ಆರಂಭವಾಯ್ತು 'ಫ್ರೀ ಹಗ್' ಆಂದೋಲನ! ಯಾಕೆ ಗೊತ್ತಾ?

ಕೊಲ್ಕತ್ತಾದ ಧಂ ಧಂ ಮೆಟ್ರೋ ನಿಲ್ದಾಣದಲ್ಲಿ ಯುವಕ ಯುವತಿಯರು ಫ್ರೀ ಹಗ್ ಆಂದೋಲನ ಹಮ್ಮಿಕೊಂಡಿದ್ದಾರೆ. ಇಲ್ಲಿ ಯಾರು ಯಾರನ್ನು ಬೇಕಾದರೂ ಅಪ್ಪಿಕೊಳ್ಳಬಹುದು. ಅದೂ ಉಚಿತವಾಗಿ!

Last Updated : May 2, 2018, 03:55 PM IST
ಆರಂಭವಾಯ್ತು 'ಫ್ರೀ ಹಗ್' ಆಂದೋಲನ! ಯಾಕೆ ಗೊತ್ತಾ? title=

ಕೊಲ್ಕತ್ತಾ : ಇಲ್ಲಿನ ಧಂ ಧಂ ಮೆಟ್ರೋ ನಿಲ್ದಾಣದಲ್ಲಿ ಯುವಕ ಯುವತಿಯರು ಫ್ರೀ ಹಗ್ ಆಂದೋಲನ ಹಮ್ಮಿಕೊಂಡಿದ್ದಾರೆ. ಇಲ್ಲಿ ಯಾರು ಯಾರನ್ನು ಬೇಕಾದರೂ ಅಪ್ಪಿಕೊಳ್ಳಬಹುದು. ಅದೂ ಉಚಿತವಾಗಿ!

ವಿಚಿತ್ರ ಎನಿಸುತ್ತಿದೆಯಲ್ಲವೇ? ಆದರೂ ಇದು ಸತ್ಯ. ಆದರೆ ಈ ಫ್ರೀ ಹಗ್ ಆಂದೋಲನದ ಹಿಂದೆ ಒಂದು ಮುಖ್ಯ ಕಾರಣ ಇದೆ. ಮಂಗಳವಾರ ಸಂಜೆ ಕೊಲ್ಕತ್ತಾ ಮೊಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಯುವ ಜೋಡಿಗಳು ಸಾರ್ವಜನಿಕವಾಗಿ ಅಪ್ಪಿಕೊಂಡಿದ್ದಕ್ಕಾಗಿ, ಪ್ರಯಾಣಿಕರು ಆ ಜೋಡಿಯನ್ನು ಥಳಿಸಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿಯೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಖ್ಯಾತ ಲೇಖಕಿ ತಸ್ರಿಮಾ ನಸ್ರೀನ್ ಕೂಡ ಈ ಘಟನೆಯನ್ನು ಖಂಡಿಸಿದ್ದರು. 

ಇದೀಗ ಈ ಘಟನೆಯನ್ನು ಖಂಡಿಸಿ, ಇಂದು ಕೊಲ್ಕತ್ತಾ ಮೆಟ್ರೋ ನಿಲ್ದಾಣದಲ್ಲಿ ಯುವಜನತೆ 'ಫ್ರೀ ಹಗ್' ಆಂದೋಲನ ಹಮ್ಮಿಕೊಂಡಿದ್ದು, ಒಬ್ಬರನ್ನೊಬ್ಬರು ಅಪ್ಪಿಕೊಳ್ಳುವುದು ಪ್ರೀತಿ, ವಿಶ್ವಾಸದ ಸಂಕೇತವೇ ಹೊರತು, ಹಗ್ ಮಾಡುವುದು ಕೆಟ್ಟದ್ದಲ್ಲ ಎಂಬ ಸಂದೇಶ ನೀಡಿ, ಸಾರ್ವಜನಿಕ ಜಾಗೃತಿಗೆ ಮುಂದಾಗಿದ್ದಾರೆ. 

Trending News