Karnataka Election Result 2023: ಜಯನಗರದಲ್ಲಿ 3 ಬಾರಿ ಮತಎಣಿಕೆ: ‘ಕೈ’ಯಿಂದ ಗೆಲುವು ಕಿತ್ತ ಕಮಲ! ECಗೆ ಸೌಮ್ಯಾರೆಡ್ಡಿ ದೂರು?

Jayanagar Assembly Election Result: ಸಂಜೆ 7 ಗಂಟೆ ಸುಮಾರಿಗೆ ಮತ ಎಣಿಕೆ ಕೇಂದ್ರದ ಹೊರಗೆ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ವಿಜಯಿ ಎಂದು ಘೋಷಿಸಲಾಯಿತಾದರೂ ಅಂತಿಮ ನಿರ್ಧಾರ ನೀಡಿರಲಿಲ್ಲ. ಸೌಮ್ಯಾ ಕೇವಲ 180 ಮತಗಳಿಂದ ಗೆದ್ದಿದ್ದಾರೆ ಎಂದು ಸಿಕೆ ರಾಮಮೂರ್ತಿ ಹೇಳಿಕೊಂಡಿದ್ದಾರೆ. ಇದಾದ ಬಳಿಕ ಮತ ಎಣಿಕೆಯಲ್ಲಿ ಆಗಿರುವ ವ್ಯತ್ಯಯ ಕುರಿತು ಮಾತನಾಡಿದ ಕಾಂಗ್ರೆಸ್ ಕಾರ್ಯಕರ್ತರು, ಮತ್ತೆ ಮತ ಎಣಿಕೆ ನಡೆಯುತ್ತಿದೆ ಎಂದು ತಿಳಿಸಿದರು.

Written by - Bhavishya Shetty | Last Updated : May 14, 2023, 08:40 AM IST
    • ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಹೈವೋಲ್ಟೇಜ್ ಡ್ರಾಮ ನಡೆದಿದೆ
    • ಬಿಜೆಪಿಯ ಸಿ.ಕೆ.ರಾಮಮೂರ್ತಿ 180 ಮತಗಳಿಂದ ಮುನ್ನಡೆ ಸಾಧಿಸಿದ್ದರು
    • ಬಳಿಕ ಮರು ಮತ ಎಣಿಕೆ ನಡೆದಿದ್ದು, ಅದರಲ್ಲಿ ಬಿಜೆಪಿಯ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ
Karnataka Election Result 2023: ಜಯನಗರದಲ್ಲಿ 3 ಬಾರಿ ಮತಎಣಿಕೆ: ‘ಕೈ’ಯಿಂದ ಗೆಲುವು ಕಿತ್ತ ಕಮಲ! ECಗೆ ಸೌಮ್ಯಾರೆಡ್ಡಿ ದೂರು? title=
Jayanagar Assembly Election

Jayanagar Assembly Election Result: ದಕ್ಷಿಣ ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಹೈವೋಲ್ಟೇಜ್ ಡ್ರಾಮ ನಡೆದಿದೆ. ತಡರಾತ್ರಿಯವರೆಗೂ ಮತ ಎಣಿಕೆ ನಡೆದಿದ್ದು, ಕಡೆಗೆ ಬಿಜೆಪಿಯ ಸಿ.ಕೆ.ರಾಮಮೂರ್ತಿ ವಿಜಯಿ ಎಂದು ಘೋಷಿಸಲಾಯಿತು. ಇದನ್ನು ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಖಚಿತಪಡಿಸಿದ್ದಾರೆ. ಆದರೆ ಈ ಹಿಂದೆ ಇಲ್ಲಿಂದ ಕಾಂಗ್ರೆಸ್‌ ನ ಸೌಮ್ಯಾ ರೆಡ್ಡಿ ಗೆಲ್ಲುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಅದಕ್ಕೂ ಮುನ್ನ ಅವರು 180 ಮತಗಳಿಂದ ಮುನ್ನಡೆ ಸಾಧಿಸಿದ್ದರು. ಬಳಿಕ ಮರು ಮತ ಎಣಿಕೆ ನಡೆದಿದ್ದು, ಅದರಲ್ಲಿ ಬಿಜೆಪಿಯ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ: Karnataka Election Results 2023: ‘ಕನಕಪುರ’ದಲ್ಲಿ ಡಿಕೆ ಬ್ರದರ್ಸ್ ಕಮಾಲ್!

