Hubli-Dharwad Assembly Election Result 2023: ಹುಬ್ಬಳ್ಳಿ-ಧಾರವಾಡದ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಅರವಿಂದ ಬೆಲ್ಲದ ಗೆಲುವು

Hubli-Dharwad Vidhan Aabha Election Result 2023:  ಕರ್ನಾಟಕ 224 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿಯ ಚುನಾವಣೆಯಲ್ಲಿ ಹುಬ್ಬಳ್ಳಿ-ಧಾರವಾಡ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ದಶಕಗಳಿಂದ ಬಿಜೆಪಿಗಾಗಿ ದುಡಿದಿದ್ದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಪ್ರಬಲ ನಾಯಕರಾಗಿರುವ ಜಗದೀಶ್ ಶೆಟ್ಟರ್ ಟಿಕೆಟ್ ಕೈ ತಪ್ಪಿದ ಕಾರಣ, ಬಿಜೆಪಿ ತೊರೆದು ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಇನ್ನೂ ಜಗದೀಶ್ ಶೆಟ್ಟರ್ ಅವರನ್ನು ಹೇಗಾದರೂ ಮಾಡಿ ಮಣಿಸಲೇ ಬೇಕು ಎಂದು ಪಣ ತೊಟ್ಟಿರುವ ಬಿಜೆಪಿ ನಾಯಕರು ಘಟಾನುಘಟಿ ಕೇಂದ್ರ ನಾಯಕರನ್ನು ಕರೆಸಿ ಇಲ್ಲಿ ಪ್ರಚಾರ ಮಾಡಿಸಿದ್ದರು.   

Written by - Zee Kannada News Desk | Last Updated : May 13, 2023, 04:11 PM IST
  • ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಅವರು ಜಗದೀಶ್‌ ವಿರುದ್ಧ ಗೆಲುವು ಸಾಧಿಸಿದ್ದಾರೆ.
  • ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿದೆ.
  • ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಪ್ರಸಾದ ಅಬ್ಬಯ್ಯ ಅವರು ಗೆದ್ದಿದ್ದಾರೆ
Hubli-Dharwad Assembly Election Result 2023: ಹುಬ್ಬಳ್ಳಿ-ಧಾರವಾಡದ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಅರವಿಂದ ಬೆಲ್ಲದ ಗೆಲುವು title=
Hubli-Dharwad Assembly Election Result 2023

Karnataka Assembly Election 2023 : ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರವನ್ನು ಹೊರತುಪಡಿಸಿ, ಧಾರವಾಡ ಜಿಲ್ಲೆಯಲ್ಲಿ ಇನ್ನೂ ಆರು ಕ್ಷೇತ್ರಗಳಿವೆ. ಅವು ನವಲಗುಂದ, ಕುಂದಗೋಳ, ಧಾರವಾಡ, ಹುಬ್ಬಳ್ಳಿ-ಧಾರವಾಡ ಪೂರ್ವ (SC) ವಿಧಾನಸಭಾ ಕ್ಷೇತ್ರ, ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ, ಕಲಘಟಗಿ ವಿಧಾನಸಭಾ ಕ್ಷೇತ್ರ. 

