ಬಿಜೆಪಿ ಗೆ ಗುಡ್ ಬೈ ಹೇಳಿದ ಯಶವಂತ್ ಸಿನ್ಹಾ

    

Last Updated : Apr 21, 2018, 02:29 PM IST
ಬಿಜೆಪಿ ಗೆ ಗುಡ್ ಬೈ ಹೇಳಿದ ಯಶವಂತ್ ಸಿನ್ಹಾ  title=

ನವದೆಹಲಿ: ಮಾಜಿ ಕೇಂದ್ರ ಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ ಯಶವಂತ್ ಸಿನ್ಹಾ ಇಂದು ಬಿಜೆಪಿಗೆ ವಿದಾಯ ಹೇಳಿದ್ದಾರೆ.

ಈ ಕುರಿತಾಗಿ ಪಾಟ್ನಾದಲ್ಲಿ ಮಾತನಾಡಿದ ಅವರು " ಇಂದು ನಾನು  ಬಿಜೆಪಿ ಜೊತೆ ಎಲ್ಲ ರೀತಿಯ ಜವಾಬ್ದಾರಿಗಳಿಂದ ತೊರೆಯುತ್ತಿದ್ದೇನೆ,ಮತ್ತು ಚುನಾವಣಾ ರಾಜಕಾರಣಕ್ಕೂ ವಿದಾಯ ಹೇಳುತ್ತಿದ್ದೇನೆ" ಎಂದು ರಾಷ್ಟ್ರ ಮಂಚ್ ನ ಸಭೆಗೆ ಮುನ್ನ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ. ರಾಷ್ಟ್ರ ಮಂಚ್ ನ ಸಭೆಯಲ್ಲಿ ರಾಷ್ಟ್ರೀಯ ಜನತಾದಳದ ನಾಯಕರು ಮತ್ತು ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಅವರು ಭಾಗವಹಿಸಿದ್ದಾರೆ. 

ಬಿಜೆಪಿ ಹಿರಿಯ ನಾಯಕ ಯಶವಂತ್ ಸಿನ್ಹಾ, ಈ ಹಿಂದೆ ಹಣಕಾಸು ಮತ್ತು ವಿದೇಶಾಂಗ ಖಾತೆಯನ್ನು ವಾಜಪೇಯಿ ರವರು ಪ್ರಧಾನಿಯಾಗಿದ್ದ ವೇಳೆ ಕಾರ್ಯ ನಿರ್ವಹಿಸಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಗೆಲುವು ಸಾಧಿಸಿದ ನಂತರ ಅವರನ್ನು ಹಿರಿಯ ನಾಯಕ ಅಡ್ವಾಣಿಯವರ ಜೊತೆ ಇವರನ್ನು ಕೂಡ ಮೂಲೆಗುಂಪು ಮಾಡಲಾಗಿತ್ತು.

Trending News