ನಾಮಪತ್ರ ಸಲ್ಲಿಕೆಗೆ ಮಕ್ಕಳ ಬಳಕೆ, ಕ್ಷೇತ್ರದಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾದ್ರೂ ಚುನಾವಣಾಧಿಕಾರಿ ಸೈಲೆಂಟ್

Karnataka Assembly Election: ಚುನಾವಣಾ ನಿಯಮ ಪಾಲನೆ ಮಾಡದೇ ಉಲ್ಲಂಘನೆ ಮಾಡುತ್ತಿರುವುದು ಆರ್.ಓ ಅಧಿಕಾರಿ ಅಪೂರ್ವ ಬಿದರಿ ಕಣ್ಣೆದುರೆ ನಡೆಯುತ್ತಿದ್ದರೂ ಸಹ ಆರ್ಓ ಅಧಿಕಾರಿ ಮಾತ್ರ ಕ್ಷೇತ್ರದಲ್ಲಿ ಏನು ನಡೆದಿಲ್ಲ ಎಂಬಂತೆ ಕಚೇರಿಗೆ ಸೀಮಿತವಾಗಿದ್ದಾರೆ. 

Written by - Yashaswini V | Last Updated : Apr 19, 2023, 03:21 PM IST
  • ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲು ಮುಂದಾಗುವ ವೇಳೆ ತಮ್ಮ ಶಕ್ತಿ ಪ್ರದರ್ಶನ ತೋರಲು ಹಣ ಕೊಟ್ಟು ಸಾವಿರಾರು ಜನರನ್ನು ಕರೆತಂದಿದ್ದಾರೆ.
  • ಅದರಲ್ಲಿ ಪುಟ್ಟ ಮಕ್ಕಳು, ಶಾಲಾ ಮಕ್ಕಳನ್ನೂ ಕರೆತಂದು ಮೆರವಣಿಗೆಗೆ ಮತ್ತು ಪ್ರಚಾರ ಮಾಡುವುದಕ್ಕೆ ಬಳಸಿಕೊಳ್ಳುವ ಮೂಲಕ ನಿಯಮವನ್ನು ಉಲ್ಲಂಘಿಸುತ್ತಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಮಕ್ಕಳ ಬಳಕೆ, ಕ್ಷೇತ್ರದಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾದ್ರೂ ಚುನಾವಣಾಧಿಕಾರಿ  ಸೈಲೆಂಟ್  title=

Karnataka Assembly Election 2023: ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಚುನಾವಣಾ ಆಯೋಗ ಕಟ್ಟುನಿಟ್ಟಿನ ಆದೇಶ ನೀಡಿದೆ. ಆದ್ರೆ ಕ್ಷೇತ್ರದಲ್ಲಿ ದಿನಂಪ್ರತಿ ನೀತಿ ಸಂಹಿತೆ ಉಲ್ಲಂಘನೆ ಆರ್ ಓ ಅಧಿಕಾರಿ ಕಣ್ಣೆದುರೇ ನೆಡೆಯುತ್ತಿದ್ರು ಕಂಡು ಕಾಣದಂತೆ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ.

ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲು ಮುಂದಾಗುವ ವೇಳೆ ತಮ್ಮ ಶಕ್ತಿ ಪ್ರದರ್ಶನ ತೋರಲು ಹಣ ಕೊಟ್ಟು ಸಾವಿರಾರು ಜನರನ್ನು ಕರೆತಂದಿದ್ದಾರೆ. ಅದರಲ್ಲಿ ಪುಟ್ಟ ಮಕ್ಕಳು, ಶಾಲಾ ಮಕ್ಕಳನ್ನೂ ಕರೆತಂದು ಮೆರವಣಿಗೆಗೆ ಮತ್ತು ಪ್ರಚಾರ ಮಾಡುವುದಕ್ಕೆ ಬಳಸಿಕೊಳ್ಳುವ ಮೂಲಕ ನಿಯಮವನ್ನು ಉಲ್ಲಂಘಿಸುತ್ತಿದ್ದಾರೆ. 

ಇದನ್ನೂ ಓದಿ- ಸಿದ್ದರಾಮಯ್ಯ ದಲಿತ ವಿರೋಧಿ: ಚಲವಾದಿ ನಾರಾಯಣಸ್ವಾಮಿ ವಾಗ್ಧಾಳಿ

ಇನ್ನೂ ಚುನಾವಣಾ ನಿಯಮ ಪಾಲನೆ ಮಾಡದೇ ಉಲ್ಲಂಘನೆ ಮಾಡುತ್ತಿರುವುದು ಆರ್.ಓ ಅಧಿಕಾರಿ ಅಪೂರ್ವ ಬಿದರಿ ಕಣ್ಣೆದುರೆ ನಡೆಯುತ್ತಿದ್ದರೂ ಸಹ ಆರ್ಓ ಅಧಿಕಾರಿ ಮಾತ್ರ ಕ್ಷೇತ್ರದಲ್ಲಿ ಏನು ನಡೆದಿಲ್ಲ ಎಂಬಂತೆ ಕಚೇರಿಗೆ ಸೀಮಿತವಾಗಿದ್ದಾರೆ. 

ಇದನ್ನೂ ಓದಿ- ಯಡಿಯೂರಪ್ಪಗೆ ಅದೃಷ್ಟ ತಂದಿತ್ತು ಸಿಕೆಆರ್ 454! ಇದೀಗ ಪುತ್ರನಿಗೂ ನುಡಿಯುತ್ತಾ ಶುಭ ಶಕುನ

ಕ್ಷೇತ್ರದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಅಕ್ರಮಗಳ ಬಗ್ಗೆ ಮಾಹಿತಿ ನೀಡಲು ಪತ್ರಕರ್ತರು ಆರ್ಓ ಅಧಿಕಾರಿ ಅಪೂರ್ವ ಬಿದರಿ ಅವರಿಗೆ ಕರೆ ಮಾಡಿದರೇ ಪತ್ರಕರ್ತರ ಕರೆಯನ್ನು ಕೂಡ ಸ್ವೀಕರಿಸುವುದಿಲ್ಲ. ನೀತಿ ಸಂಹಿತೆ ಉಲ್ಲಂಘನೆ ಮಾಡಿದವರ ವಿರುದ್ಧ ಯಾವ ಕ್ರಮಕ್ಕೂ ಮುಂದಾಗದೇ ಮನಸೋ ಇಚ್ಚೆ ಕಾನೂನು ಮಾಡಿರುವ ಆರ್ ಓ ಅಧಿಕಾರಿ ಅಪೂರ್ವ. ಬಲಾಡ್ಯ ರಾಜಕಾರಣಿ ಮಾತಿಗೆ ಮಣಿದು ಚುನಾವಣಾ ಆಯೋಗಕ್ಕೆ ಪ್ರಶ್ನೆ ಮಾಡಲು ಬಂದ ಸ್ಥಳೀಯ ಪತ್ರಕರ್ತರಿಗೆ ಕಛೇರಿಯೊಳಗೆ ಬರದಂತೆ ತಡೆಯೋ ಪ್ರಯತ್ನ ಮಾಡುತ್ತಿದ್ದು, ಚುನಾವಣಾ ಅಕ್ರಮ, ನೀತಿ ಸಂಹಿತೆ ಉಲ್ಲಂಘನೆಯನ್ನ ಕಂಡರೂ ಕಾಣದಂತೆ ಜಾಣಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News