರೋ ಸಾದ್ಯತೆ

ಬಿಜೆಪಿ ಮೈನಸ್
*ಪಕ್ಷಕ್ಕೆ ಭದ್ರ ಬುನಾದಿ ಇಲ್ಲದೇ ಇರೋದು
*ಬಾಬುರಾವ್ ಚಿಂಚನಸೂರ ಪಕ್ಷ ತೊರೆದ ಹಿನ್ನಲೆ.
*ಸ್ಥಳಿಯ ಆಕಾಂಕ್ಷಿಗಳ ಕಡೆಗಣನೆ .
*ಸೈಲಂಟ್ ಆದ ಆಕಾಂಕ್ಷಿಗಳ ಕಾರ್ಯಕರ್ತರ ಪಡೆ .

>> ಶಹಾಪುರ ವಿಧಾನಸಭಾ ಕ್ಷೇತ್ರ:  
ಶಹಾಪುರ ಮತಕ್ಷೇತ್ರದಲ್ಲಿ ಕಳೆದ  ಎರಡು ಮೂರು ದಶಕಗಳಿಂದ ದರ್ಶನಾಪುರ ಮತ್ತು ಶಿರವಾಳ ಮನೆತನದವರೇ ಪ್ರತಿನಿಧಿಸುತ್ತಾ ಬಂದಿದ್ದಾರೆ. ಈ ಭಾರಿ ಪ್ರಬಲ ಪೈಪೋಟಿಯಾಗಿ ಅಮೀನರಡ್ಡಿ ಯಾಳಗಿ ಇದ್ದಾರೆ. ಲಿಂಗಾಯತ ಸಮುದಾಯದ ಮತದಾರರು, ಪ್ರಾಬಲ್ಯ ಹೊಂದಿದ್ದು , ಒಂದು ಬಾರಿ ದರ್ಶನಾಪುರ ಮನೆತನಕ್ಕೆ, ಮತ್ತೊಂದು ಬಾರಿ ಶಿರವಾಳ ಮನೆತನಕ್ಕೆ ಇಲ್ಲಿನ ಮತದಾರರು ಆಶೀರ್ವಾದ ಮಾಡಿದ್ದಾರೆ. ಆದರೆ, ಈ ಬಾರಿ ಯಾರ ಕೈ ಹಿಡಿಯುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.

ಚುನಾವಣೆ ಅಖಾಡದಲ್ಲಿರುವ ಅಭ್ಯರ್ಥಿಗಳ ಪಟ್ಟಿ: 
ಬಿಜೆಪಿ : ಅಮೀನ್ ರೆಡ್ಡಿ ಯಾಳಗಿ,
ಕಾಂಗ್ರೆಸ್ : ಶರಣಬಸಪ್ಪಗೌಡ ದರ್ಶನಾಪೂರ
ಜೆಡಿಎಸ್ : ಗುರುಪಾಟೀಲ ಶಿರವಾಳ.

ಮತದಾರರ ವಿವರ:
ಒಟ್ಟು ಮತದಾರರು : 230040
ಪುರಷರು :1,15,351
ಮಹಿಳೆಯರು : 1,14,689 

ಶಹಾಪುರ ವಿಧಾನಸಭಾ ಕ್ಷೇತ್ರದ ಜಾತಿವಾರು  ಲೆಕ್ಕಾಚಾರ: 
ಲಿಂಗಾಯತ : 65000
ಪ. ಪಂಗಡ: 26000
ಕುರುಬ: 48000
ಮುಸ್ಲಿಂ:  40000
ಪ.ಜಾತಿ : 38000
ಕಬ್ಬಲಿಗ :24000
ಇತರೆ : 30000

2018ರ ಚುನಾವಣೆಯಲ್ಲಿ ಕಾಂಗ್ರೇಸ್ ನಿಂದ ಸ್ಪರ್ದೀಶಿದ ಶರಣಬಸಪ್ಪಗೌಡ ದರ್ಶಾನಪೂರ ಹಾಲಿ ಶಾಸಕರಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೇಸ್ : ಶರಣಬಸಪ್ಪಗೌಡ ದರ್ಶಾನಪೂರ 78642 ಮತಗಳನ್ನು ಗಳಿಸಿದ್ದರೆ, ಪ್ರತಿಸ್ಪರ್ಧಿ : ಬಿಜೆಪಿ ಗುರುಪಾಟೀಲ ಶಿರವಾಳ  47648 ಮತಗಳನ್ನು ಪಡೆದಿದ್ದರು. ಗೆಲುವಿನ ಅಂತರ : 30794.

ಶಹಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವರವಾಗಬಹುದಾದ ಅಂಶಗಳು: 
* ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು
* ಬಿಜೆಪಿ ಹಾಗೂ ಜೆಡಿಎಸ್ ನಲ್ಲಿ ಒಳಜಗಳ
* ಮತದಾರರೊಂದಿಗೆ ನಿಕಟ ಸಂಪರ್ಕ
* ಕಾರ್ಯಕರ್ತರನ್ನು ಬೆಳೆಸುವ ಗುಣ
* ಕೆಂಭಾವಿ ಪುರಸಭೆ ಭಾಗದಲ್ಲಿ ಶರಣಬಸಪ್ಪ ದರ್ಶನಾಪುರ ವರ್ಚಸ್ಸು
* ಅಲ್ಪಸಂಖ್ಯಾತರು ಹಾಗೂ ವೀರಶೈವ ಲಿಂಗಾಯತ ಮತಗಳು ಜೊತೆಗಿರೋದು

ಕಾಂಗ್ರೆಸ್ ಮೈನಸ್
*ಶಾಸಕರ ಜೊತೆಗೆ ಕುಟುಂಬಸ್ಥರೇ ಇದ್ದಾರೆ ಅನ್ನೋ ಆರೋಪ
*ಕುಟುಂಬಸ್ಥರ ಹಸ್ತಕ್ಷೇಪ ಹೆಚ್ಚಾಗಿರೋದ್ರಿಂದ *ಕಾರ್ಯಕರ್ತರ ಅಸಮಾಧಾನ
* ಐದು ಬಾರಿ ಶಾಸಕ ಆಗಿದ್ರೂ ಕ್ಷೇತ್ರ ಸಮರ್ಪಕ ಅಭಿವೃದ್ಧಿ ಆಗದೇ ಇರೋದು

ಶಹಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪ್ಲಸ್:
* ಸಂಘಪರವಾರ ಗಟ್ಟಿಯಾಗಿರೋದು
* ಲಿಂಗಾಯತ ಸಮುದಾಯ ಈ ಬಾರಿ ಕೈ ಹಿಡಿಯುವ ಸಾದ್ಯತೆ
* ಮೋದಿ ಅಲೆ
* ಈ ಬಾರಿ ಒಗ್ಗಟ್ಟಿನ ಮಂತ್ರಕ್ಕೆ ಹೈಕಮಾಂಡ್ ನೇರ ಎಂಟ್ರಿ.
* ಹೊಸ ಮುಖಕ್ಕೆ ಮಣೆ ಹಾಕಿದ ಬಿಜೆಪಿ

ಬಿಜೆಪಿ ಮೈನಸ್: 
*ಪಕ್ಷದಲ್ಲಿನ ಆಂತರಿಕ ಕಚ್ಚಾಟ
* ವರ್ಚಸ್ಸು ಇಲ್ಲದ ನಾಯಕ ಇರದೇ ಇರೋದು
* ಪಕ್ಷ ನಂಬಿಕೊಂಡಿರೋವ ಗುರು ಪಾಟೀಲ್ ಬಿಟ್ಟು ಹೋಗಿದ್ದು  ಮತದಾರರಿಗೆ ಬೇಸರ
* ಒಡೆದ ಮನೆಯಾದ ಬಿಜೆಪಿ
* ಎಲ್ಲಾ ಸಮುದಾಯಗಳನ್ನ ಜೊತೆಯಾಗಿ ತೆಗೆದುಕೊಂಡು ಹೋಗದೇ ಇರೋದು
*ಮೋದಿ ಅಲೆಯನ್ನೇ ನಂಬಿ ಚುನಾವಣೆ ಎದುರಿಸೋದು.

ಶಹಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪ್ಲಸ್: 
*ಮಾಜಿ ಶಾಸಕ ಪ್ರಭಾವಿ ನಾಯಕ ಅಭ್ಯರ್ಥಿ ಆಗಿದ್ದು.
*ಸ್ವಪ್ರತಿಷ್ಟೆ ಹೊಂದಿದ ನಾಯಕ ಗುರುಪಾಟೀಲ.
*ಶಿರವಾಳ ಮನೆತನದ ಜೊತೆಗೀರುವ ಅಲ್ಪಸಂಖ್ಯಾತ ಮತಗಳು.
*ನೀರಾವರಿ ಪ್ರದೇಶದಲ್ಲಿ ದೇವೆಗೌಡರ ಕೊಡುಗೆ.
*ಸಮುದಾಯ ಮತಗಳು ಸ್ವಾಬಿಮಾನದ ಹೆಸ್ರರಲ್ಲಿ ಒಂದಾಗಿರುವದು.

