ತುಮಕೂರು: ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಈ ಬಾರಿ ನಾವು 135 ರಿಂದ 140 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸುತ್ತೇವೆಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಸುದ್ದಿಗಾರ ಜೊತೆ ಶನಿವಾರ ಮಾತನಾಡಿರುವ ಅವರು, ‘ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗೆ ಅಪಾರ ಜನ ಬೆಂಬಲ ಸಿಗುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 135-140 ಸ್ಥಾನಗಳನ್ನು ಗೆದ್ದು ನಾವೇ ಸರ್ಕಾರ ರಚನೆ ಮಾಡುತ್ತೇವೆ’ ಎಂದು ಹೇಳಿದರು.
ಇದನ್ನೂ ಓದಿ: KSRTC Employees Strike : ನಾವು ಮುಷ್ಕರ ವಾಪಾಸ್ ಪಡೆದಿಲ್ಲ, ಸರ್ಕಾರದ ನಡೆ ತೃಪ್ತಿತಂದಿಲ್ಲ : ಅನಂತ ಸುಬ್ಬರಾವ್
‘ನಮ್ಮ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವಿಜಯ ಸಂಕಲ್ಪ ಯಾತ್ರೆಗೆ ಆಗಮಿಸಿದ್ದಾರೆ. ಎಲ್ಲಾ ಕಡೆ ಉತ್ತಮ ವಾತಾವರಣದಿಂದ ನಮ್ಮ ನಿರೀಕ್ಷೆ ಚೆನ್ನಾಗಿದೆ. ನಮಗೆ ಉತ್ತಮ ಜನಸ್ಪಂದನೆ ಸಿಗುತ್ತಿದೆ. ನಾವು 135-140 ಸೀಟ್ ಗೆದ್ದು ಸರ್ಕಾರ ರಚನೆ ಮಾಡುತ್ತೇವೆ’ ಎಂದು ಬಿಎಸ್‍ವೈ ಹೇಳಿದ್ದಾರೆ.
ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘ಸಿದ್ದರಾಮಯ್ಯಗೆ ಈ ಹಿಂದೆ ಒಂದು ಮಾತು ಹೇಳಿದ್ದೆ. ಅವರು ಅನಗತ್ಯವಾಗಿ ಅಲ್ಲಿ ಇಲ್ಲಿ ಓಡಾಟ ಮಾಡ್ಕೊಂಡು ಕಥೆ ಹೇಳ್ತಿದ್ದಾರೆ ಅಂತಾ. ಇಲ್ಲಿ ಸತ್ಯಾಂಶ ಅವರು ವರುಣಾ ಕ್ಷೇತ್ರದಿಂದ ನಿಲ್ಲೋದು ಅಂತತಾ ಹೇಳಿದ್ದೆ. ಭವಿಷ್ಯ ನನ್ನ ಮಾತು ನಿಜ ಆಗ್ಬಹುದು ಅನ್ಸುತ್ತೆ. ಪಟ್ಟಿ ಬಿಡುಗಡೆ ಆದ ಮೇಲೆ ನೀವೆ ನೋಡ್ತಿರಾ. ಅನಗತ್ಯವಾಗಿ ಕೋಲಾರ ಮತ್ತೊಂದು ಅಂತಾ ಹೇಳೋ ಅವಶ್ಯಕತೆ ಇರಲಿಲ್ಲ. ಯಾಕೆ ಈ ರೀತಿಯ ಗೊಂದಲ ಮಾಡಿದ್ರೋ ಗೊತ್ತಿಲ್ಲ. ಒಟ್ನಲ್ಲಿ ನನ್ನ ಪ್ರಕಾರ ವರುಣಾದಿಂದಲೇ ಅವರು ನಿಲ್ಲೋದು ನಿಶ್ಚಿತ’ ಅಂತಾ ಹೇಳಿದರು.
ಇದನ್ನೂ ಓದಿ: ಅಪ್ಪ-ಮಗ ಬರೀ ತರ್ಲೆ, ರೌಡಿಸಂ ಮಾಡಿಸ್ತಾರೆ : ಸಚಿವ ಸೋಮಣ್ಣ
ಸಿದ್ದರಾಮಯ್ಯನವರು ನಿಮ್ಮ ಸಲಹೆ ತಗೊಂಡ್ರಾ ಎಂಬ ಮಾತಿಗೆ ಬಿಎಸ್‍ವೈ ನಕ್ಕು ಸುಮ್ಮನಾದರು. ಸೋಮಣ್ಣ ಅಂತರ ಕಾಯ್ದುಕೊಂಡ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ ಪಕ್ಷದಲ್ಲಿ ಏನೇನು ಇಲ್ಲ, ನಾವೆಲ್ಲಾ ಚೆನ್ನಾಗಿದ್ದೇವೆ. ಅವರಲ್ಲಿ ಏನು ಸಮಸ್ಯೆ ಇಲ್ಲವೆಂದು ಹೇಳಿದರು. ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್‍ಗೆ ಹೋಗುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ನನ್ನ ಪ್ರಕಾರ ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ’ವೆಂದು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.