ಕೇಂದ್ರ ಬಜೆಟ್ 2018: ಶಿಕ್ಷಣ ಕ್ಷೇತ್ರಕ್ಕಾಗಿ ಯುವಜನತೆಯ ನಿರೀಕ್ಷೆಗಳು

 ಶಿಕ್ಷಣ ಸಾಲಗಳು, ಶಿಕ್ಷಕ ತರಬೇತಿ ಕಾರ್ಯಕ್ರಮಗಳು, ಸರ್ವ ಶಿಕ್ಷಣ ಅಭಿಯಾನ ಇತ್ಯಾದಿ ವಿಷಯಗಳನ್ನು ಮೋದಿ ಸರ್ಕಾರ ಬಜೆಟ್ ನಲ್ಲಿ ಮಂಡಿಸಲಿದೆಯೇ ಎಂದು ಯುವಜನತೆ ಕಾತುರದಿಂದ ಎದುರುನೋಡುತ್ತಿದ್ದಾರೆ.  

Last Updated : Jan 30, 2018, 03:40 PM IST
  • ಫೆ.1 ರಂದು ಕೇಂದ್ರ ಬಜೆಟ್ 2018 ಮಂಡನೆ.
  • ಶಾಲಾ ಶಿಕ್ಷಣಕ್ಕಾಗಿ ಈ ಬಾರಿ ಬಜೆಟ್ ನಲ್ಲಿ ಶೇ.14ರಷ್ಟು ಹೆಚ್ಚಿಸಬೇಕೆಂದು ಯುವಜನತೆ ಒತ್ತಾಯ.
  • ಶಿಕ್ಷಣ ಸಂಶೋಧನೆ ಮತ್ತು ತರಬೇತಿಗಾಗಿ ರಾಷ್ಟ್ರೀಯ ಮಂಡಳಿಗೆ ಹೆಚ್ಚಿನ ಆರ್ಥಿಕ ಸಹಕಾರದ ನಿರೀಕ್ಷೆ.
  • ಸಾಕ್ಷರತೆ ಮತ್ತು ಶಾಲಾ ಶಿಕ್ಷಣಕ್ಕಾಗಿ ಸರ್ಕಾರವು 2015-16ರಲ್ಲಿ ಶೇ.3.2 ರಷ್ಟನ್ನು ಹೆಚ್ಚಿಸಿತ್ತು.
  • ಅಟಲ್ ಟಿಂಕರಿಂಗ್ ಲ್ಯಾಬ್ ಮತ್ತು ಅಟಲ್ ಇನ್ಕ್ಯೂಬೇಶನ್ ಸೆಂಟರ್ಗಳಂತಹ ಯೋಜನೆಗಳನ್ನು ದೇಶಾದ್ಯಂತ ದೊಡ್ಡ ರೂಪದಲ್ಲಿ ಜಾರಿಗೊಳಿಸಬೇಕು.
ಕೇಂದ್ರ ಬಜೆಟ್ 2018: ಶಿಕ್ಷಣ ಕ್ಷೇತ್ರಕ್ಕಾಗಿ ಯುವಜನತೆಯ ನಿರೀಕ್ಷೆಗಳು title=

ನವದೆಹಲಿ : ಫೆಬ್ರವರಿ 1 ರಂದು ಕೇಂದ್ರ ಸಾಮಾನ್ಯ ಬಜೆಟ್ ಮಂಡನೆಯಾಗುವ ಹಿನ್ನೆಲೆಯಲ್ಲಿ ದೇಶದ ಯುವಜನತೆ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ಶಿಕ್ಷಣ ಸಾಲಗಳು, ಶಿಕ್ಷಕ ತರಬೇತಿ ಕಾರ್ಯಕ್ರಮಗಳು, ಸರ್ವ ಶಿಕ್ಷಣ ಅಭಿಯಾನ ಇತ್ಯಾದಿ ವಿಷಯಗಳನ್ನು ಮೋದಿ ಸರ್ಕಾರ ಬಜೆಟ್ ನಲ್ಲಿ ಮಂಡಿಸಲಿದೆಯೇ ಎಂದು ಯುವಜನತೆ ಕಾತುರದಿಂದ ಎದುರುನೋಡುತ್ತಿದ್ದಾರೆ.

ಈ ಬಜೆಟ್ ಪ್ರಸ್ತುತ ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಆಗಿದ್ದು, ದೇಶದ ಜನಸಂಖ್ಯೆಯಲ್ಲಿ 55 ಕೋಟಿಗೂ ಹೆಚ್ಚು ಮಂದಿ ಯುವ ವರ್ಗದವರಾಗಿದ್ದು, ತಮ್ಮ ಕನಸುಗಳ ಗುರಿ ಮುಟ್ಟಲು ಸರ್ಕಾರ ಸಹಾಯ ಮಾಡಲಿದೆ ಎಂಬ ಭರವಸೆ ಹೊಂದಿದ್ದಾರೆ. ಈ ಬಾರಿಯ ಬಜೆಟ್ನಿಂದ ಯುವಜನತೆಯ ನಿರೀಕ್ಷೆಗಳೇನು ಎಂಬುದನ್ನು ನೋಡೋಣ ....