ಜೆಡಿಎಸ್ ಮೈನಸ್:
*ಮೂಲ ಕಾರ್ಯಕರ್ತರು ಇಲ್ಲದೆ ಇರುವದು
*ಬಿಜೆಪಿ ನೀಡಿಲ್ಲವೆಂದು ಜೆಡಿಎಸ ಬಂದ ನಾಯಕ.
ಶಾಸಕರಿದ್ದಾಗ ಕೆಲಸ ಮಾಡದ ಗುರುಪಾಟೀಲ.
*ಕ್ಷೇತ್ರದಲ್ಲಿ ಬೀಗಿ ಹಿಡಿತ ಹೊಂದಿದ ಕಾಂಗ್ರೇಸ್.

>> ಸುರಪುರ ವಿಧಾನಸಭಾ ಕ್ಷೇತ್ರ:-  
ಯಾದಗಿರಿ ಜಿಲ್ಲೆಯ ಜಿದ್ಧಾಜಿದ್ದಿನ ಕ್ಷೇತ್ರವಾಗಿರುವ ಸುರಪುರ ವಿಧಾನಸಭಾ ಕ್ಷೇತ್ರ ರಾಜ ಮನೆತನಗಳ ಕ್ಷೇತ್ರ ಜಿಲ್ಲೆಯಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಕ್ಷೇತ್ರ. ಹೆಚ್ಚೆಚ್ಚು ರಾಜಕೀಯ ಚಟುವಟಿಕೆಗಳು ನಡೆಯುತ್ತಿರುವ ಕ್ಷೇತ್ರ, ರಾಜ್ಯದಲ್ಲಿ ಅತೀ ಸೂಕ್ಷ್ಮ ಚುನಾವಣೆ ಕ್ಷೇತ್ರ.

ಬಿಜೆಪಿಯ ನರಸಿಂಹ ನಾಯಕ (ರಾಜೂಗೌಡ) ಅವರು ಪರಿಶಿಷ್ಟ   ಪಂಗಡ ಮೀಸಲು ಕ್ಷೇತ್ರವಾದ ಸುರಪುರದ ಹಾಲಿ ಶಾಸಕರಾಗಿದ್ದು, ಇವರಿಗೆ ಎದುರಾಳಿಯಾಗಿ ಕಾಂಗ್ರೆಸ್ ಪಕ್ಷದಿಂದ ಮಾಜಿ ಶಾಸಕರಾದ ಡಾ  ರಾಜ ವೆಂಕಟಪ್ಪ ನಾಯಕ ಸ್ಪರ್ಧಿ.. ಸದ್ಯದ ಮಟ್ಟಿಗೆ ಉಭಯ ನಾಯಕರು ಕ್ಷೇತ್ರದಲ್ಲಿ ಸಮಬಲ ಸಾಧಿಸಿದ್ದಾರೆ. ಒಂದು ದಿನ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ನಡೆದರೆ, ಮರುದಿನ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ನಡೆಯುತ್ತದೆ. ಇಲ್ಲಿ ಕುರುಬ ಮತದಾರರ ಪಾತ್ರ ಬಹಳ ಮುಖ್ಯವದ್ದು. ಹುಣಸಗಿ, ಸುರಪುರ ತಾಲೂಕು ಒಳಗೊಂಡ ಜಿಲ್ಲೆಯ ಅತಿ ದೊಡ್ಡ ಮತಕ್ಷೇತ್ರವಾಗಿದೆ. 

ಸುರಪುರ ವಿಧಾನಸಭಾ ಕ್ಷೇತ್ರ: 
ಒಟ್ಟು ಮತದಾರರು 2,65,469
ಪುರಷರು :1,33,746
ಮಹಿಳೆಯರು: 1,31,723

ಸುರಪುರ ವಿಧಾನಸಭಾ ಕ್ಷೇತ್ರದ ಜಾತಿವಾರು ಲೆಕ್ಕಾಚಾರ: 
ಪ. ಪಂಗಡ: 83000
ಕುರುಬ: 76000
ಮುಸ್ಲಿಂ: 45000
ಪ.ಜಾತಿ :37000
ಕಬ್ಬಲಿಗ :23000
ಇತರೆ : 25000

2018 ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಹಾಲಿ ಶಾಸಕ ರಾಜುಗೌಡ ನರಸಿಂಹ ನಾಯಕ 104426 ಮತಗಳನ್ನು ಪಡೆದು ಗೆಲುವು ಪಡೆದಿದ್ದರು. ಇವರ ಪ್ರತಿಸ್ಪರ್ಧಿಯಾಗಿ ಕಣದಲ್ಲಿದ್ದ  ಕಾಂಗ್ರೇಸ್ ಪಕ್ಷದ ರಾಜಾ ವೆಂಕಟಪ್ಪ ನಾಯಕ 81858 ಮತಗಳನ್ನು ಪಡೆದಿದ್ದರು. ಗೆಲುವಿನ ಅಂತರ : 22568.

ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪ್ಲಸ್:- 
*ಶಾಸಕ ನರಸಿಂಹ ನಾಯಕ(ರಾಜೂಗೌಡ) ರ ವೈಯುಕ್ತಿಕ ವರ್ಚಸ್ಸು
* ಯುವಕರ ನೆಚ್ಚಿನ ಬ್ರ್ಯಾಂಡ್
* ವಾಲ್ಮೀಕಿ ಜನಾಂಗದ ಬೆಳೆಯುತ್ತಿರುವ ನಾಯಕ
* ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿಯಲ್ಲಿ ಮುಂಚೂಣಿಯಲ್ಲಿರುವ ಲೀಡರ್
* 2013 ರ ಚುನಾವಣೆಯಲ್ಲಿ ಸೋತರು ಜನರೊಂದಿಗೆ ನಿರಂತರ ಸಂಪರ್ಕ
* ಕ್ಷೇತ್ರದ ಜನರಿಗೆ ಸ್ಪಂದಿಸುವ ಗುಣ.
*ಕ್ಷೇತ್ರದಲ್ಲಿ ಹೊಸತನದ ರಾಜಕಾರಣ ಆರಂಭ.

ಬಿಜೆಪಿ ಮೈನಸ್: 
*ಕ್ಷೇತ್ರದಲ್ಲಿ ರಾಜೂಗೌಡ ಇರೋದಿಲ್ಲ ಅನ್ನೋದು
*ಸಹೋದರ ಬಬ್ಲೂಗೌಡನ ಹಸ್ತಕ್ಷೇಪ
*ರಾಜೂಗೌಡ ಮೂರು ಬಾರಿ ಶಾಸಕ ಆಗಿದ್ರೂ ಅಭಿವೃದ್ಧಿ ಮಾಡಿಲ್ಲ ಅನ್ನೋ ಅಪನಂಬಿಕೆ.
*ಕ್ಷೇತ್ರದ ಜನ್ರರಿಗೆ ಸುಳ್ಳು ಹೇಳ್ತಾರೆ ಎನ್ನುವ ಆರೋಪ.
*ಬೇರೆ ಸಮುದಾಯಗಳನ್ನು ತುಳಿಯುತ್ತಾರೆ ಎನದನುವ ಆರೋಪ.

ಸುರಪುರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪ್ಲಸ್: 
*ಪಕ್ಷದಲ್ಲಿ ಆಂತರಿಕ ಕಚ್ಚಾಟ ಇಲ್ಲ
*ಕುರುಬ ಮತಗಳು ಜೊತೆಯಾಗಿರೋದು
*ರಾಜೂಗೌಡಗೆ ಠಕ್ಕರ್ ಕೊಡೋ ವರ್ಚಸ್ಸು ಹೊಂದಿರೋ ರಾಜಾವೆಂಕಟಪ್ಪ ನಾಯಕ
*ರಾಜಾ ವೆಂಕಟಪ್ಪ ನಾಯಕ ಖರ್ಗೆ ಆಪ್ತ ಆಗಿರೋದ್ರಿಂದ ದಲಿತ ಮತಗಳು ಕೈ ಹಿಡಿಯುತ್ವೆ.
*ವ್ಯಕ್ತಿಗತ ರಾಜಕಾರಣದಲ್ಲಿ ಸ್ಪಂದಿಸುವ ಗುಣ.
*ಕಾರ್ಯಕರ್ತರ ಜೊತೆ ನಿಲ್ತಾರೆ ಎನ್ನುವ ಕಾರ್ಯಕರ್ತರು.
*ಎಲ್ಲಾ ಸಮುದಾಯಗಳ ಜೊತೆ ಉತ್ತಮ ಬಾಂದ್ಯವ್ಯ ಹೊಂದಿರುವದು.

ಕಾಂಗ್ರೇಸ್ ಮೈನಸ್: 
* 2013 ರಲ್ಲಿ ಸಿದ್ದರಾಮಯ್ಯ ಸಿಎಂ ಆಗುವ ವೇಳೆ 
*ಸಿದ್ದರಾಮಯ್ಯ ಪರ ನಿಲ್ಲದೇ ಇದ್ದದ್ದು
*ಕ್ಷೇತ್ರದಲ್ಲಿರುವ 70 ಸಾವಿರ ಕುರುಬ ಮತದಾರರನ್ನ ಹಿಡಿದಿಟ್ಟುಕೊಳ್ಳದೇ ಇರೋದು
* ಕ್ಷೇತ್ರದ ಜನರಿಗೆ ಅಭ್ಯರ್ಥಿ ಸರಿಯಾಗಿ ಸ್ಪಂದಿಸಲ್ಲ ಎನ್ನುವ ಅರೋಪ.
*ದಬ್ಬಾಳಿಕೆ ರಾಜಕಾರಣ ಮಾಡ್ತಾರೆ ಎನ್ನುವ ಆರೋಪ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News