Karnataka Election 2023: ‘ಆಶೀರ್ವದಿಸಲು ಮೋದಿ ಏನು ದೇವರಾ, ಮಠಾಧೀಶರಾ ಅಥವಾ ಛೂಮಂತರ್ ಬಾಬಾನಾ?’

Karnataka Assembly Election 2023: ಮತ ಹಾಕದಿದ್ದರೆ ಮೋದಿಯ ಆಶೀರ್ವಾದ ತಪ್ಪಿಸಿಕೊಳ್ಳುವಿರಿ ಎಂದು ಬೆದರಿಕೆ ಹಾಕಿರುವ ಜೆಪಿ ನಡ್ಡಾ ಅವರೇ, ಆಶೀರ್ವದಿಸಲು ಮೋದಿ ಏನು ದೇವರಾ, ಮಠಾಧೀಶರಾ ಅಥವಾ ಛೂಮಂತರ್ ಬಾಬಾನಾ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Written by - Puttaraj K Alur | Last Updated : Apr 21, 2023, 06:27 PM IST
  • ಕಾಂಗ್ರೆಸ್ ಜನರಲ್ಲಿ ಆಶೀರ್ವಾದ ಕೇಳುತ್ತದೆ, ಬಿಜೆಪಿ ಜನತೆಗೆ "ಮೋದಿ ಆಶೀರ್ವಾದ"ದ ಬೆದರಿಕೆ ಹಾಕುತ್ತದೆ
  • ಇದು ಪ್ರಜೆಗಳೇ ಪ್ರಭುಗಳೆಂದು ನಂಬಿರುವ ಕಾಂಗ್ರೆಸ್ಸಿಗೂ ಪ್ರಜೆಗಳನ್ನು ಗುಲಾಮರೆಂದು ತಿಳಿದ ಬಿಜೆಪಿಗಿರುವ ವ್ಯತ್ಯಾಸ
  • ಬಿಜೆಪಿಯವರೇ ಹೇಳಿದಂತೆ ಬಿಜೆಪಿ "ಬ್ಲಾಕ್ಮೇಲ್ ಜನತಾ ಪಾರ್ಟಿ" ಆಗಿದೆ ಎಂದು ಕಾಂಗ್ರೆಸ್ ವ್ಯಂಗ್ಯ
Karnataka Election 2023: ‘ಆಶೀರ್ವದಿಸಲು ಮೋದಿ ಏನು ದೇವರಾ, ಮಠಾಧೀಶರಾ ಅಥವಾ ಛೂಮಂತರ್ ಬಾಬಾನಾ?’ title=
ಜೆಪಿ ನಡ್ಡಾಗೆ ಕಾಂಗ್ರೆಸ್ ತಿರುಗೇಟು!

ಬೆಂಗಳೂರು: ಕಾಂಗ್ರೆಸ್ ಜನರಲ್ಲಿ ಆಶೀರ್ವಾದವನ್ನು ಕೇಳುತ್ತದೆ. ಬಿಜೆಪಿ ಜನತೆಗೆ "ಮೋದಿ ಆಶೀರ್ವಾದ"ದ ಬೆದರಿಕೆ ಹಾಕುತ್ತದೆ. ಇದು ಪ್ರಜೆಗಳೇ ಪ್ರಭುಗಳು ಎಂದು ನಂಬಿರುವ ಕಾಂಗ್ರೆಸ್ಸಿಗೂ ಪ್ರಜೆಗಳನ್ನು ಗುಲಾಮರು ಎಂದು ತಿಳಿದ ಬಿಜೆಪಿಗೂ ಇರುವ ವ್ಯತ್ಯಾಸ. ಬಿಜೆಪಿಯವರೇ ಹೇಳಿದಂತೆ ಬಿಜೆಪಿ "ಬ್ಲಾಕ್ಮೇಲ್ ಜನತಾ ಪಾರ್ಟಿ" ಆಗಿದೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