ಶಾಲಾ ಶಿಕ್ಷಣಕ್ಕಾಗಿ ಬಜೆಟ್ ಹೆಚ್ಚಿಸಿ
ಶಾಲಾ ಶಿಕ್ಷಣಕ್ಕಾಗಿ ಈ ಬಾರಿ ಬಜೆಟ್ ನಲ್ಲಿ ಶೇ.14ರಷ್ಟು ಹೆಚ್ಚಿಸಬೇಕೆಂದು ಒತ್ತಾಯಿಸಿರುವ ಯುವಜನತೆ, ಇದರಿಂದ ಶಿಕ್ಷಣದ ಗುಣಮಟ್ಟದಲ್ಲಿ ಸುಧಾರಣೆ ಕಾಣಬಹುದು ಎಂದಿದ್ದಾರೆ. ತಜ್ಞರ ಪ್ರಕಾರ, ದೇಶದಲ್ಲಿ ಪ್ರಾಥಮಿಕ ಶಿಕ್ಷಣದ ಸ್ಥಿತಿಯ ದೃಷ್ಟಿಯಿಂದ, ಶಿಕ್ಷಣ ಕ್ಷೇತ್ರವು ಬಜೆಟ್ನಲ್ಲಿ ಮಹತ್ತರವಾದ ಆರ್ಥಿಕ ಬೆಂಬಲವನ್ನು ಪಡೆಯುತ್ತದೆ. ಇದಲ್ಲದೆ, ಶಾಲೆಗಳಲ್ಲಿ ಉನ್ನತ ಗುಣಮಟ್ಟದ ಶೈಕ್ಷಣಿಕ ಬಳಕೆ ಮತ್ತು ಪಠ್ಯಕ್ರಮದಲ್ಲಿ ಗುಣಾತ್ಮಕ ಸುಧಾರಣೆಯಾಗುವ ನಿರೀಕ್ಷೆಗಳಿವೆ. ಆರ್ಥಿಕ ವರ್ಷ 2016-17ರಲ್ಲಿ 43,554 ಕೋಟಿ ರೂ.ಗಳನ್ನು ಸಾಕ್ಷರತೆ ಮತ್ತು ಶಾಲಾ ಶಿಕ್ಷಣ ಅಭಿವೃದ್ಧಿಗಾಗಿ ಮತ್ತು ಉನ್ನತ ಶಿಕ್ಷಣಕ್ಕಾಗಿ 28,840 ಕೋಟಿ ರೂ. ಬಿಡುಗಡೆ ಮಾಡಿತ್ತು. ಸಾಕ್ಷರತೆ ಮತ್ತು ಶಾಲಾ ಶಿಕ್ಷಣಕ್ಕಾಗಿ ಸರ್ಕಾರವು 2015-16ರಲ್ಲಿ ಶೇ.3.2 ರಷ್ಟನ್ನು ಹೆಚ್ಚಿಸಿತ್ತು.

ಸರ್ವ ಶಿಕ್ಷಣ ಅಭಿಯಾನ
ದೇಶದ ಸಾಮಾಜಿಕ ದೃಷ್ಟಿಯಿಂದ ಮೂಲ ಶಿಕ್ಷಣದ ಸುಧಾರಣೆ ಅಗತ್ಯವಿದೆ. ಇದಕ್ಕಾಗಿ, ಸರ್ವ ಶಿಕ್ಷಣ ಅಭಿಯಾನದವನ್ನು ಬಜೆಟ್ನಲ್ಲಿ ಗಂಭೀರವಾಗಿ ಪರಿಗಣಿಸುವ ಅವಶ್ಯವಿದೆ. ದೇಶದ ಅನೇಕ ರಾಜ್ಯಗಳಲ್ಲಿ, ಈ ಕಾರ್ಯಾಚರಣೆಯ ಅಡಿಯಲ್ಲಿ ಶಾಲೆಗಳಲ್ಲಿ 100% ದಾಖಲಾತಿ ಪೂರ್ಣಗೊಂಡ ನಂತರ, ಶಿಕ್ಷಣ ಮತ್ತು ತರಬೇತಿ ಕಾರ್ಯಕ್ರಮಗಳಲ್ಲಿ ಆರ್ಥಿಕ ಹೂಡಿಕೆ ಅಗತ್ಯವಿದೆ. ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳಲ್ಲಿ ಶಿಕ್ಷಣದ ಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಶಿಕ್ಷಣ ಸಂಶೋಧನೆ ಮತ್ತು ತರಬೇತಿಗಾಗಿ  ರಾಷ್ಟ್ರೀಯ ಮಂಡಳಿಗೆ ಹೆಚ್ಚಿನ ಆರ್ಥಿಕ ಸಹಕಾರ ಬೇಕಿದೆ. ಕಳೆದ ಬಜೆಟ್ನಲ್ಲಿ ರಾಷ್ಟ್ರೀಯ ಮೌಲ್ಯಮಾಪನ ಸಮೀಕ್ಷೆಗೆ ಕೇವಲ ಒಂದು ಕೋಟಿ ರೂಪಾಯಿ ನೀಡಲಾಗಿದೆ. ಈ ಬಾರಿ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆಯಾಗಬೇಕೆಂದು ಪರಿಣಿತರು ಹೇಳಿದ್ದಾರೆ. 

