ನಿಮ್ಮ ವಾಹನ ಪೆಟ್ರೋಲ್, ಡೀಸೆಲ್‌ನಿಂದಷ್ಟೇ ಅಲ್ಲ, ಮೀನು, ಮಟನ್‍ನಿಂದಲೂ ಚಲಿಸಲಿದೆ!

ಬೆಳೆಗಳನ್ನು ಕೊಯ್ಲು ಮಾಡಿದ ಬಳಿಕ ಸುಡಲಾಗುವ ಕಡ್ಡಿಗಳನ್ನು ಸಿಎನ್‌ಜಿಯಾಗಿ ಪರಿವರ್ತಿಸುವ ಕೆಲಸವನ್ನು ಈಗಾಗಲೇ ಲುಧಿಯಾನದಲ್ಲಿ ಪ್ರಾರಂಭಿಸಲಾಗಿದೆ. ಇದಲ್ಲದೆ, ಆಹಾರ ತ್ಯಾಜ್ಯಗಳಾದ ಮಟನ್, ಮೀನು, ಹಣ್ಣುಗಳು ಮತ್ತು ತರಕಾರಿಗಳನ್ನು ಬಯೋ-ಸಿಎನ್‌ಜಿಯಾಗಿ ಪರಿವರ್ತಿಸುವ ಪ್ರಕ್ರಿಯೆಯನ್ನು ಮುಂದಿನ ಎರಡು ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ಪ್ರಾರಂಭಿಸಲಾಗುವುದು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

Last Updated : Sep 23, 2019, 07:23 PM IST
ನಿಮ್ಮ ವಾಹನ ಪೆಟ್ರೋಲ್, ಡೀಸೆಲ್‌ನಿಂದಷ್ಟೇ ಅಲ್ಲ, ಮೀನು, ಮಟನ್‍ನಿಂದಲೂ ಚಲಿಸಲಿದೆ! title=

ನವದೆಹಲಿ: ಈಗ ನಿಮ್ಮ ವಾಹನಗಳು ಪೆಟ್ರೋಲ್, ಡೀಸೆಲ್ ನಿಂದ ಅಷ್ಟೇ ಅಲ್ಲ, ಮಟನ್, ಮೀನುಗಳಿಂದಲೂ ಸಹ ಚಲಿಸುತ್ತವೆ. ಅಚ್ಚರಿಯಾಗುತ್ತಿದೆಯಲ್ಲವೇ? ಆದರೂ ಇದು ಸತ್ಯ!

ದೆಹಲಿಯಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿನ ಇಂಧನ ದಕ್ಷತೆಯ ಕುರಿತು ನಡೆದ ರಾಷ್ಟ್ರೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ನಿತಿನ್ ಗಡ್ಕರಿ, ಪಳೆಯುಳಿಕೆ ಇಂಧನಗಳನ್ನು ಪರ್ಯಾಯ ಇಂಧನ ಮೂಲಗಳೊಂದಿಗೆ ಬದಲಾಯಿಸುವ ಸರ್ಕಾರದ ನಿಲುವನ್ನು ಸೋಮವಾರ ಪುನರುಚ್ಚರಿಸಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಶೀಘ್ರದಲ್ಲೇ ಬಸ್ಸುಗಳು ಆಹಾರ ತ್ಯಾಜ್ಯವನ್ನು ಸಂಸ್ಕರಿಸುವ ಮೂಲಕ ಉತ್ಪಾದಿಸುವ ನೈಸರ್ಗಿಕ ಇಂಧನದಿಂದ ಚಲಿಸಲಿವೆ ಎಂದು ಹೇಳಿದರು. 

ಬೆಳೆಗಳನ್ನು ಕೊಯ್ಲು ಮಾಡಿದ ಬಳಿಕ ಸುಡಲಾಗುವ ಕಡ್ಡಿಗಳನ್ನು ಸಿಎನ್‌ಜಿಯಾಗಿ ಪರಿವರ್ತಿಸುವ ಕೆಲಸವನ್ನು ಈಗಾಗಲೇ ಲುಧಿಯಾನದಲ್ಲಿ ಪ್ರಾರಂಭಿಸಲಾಗಿದೆ. ಇದಲ್ಲದೆ, ಆಹಾರ ತ್ಯಾಜ್ಯಗಳಾದ ಮಟನ್, ಮೀನು, ಹಣ್ಣುಗಳು ಮತ್ತು ತರಕಾರಿಗಳನ್ನು ಬಯೋ-ಸಿಎನ್‌ಜಿಯಾಗಿ ಪರಿವರ್ತಿಸುವ ಪ್ರಕ್ರಿಯೆಯನ್ನು ಮುಂದಿನ ಎರಡು ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ಪ್ರಾರಂಭಿಸಲಾಗುವುದು. ಮೆಥನಾಲ್ ಮತ್ತು ಕಾರ್ಬನ್ ಡೈಆಕ್ಸೈಡ್ (ಸಿಒ 2) ಅನ್ನು ಬೇರ್ಪಡಿಸುವ ಮೂಲಕ ಉತ್ಪಾದಿಸುವ ಸಿಎನ್‌ಜಿಯನ್ನು ಬಸ್‌ಗಳಿಗೆ ಇಂಧನವಾಗಿ ಬಳಸಲಾಗುವುದು ಎಂದು ಗಡ್ಕರಿ ತಿಳಿಸಿದರು.

ಅಷ್ಟಕ್ಕೂ ನಿತಿನ್ ಗಡ್ಕರಿ ಅವರು, ವಾಹನಗಳಿಗೆ ಪರ್ಯಾಯ ಇಂಧನ ಮೂಲಗಳನ್ನು ಬಳಸಲು ಸಲಹೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹಾಗೂ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಪೆಟ್ರೋಲ್-ಡೀಸೆಲ್ ವಾಹನಗಳನ್ನು ನಿಷೇಧಿಸುವ ಅಥವಾ ವಿದ್ಯುತ್ ಚಾಲಿತ ವಾಹನಗಳನ್ನು ಕಡ್ಡಾಯಗೊಳಿಸುವ ಅಗತ್ಯವಿಲ್ಲ ಎಂದು  ಅಭಿಪ್ರಾಯಪಟ್ಟಿದ್ದಾರೆ.

Trending News