2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಷ್ಠಿತ ಕಣವಾಗಿರುವ ಹುಬ್ಬಳ್ಳಿ-ಧಾರವಾಡದ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ದಶಕಗಳಿಂದ ಬಿಜೆಪಿಯಲ್ಲಿ ಕಾರ್ಯನಿರ್ವಹಿಸಿದ್ದ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಮಲ ಬಿಟ್ಟು ಕೈ ಹಿಡಿದಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಆರಂಭದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರಾದರೂ ಬಳಿಕ ಹಿನ್ನಡೆ ಅನುಭವಿಸುತ್ತಿದ್ದಾರೆ. ಆದರೆ ಇದೀಗ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಸಂತೋಷ್‌ ಲಾಡ್‌ಗೆ ಜಯ ಗಳಿಸಿದ್ದು, ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದಲ್ಲಿ ಪ್ರಸಾದ್ ಅಬ್ಬಯ್ಯ ಹ್ಯಾಟ್ರಿಕ್ ಗೆಲವು ಸಾಧಿಸಿದ್ದಾರೆ. ಹುಬ್ಬಳ್ಳಿ-ಧಾರವಾಡದ ಕುಂದಗೋಳ ಕ್ಷೇತ್ರದಲ್ಲಿ ಬಿಜೆಪಿಯ ಎಂ ಆರ್ ಪಾಟೀಲ್ ಗೆಲುವು ಸಾಧಿಸಿದ್ಧಾರೆ. ಜೊತೆಗೆ ಧಾರವಾಟ ಸೆಂಟ್ರಲ್‌ ಕ್ಷೇತ್ರದಲ್ಲಿ ಮಹೇಶ್‌ ಟೆಂಗಿನಕಾಯಿ ಅವರು ಜಗದೀಶ್‌ ಶೆಟ್ಟರ್‌ ವಿರುದ್ಧ ಜಯಗಳಿಸಿದ್ದಾರೆ. 

Hubli-Dharwad Karnataka Assembly Election Result 2023 : 

ನವಲಗುಂದ ವಿಧಾನಸಭಾ ಕ್ಷೇತ್ರ  (Navlagunda Assembly Constituency): 

2018ರ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಶಂಕರ ಬಿ.ಪಾಟೀಲ ಮುನೇನಕೊಪ್ಪ ಅವರು 20521 ಮತಗಳ ಅಂತರದಿಂದ ಜನತಾ ದಳದ ಎನ್.ಎಚ್.ಕೋನರೆಡ್ಡಿ ಅವರನ್ನು ಸೋಲಿಸಿ ಸ್ಥಾನ ಗಳಿಸಿದ್ದರು.

ನವಲಗುಂದ ವಿಧಾನಸಭಾ ಕ್ಷೇತ್ರದ 2023ರ ಚುನಾವಣಾ ಫಲಿತಾಂಶ (Navalagunda Assembly Constituency Election Result 2023): 

ನವಲಗುಂದ ವಿಧಾನಸಭಾ ಕ್ಷೇತ್ರದ ಸ್ಪರ್ಧಾಳುಗಳು : 
ಬಿಜೆಪಿ-ಶಂಕರ ಪಾಟೀಲ್‌ ಮುನೇನಕೊಪ್ಪ
ಕಾಂಗ್ರೆಸ್‌-ಎನ್‌ ಹೆಚ್‌ ಕೋನರೆಡ್ಡಿ
ಜೆಡಿಎಸ್-ಕಲ್ಲಪ್ಪ ನಾಗಪ್ಪ ಗಡ್ಡಿ-
ಎಎಪಿ-ರಾಮಪ್ಪ ದ್ಯಾಮಪ್ಪ ಹೊನ್ನವರ

ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಬಿಗಿದ ಕಾಂಗ್ರೆಸ್ ಪಕ್ಷ. ಸಚಿವ ಶಂಕರಪಾಟೀಲ ಮುನೇನಕೊಪ್ಪ ಅವರು ಕಾಂಗ್ರೆಸ್ ಅಭ್ಯರ್ಥಿ ಎನ್.ಹೆಚ್.ಕೋನರೆಡ್ಡಿ ಅವರ ವಿರುದ್ಧ  22 ಸಾವಿರ ಮತಗಳ ಅಂತರದಿಂದ ಸೋಲುಂಡಿದ್ದಾರೆ. ಎನ್.ಹೆಚ್.ಕೋನರೆಡ್ಡಿ ಅವರ ಎರಡನೇ ಬಾರಿಯೂ ವಿಧಾನಸಭೆಗೆ ಪ್ರವೇಶ ಮಾಡಿದ್ದಾರೆ. 