ತೇಜಸ್ವಿ ಸೂರ್ಯ ಟ್ವೀಟ್ ಮಾಡಿ, “ನಾವು ಜಯನಗರವನ್ನು ಮರಳಿ ಪಡೆದಿದ್ದೇವೆ. ಬಿ ಎನ್ ವಿಜಯಕುಮಾರ್ ಸರ್ ಅವರಿಗೆ ನಮ್ಮ ಅಭಿನಂದನೆಗಳು” ಎಂದು ಹೇಳಿದ್ದರು. ಇದಕ್ಕೂ ಮುನ್ನ ಸಂಜೆ 7 ಗಂಟೆ ಸುಮಾರಿಗೆ ಮತ ಎಣಿಕೆ ಕೇಂದ್ರದ ಹೊರಗೆ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ವಿಜಯಿ ಎಂದು ಘೋಷಿಸಲಾಯಿತಾದರೂ ಅಂತಿಮ ನಿರ್ಧಾರ ನೀಡಿರಲಿಲ್ಲ. ಸೌಮ್ಯಾ ಕೇವಲ 180 ಮತಗಳಿಂದ ಗೆದ್ದಿದ್ದಾರೆ ಎಂದು ಸಿಕೆ ರಾಮಮೂರ್ತಿ ಹೇಳಿಕೊಂಡಿದ್ದಾರೆ. ಇದಾದ ಬಳಿಕ ಮತ ಎಣಿಕೆಯಲ್ಲಿ ಆಗಿರುವ ವ್ಯತ್ಯಯ ಕುರಿತು ಮಾತನಾಡಿದ ಕಾಂಗ್ರೆಸ್ ಕಾರ್ಯಕರ್ತರು, ಮತ್ತೆ ಮತ ಎಣಿಕೆ ನಡೆಯುತ್ತಿದೆ ಎಂದು ತಿಳಿಸಿದರು.

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕೂಡ ಎಣಿಕೆ ಕೇಂದ್ರಕ್ಕೆ ರಾತ್ರಿ 9 ಗಂಟೆಗೆ ತಲುಪಿದ್ದರು. ಆದರೆ, ಡಿ.ಕೆ.ಶಿವಕುಮಾರ್ ಅಲ್ಲಿಗೆ ಬರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟಡವನ್ನು ತೆರವು ಮಾಡುವಂತೆ ಮುಖಂಡರನ್ನು ಹೇಳಿದರು. ಈ ಹಿನ್ನೆಲೆಯಲ್ಲಿ ತೇಜಸ್ವಿ ಸೂರ್ಯ ಫೋನ್‌ನಲ್ಲಿ ಮಾತನಾಡುತ್ತಾ ಮತ ಎಣಿಕೆ ಕೇಂದ್ರದ ಮೆಟ್ಟಿಲುಗಳ ಕೆಳಗೆ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಕೂಡ ಹೊರಬಿದ್ದಿದೆ.

ಮರು ಮತ ಎಣಿಕೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಆರೋಪ, ಪ್ರತ್ಯಾರೋಪಗಳು ಶುರುವಾಗಿದೆ. ಸೌಮ್ಯಾ ರೆಡ್ಡಿ ಗೆದ್ದಿದ್ದಾರೆ ಮತ್ತು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.  ಆದರೆ ಬಿಜೆಪಿ ಸಂಸದರು ಮರು ಎಣಿಕೆಗೆ ಪದೇ ಪದೇ ಮನವಿ ಮಾಡುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಬಿಜೆಪಿಯವರು ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಹೀಗಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ ಎಂದಿದ್ದಾರೆ.

ಮೂರು ಬಾರಿ ಮತ ಎಣಿಕೆಯಾದ ಬಳಿಕ ಬಿಜೆಪಿಯ ರಾಮಮೂರ್ತಿ 57797 ಮತಗಳನ್ನು ಪಡೆದಿದ್ದಾರೆ. ಇನ್ನು ಕಾಂಗ್ರೆಸ್ ನ ಸೌಮ್ಯಾ ರೆಡ್ಡಿ 57781 ಮತಗಳನ್ನು ಪಡೆದಿದ್ದಾರೆ. ಅಂದರೆ ಬಿಜೆಪಿಗೆ 16 ಮತಗಳ ಅಂತರದ ಗೆಲುವು ಲಭಿಸಿದೆ.

ಇದನ್ನೂ ಓದಿ: Photos: ತಮಿಳುನಾಡಿನ ಅರುಣಾಚಲೇಶ್ವರ ದೇಗುಲಕ್ಕೆ ಡಿಕೆಶಿ ಭೇಟಿ

ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಸೌಮ್ಯಾ ರೆಡ್ಡಿಯಿಂದ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲು ಸದ್ಯ ಮುಂದಾಗಿದ್ದಾರೆ. ಮೊದಲ ಎಣಿಕೆಯಲ್ಲಿ ಕಾಂಗ್ರೆಸ್ ಕಡೆ ಗೆಲುವಾಗಿತ್ತು. ಆ ಬಳಿಕ ತೇಜಸ್ವಿ‌ ಸೂರ್ಯ,ಆರ್.ಅಶೋಕ್ ಅಕ್ರಮವಾಗಿ ಮತ ಎಣಿಕೆ ಕೊಠಡಿಗೆ ಆಗಮಿಸಿಮ ಬಿಜೆಪಿ ಅಭ್ಯರ್ಥಿ ಗೆಲ್ಲುವಂತೆ ಮಾಡಿದ್ದಾರೆ ಎಂದು ದೂರು ನೀಡಲಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News