ಶಿಕ್ಷಣ ಸಾಲ
ಇಂದು ದೇಶದಲ್ಲಿ ಶಿಕ್ಷಣ ಪಡೆಯುವುದು ತುಂಬಾ ದುಬಾರಿಯಾಗಿದೆ. 10 ವರ್ಷಗಳ ಹಿಂದೆ ಶಾಲೆಗಳು ಸರಾಸರಿ 2000 ರಿಂದ ರೂ 3000 ರವರೆಗೆ ಇದ್ದಾಗ, ಆ ಸಮಯದಲ್ಲಿ ಆದಾಯ ತೆರಿಗೆ ವಿಭಾಗ 80E ರೀತಿಯಲ್ಲಿ ತೆರಿಗೆ ವಿನಾಯಿತಿ ನೀಡಿತ್ತು. ಈ ರಿಯಾಯಿತಿ ಕೂಡ 8 ವರ್ಷಗಳವರೆಗೆ ಮಾತ್ರ ಚಾಲ್ತಿಯಲ್ಲಿತ್ತು. ಈಗ ಶಾಲೆಗಳ ಶುಲ್ಕಗಳು ಸರಾಸರಿ 5000 ರಿಂದ ರೂ. 6000 ಕ್ಕೆ ಹೆಚ್ಚಾಗಿದೆ. ಇತಹ ಸಂದರ್ಭದಲ್ಲಿ, ತೆರಿಗೆ ವಿನಾಯಿತಿ ಅವಧಿಯನ್ನು ಕೂಡ ಹೆಚ್ಚಿಸಬೇಕಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಪೋಷಕರಿಗೂ ಸಹಾಯವಾಗುತ್ತದೆ. ಶಿಕ್ಷಣ ಸಾಲದಲ್ಲಿ ಮನೆ ಸಾಲಗಳಂತಹ ಪೂರ್ಣಾವಧಿಯ ಸಾಲವನ್ನು ಮರುಪಾವತಿಸುವುದು ಸಾಧ್ಯವೆಂದು ತಜ್ಞರು ಪ್ರತಿಪಾದಿಸಿದ್ದು, ಸರ್ಕಾರ ಇಂತಹ ವ್ಯವಸ್ಥೆಗಳನ್ನು ಜಾರಿಗೆ ತರಬೇಕಿದೆ.

ತರಬೇತಿ ಕಾರ್ಯಕ್ರಮಗಳ ಪ್ರಚಾರ
2019 ರ ವೇಳೆಗೆ ದೇಶದ ಎಲ್ಲಾ ರಾಜ್ಯಗಳಲ್ಲಿ ಶಿಕ್ಷಕರಿಗೆ ತರಬೇತಿ ನೀಡಲು ಯೋಜಿಸಲಾಗಿದೆ. ಕಳೆದ ವರ್ಷದ ಯೋಜನೆಗಳಾದ ಅಟಲ್ ಟಿಂಕರಿಂಗ್ ಲ್ಯಾಬ್ ಮತ್ತು ಅಟಲ್ ಇನ್ಕ್ಯೂಬೇಶನ್ ಸೆಂಟರ್ಗಳ ಅತ್ಯುತ್ತಮ ಫಲಿತಾಂಶಗಳನ್ನೂ ಸಹ ನಾವು ಗಮನಿಸಬೇಕಿದೆ. ಇಂತಹ ಕಾರ್ಯಕ್ರಮಗಳು  ದೇಶಾದ್ಯಂತ ದೊಡ್ಡ ರೂಪದಲ್ಲಿ ಜಾರಿಗೊಳಿಸಬೇಕು. ಇದಲ್ಲದೆ, ಕಳೆದ ವರ್ಷ ವಿದ್ಯಾರ್ಥಿಗಳು ಡಿಜಿಟಲ್ ಶಿಕ್ಷಣಕ್ಕೆ ಸಂಪರ್ಕ ಸಾಧಿಸಲು ಅನುಕೂಲ ಮಾಡಿಕೊಡಲಾಗಿದೆ. ಅಪ್ಲಿಕೇಶನ್ ವಿದ್ಯಾರ್ಥಿಗಳಿಗೆ ಉಚಿತವಾಗಿ ಅಧ್ಯಯನ ವಿಷಯ ಮತ್ತು ಡಿಜಿಟಲ್ ತರಗತಿಯ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಇಂತಹ ಪ್ರಯೋಗಗಳನ್ನು ಮತ್ತಷ್ಟು ಪ್ರೋತ್ಸಾಹಿಸಬೇಕಿದೆ.

Trending News