ಕುಂದಗೋಳ ವಿಧಾನಸಭಾ ಕ್ಷೇತ್ರ (Kundagola Assembly Constituency) 

2018 ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕುಸುಮಾವತಿ ಸಿ ಶಿವಳ್ಳಿ ಗೆಲುವು ಸಾಧಿಸಿದ್ದರು. ಭಾರತೀಯ ಜನತಾ ಪಾರ್ಟಿಯ ಎಸ್ ಐ ಚಿಕ್ಕನಗೌಡರ್ 634 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು.

ಕುಂದಗೋಳ ವಿಧಾನಸಭಾ ಕ್ಷೇತ್ರದ 2023ರ ಚುನಾವಣಾ ಫಲಿತಾಂಶ (Kundagola Assembly Constituency Election Result 2023) 

ಕುಂದಗೋಳ ವಿಧಾನಸಭಾ ಕ್ಷೇತ್ರದ ಸ್ಪರ್ಧಾಳುಗಳು : 
ಬಿಜೆಪಿ-ಎಂ.ಆರ್.ಪಾಟೀಲ್ 
ಕಾಂಗ್ರೆಸ್‌-ಕುಸುಮಾವತಿ ಶಿವಳ್ಳಿ
ಜೆಡಿಎಸ್-ಹಜರತ್ ಅಲಿ ಅಲ್ಲಾಸಾಬ್
ಎಎಪಿ-ನಿರಂಜನಯ್ಯ ಮಂಕತಿಮಠ

ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಮ್.ಆರ್.ಪಾಟೀಲ್ ಗೆಲವು ಕಂಡುಕೊಂಡಿದ್ದು, 28 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದಾರೆ. 

ಧಾರವಾಡ ವಿಧಾನಸಭಾ ಕ್ಷೇತ್ರ (Dharwad Assembly Constituency)

2018 ರಲ್ಲಿ ಅಮೃತ್ ಅಯ್ಯಪ್ಪ ದೇಸಾಯಿ ಅವರು ಬರೋಬ್ಬರಿ 85,123 ಮತಗಳನ್ನು ಪಡೆದು ಮಾಜಿ ಸಚಿವ ವಿನಯ್ ಕುಲಕರ್ಣಿಯವರನ್ನು ಸೋಲಿಸಿದರು. ವಿನಯ್ ಕುಲಕರ್ಣಿ 20,340 ಮತಗಳ ಅಂತರದಿಂದ ಸೋಲುಂಡರು.

ಧಾರವಾಡ ವಿಧಾನಸಭಾ ಕ್ಷೇತ್ರದ 2023ರ ಚುನಾವಣಾ ಫಲಿತಾಂಶ (Dharwad Assembly Constituency Election Result 2023)

ಧಾರವಾಡ ವಿಧಾನಸಭಾ ಕ್ಷೇತ್ರದ ಸ್ಪರ್ಧಾಳುಗಳು : 
ಬಿಜೆಪಿ-ಬಿಜೆಪಿ-ಅಮೃತ್ ಅಯ್ಯಪ್ಪ ದೇಸಾಯಿ 
ಕಾಂಗ್ರೆಸ್‌-ವಿನಯ್ ಕುಲಕರ್ಣಿ
ಜೆಡಿಎಸ್-ಮಂಜುನಾಥ್ ಲಕ್ಷ್ಮಪ್ಪ ಹಗೆದಾರ್ 

ವಿಧಾನಸಭಾ ಚುನಾವಣೆಯಲ್ಲಿ ಹುಬ್ಬಳ್ಳಿ ಧಾರವಾಡ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿನಯ್‌ ಕುಲಕರ್ಣಿ ಬರೋಬ್ಬರಿ 13885 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 