#BJPInsultsKarnataka ಹ್ಯಾಶ್‍ಟ್ಯಾಗ್ ಬಳಸಿ ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ‘ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸಿ, ಕನ್ನಡಿಗರನ್ನು ಅವಮಾನಿಸಿದ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಕನ್ನಡಿಗರಲ್ಲಿ ಕ್ಷಮೆ ಕೇಳಬೇಕು. "ಮತ ಹಾಕದಿದ್ದರೆ ಮೋದಿಯ ಆಶೀರ್ವಾದವಿಲ್ಲ" ಎಂದು ಒಕ್ಕೂಟ ವ್ಯವಸ್ಥೆಯ ಗೌರವವನ್ನು ಗಾಳಿಗೆ ತೂರಿ, ಕನ್ನಡಿಗರನ್ನು ಗುಲಾಮರಂತೆ ಕಾಣುವ ಬಿಜೆಪಿಯನ್ನು ರಾಜ್ಯದಿಂದ ಒದ್ದೋಡಿಸಬೇಕು’ ಎಂದು ಕುಟುಕಿದೆ.

ಇದನ್ನೂ ಓದಿ: ಬಿಜೆಪಿಯ ಜಾತಿವಾರು ಅಭ್ಯರ್ಥಿಗಳ ಪಟ್ಟಿ ರಿಲೀಸ್‌- ಲಿಂಗಾಯತರಿಗೆ ಅನ್ಯಾಯವಾಗಿಲ್ಲ ಎಂಬ ಸಂದೇಶ ರವಾನೆ

‘ಕರ್ನಾಟಕ ನೆರೆಯಲ್ಲಿ ಮುಳುಗಿದ್ದಾಗ ಇತ್ತ ತಿರುಗಿಯೂ ನೋಡಲಿಲ್ಲ, ಪರಿಹಾರವನ್ನೂ ನೀಡಲಿಲ್ಲ ಪ್ರಧಾನಿ ಮೋದಿ. ನೆರೆ ಪರಿಹಾರಕ್ಕೆ ಬೇಡಿಕೆ ಸಲ್ಲಿಸಲು ಬಿ.ಎಸ್.ಯಡಿಯೂರಪ್ಪನವರು ಹಲವು ಬಾರಿ ದೆಹಲಿಯ ಪ್ರಧಾನಿ ಕಚೇರಿಯ ಬಾಗಿಲು ಕಾದರೂ ಕನಿಷ್ಠ ಸೌಜನ್ಯಕ್ಕೆ ಭೇಟಿಯೂ ಮಾಡಲಿಲ್ಲ. ಆಗ "ಮೋದಿ ಆಶೀರ್ವಾದ" ಎಲ್ಲಿ ಹೋಗಿತ್ತು ಜೆಪಿ ನಡ್ಡಾ ಅವರೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ಮತ ಹಾಕದಿದ್ದರೆ ಮೋದಿಯ ಆಶೀರ್ವಾದ ತಪ್ಪಿಸಿಕೊಳ್ಳುವಿರಿ ಎಂದು ಬೆದರಿಕೆ ಹಾಕಿರುವ ಜೆಪಿ ನಡ್ಡಾ ಅವರೇ, ಆಶೀರ್ವದಿಸಲು ಮೋದಿ ಏನು ದೇವರಾ, ಮಠಾಧೀಶರಾ ಅಥವಾ ಛೂಮಂತರ್ ಬಾಬಾನಾ? ಕನ್ನಡಿಗರ ತೆರಿಗೆ ಭಿಕ್ಷೆಯಲ್ಲಿ ಗತ್ತು, ಗಮ್ಮತ್ತು, ಶೋಕಿ ಮಾಡುತ್ತಿರುವ ಮೋದಿಯೇ ಕನ್ನಡಿಗರಿಗೆ ಋಣಿಯಾಗಿರಬೇಕು ಅಲ್ಲವೇ ಬಿಜೆಪಿ?’ ಎಂದು ಕಾಂಗ್ರೆಸ್ ಟೀಕಿಸಿದೆ.

ಇದನ್ನೂ ಓದಿ: ಚಾಮರಾಜನಗರದ ಊರೂರಿಗೆ ಸೋಮಣ್ಣ ಭೇಟಿ: ಮುಂದಿನ ಸಿಎಂ ಎಂದು ಅಭಿಮಾನಿಗಳ ಜೈಕಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News