ಹುಬ್ಬಳ್ಳಿ-ಧಾರವಾಡ ಪೂರ್ವ (SC) ವಿಧಾನಸಭಾ ಕ್ಷೇತ್ರ  (Hubli-Dharwad East (SC) Assembly Constituency)

2018 ರ ಚುನಾವಣೆಯಲ್ಲಿ ಹುಬ್ಬಳ್ಳಿ-ಧಾರವಾಡ ಪೂರ್ವ (SC) ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವನ್ನು ಸಾಧಿಸಿತ್ತು. ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಪ್ರಸಾದ್‌ ಅಬ್ಬಯ್ಯ ಅವರು 77080 ಮತವನ್ನು ಗಳಿಸಿ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ ಗೋಕಾಕ ಅವರನ್ನು 21467 ಮತಗಳ ಅಂತರದಿಂದ ಸೋಲಿಸಿದ್ದರು. 

ಹುಬ್ಬಳ್ಳಿ-ಧಾರವಾಡ ಪೂರ್ವ (SC) ಮೀಸಲು ವಿಧಾನಸಭಾ ಕ್ಷೇತ್ರದ 2023ರ ಚುನಾವಣಾ ಫಲಿತಾಂಶ (Hubli-Dharwad East (SC) Assembly Constituency) 

ಹುಬ್ಬಳ್ಳಿ-ಧಾರವಾಡ ಪೂರ್ವ (SC) ಮೀಸಲು ವಿಧಾನಸಭಾ ಕ್ಷೇತ್ರದ ಸ್ಪರ್ಧಾಳುಗಳು : 
ಬಿಜೆಪಿ-ಡಾ. ಕ್ರಾಂತಿ ಕಿರಣ 
ಕಾಂಗ್ರೆಸ್‌-ಪ್ರಸಾದ್‌ ಅಬ್ಬಯ್ಯ 
ಜೆಡಿಎಸ್-ಹಾಲಹರವಿ ವೀರಭದ್ರಪ್ಪ

ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಪ್ರಸಾದ ಅಬ್ಬಯ್ಯ ಅವರು 66110 ಪಡೆದು ಬಿಜೆಪಿ ಅಭ್ಯರ್ಥಿ ಕ್ರಾಂತಿ‌ಕಿರಣ ವಿರುದ್ಧ 25596 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. 

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ (Hubli-Dharwad Central Assembly Constituency) 

2018ರಲ್ಲಿ ಮತ್ತೆ ಬರೋಬ್ಬರಿ 75,794 ಮತಗಳನ್ನು ಪಡೆದ ಜಗದೀಶ್ ಶೆಟ್ಟರ್, ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದಾರೆ. ಅಲ್ಲದೆ ಡಾ. ಮಹೇಶ್ ನಲ್ವಾಡ್ ಗೆ ಎರಡನೇ ಬಾರಿ ಸೋಲಿನ ರುಚಿ ತೋರಿಸಿದ್ದರು. ಮಹೇಶ್ ಲನಲ್ವಾಡ್ ಅವರಿಗೆ 54,488 ಮತಗಳು ಬಂದಿದ್ದವು‌.

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ 2023ರ ಚುನಾವಣಾ ಫಲಿತಾಂಶ (Hubli-Dharwad Central Assembly Constituency Election Result 2023)

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಸ್ಪರ್ಧಾಳುಗಳು : 
ಬಿಜೆಪಿ-ಮಹೇಶ ಟೆಂಗಿನಕಾಯಿ 
ಕಾಂಗ್ರೆಸ್‌-ಜಗದೀಶ್‌ ಶೆಟ್ಟರ್‌ 
ಜೆಡಿಎಸ್-ಮಹಾಂತ ಒಡೆಯರ್ ಸಿದ್ದಾಲಿಂಗೇಶ್ವರಗೌಡ
ಎಎಪಿ-ವಿಕಾಸ ಸೊಪ್ಪಿನ 

ಹುಬ್ಬಳ್ಳಿ ಧಾರವಾಡ ಸೆಂಟ್ರಲ್‌ ಕ್ಷೇತ್ರದ ಕಣದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಅವರು ಜಗದೀಶ್‌ ವಿರುದ್ಧ 35570 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 

ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ (Hubli-Dharwad West Assembly Constituency) 

ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ 2018 ರಲ್ಲಿ ಭಾರತೀಯ ಜನತಾ ಪಾರ್ಟಿ ಯ ಅರವಿಂದ್ ಬೆಲ್ಲದ ಗೆಲುವು ಸಾಧಿಸಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ ಪಕ್ಷದ ಮೊಹಮ್ಮದ್ ಇಸ್ಮಾಯಿಲ್ ತಮಟಗಾರ 40487 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು.

ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ 2023ರ ಚುನಾವಣಾ ಫಲಿತಾಂಶ (Hubli-Dharwad West Assembly Constituency Election Result 2023) 

ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಸ್ಪರ್ಧಾಳುಗಳು : 
ಬಿಜೆಪಿ-ಅರವಿಂದ ಬೆಲ್ಲದ
ಕಾಂಗ್ರೆಸ್‌-ದೀಪಕ್‌ ಚಿಂಚೊರೆ
ಜೆಡಿಎಸ್-ಗುರುರಾಜ್‌ ಹುಣಸೆಮರ 
ಎಎಪಿ-ಅರವಿಂದ.ಎಂ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹುಬ್ಬಳ್ಳಿ-ಧಾರವಾಡದ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಅರವಿಂದ ಬೆಲ್ಲದ ಜಯಗಳಿಸಿದ್ದಾರೆ. ಇನ್ನೂ ಮೂರು ಸುತ್ತು ಬಾಕಿ ಇರುವಾಗಲೇ ಅರವಿಂದ್‌ ಬೆಲ್ಲದ್‌ ಜಯ ಸಾಧಿಸಿದ್ದಾರೆ. 

ಕಲಘಟಗಿ ವಿಧಾನಸಭಾ ಕ್ಷೇತ್ರ  (Kalaghatagi assembly constituency) 

2018ರ ಚುನಾವಣೆಯಲ್ಲಿ ಕಲಘಟಗಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ನಿಂಬಣ್ಣನವರ್ ಗೆಲುವು ಸಾಧಿಸಿದ್ದರು. 5 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಕಾಂಗ್ರೆಸ್‌ನ ಯುವಕನನ್ನು ಸೋಲಿಸಿದ್ದರು. 

ಕಲಘಟಗಿ ವಿಧಾನಸಭಾ ಕ್ಷೇತ್ರದ 2023ರ ಚುನಾವಣಾ ಫಲಿತಾಂಶ (Kalaghatagi Assembly Constituency Election Result 2023) 

ಕಲಘಟಗಿ ಕ್ಷೇತ್ರದ ಸ್ಪರ್ಧಾಳುಗಳು : 
ಬಿಜೆಪಿ-ಚಬ್ಬಿ ನಾಗರಾಜ 
ಕಾಂಗ್ರೆಸ್‌-ಸಂತೋಷ ಎಸ್‌ ಲಾಡ್‌ 
ಜೆಡಿಎಸ್-ವೀರಪ್ಪ ಬಸಪ್ಪ ಶೀಗಿಗಟ್ಟಿ 
ಎಎಪಿ-ಮಂಜುನಾಥ ಜಕ್ಕಣ್ಣವರ

ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿದೆ. ಕಾಂಗ್ರೆಸ್ ನ ಸಂತೋಷ್ ಲಾಡ್ ಅವರು 14 ಸಾವಿರಕ್ಕೂ ಅಧಿಕ ಮತಗಳಿಂದ ಬಿಜೆಪಿಯ ನಾಗರಾಜ ಛಬ್ಬಿ ವಿರುದ್ಧ ಗೆದ್ದಿದ್ದಾರೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News