ಭಾರತೀಯ ಆರ್ಥಿಕತೆಗೆ ದೊಡ್ಡ ಪೆಟ್ಟು, 2020-21 ರಲ್ಲಿ ಆರ್ಥಿಕ ವೃದ್ಧಿ ದರ ಕೇವಲ ಶೇ.2.8 ಎಂದ ವಿಶ್ವಬ್ಯಾಂಕ್

ಈ ಕುರಿತು ಹೇಳಿಕೆ ನೀಡಿರುವ ವಿಶ್ವಬ್ಯಾಂಕ್ ಕೊರೊನಾ ವೈರಸ್ ನ ಪ್ರಕೋಪ ಭಾರತೀಯ ಅರ್ಥ ವ್ಯವಸ್ಥೆಗೆ ಭಾರಿ ಪೆಟ್ಟು ನೀಡಿದೆ ಎಂದು ಹೇಳಿದೆ.

Last Updated : Apr 12, 2020, 02:06 PM IST
ಭಾರತೀಯ ಆರ್ಥಿಕತೆಗೆ ದೊಡ್ಡ ಪೆಟ್ಟು, 2020-21 ರಲ್ಲಿ ಆರ್ಥಿಕ ವೃದ್ಧಿ ದರ ಕೇವಲ ಶೇ.2.8 ಎಂದ ವಿಶ್ವಬ್ಯಾಂಕ್  title=

ವಾಶಿಂಗ್ಟನ್: ಭಾರತೀಯ ಆರ್ಥಿಕ ವ್ಯವಸ್ಥೆಗೆ ಕೊರೊನಾ ವೈರಸ್ ಮಹಾಮಾರಿ ಭಾರಿ ಪೆಟ್ಟು ನೀಡಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. ಇದರಿಂದ ಭಾರತೀಯ ಆರ್ಥಿಕ ಅಭಿವೃದ್ಧಿ ದರ ಕೂಡ ಭಾರಿ ಹಿನ್ನಡೆ ಅನುಭವಿಸಿದೆ ಎಂದು ಜಾಗತಿಕ ಬ್ಯಾಂಕ್ ಹೇಳಿದೆ. ಈ ಕುರಿತು ತನ್ನ 'ದಕ್ಷಿಣ ಏಷ್ಯಾದ ಆರ್ಥಿಕತೆಯ ಬಗ್ಗೆ ಇತ್ತೀಚಿನ ಅಂದಾಜುಗಳು: ಕೋವಿಡ್ -19 ಪರಿಣಾಮ' ವರದಿಯಲ್ಲಿ 2019-20ರ ಅವಧಿಯಲ್ಲಿ ಭಾರತೀಯ ಆರ್ಥಿಕ ಅಭಿವೃದ್ಧಿಯ ದರ ಇಳಿಕೆಯಾಗಿ ಶೇ.5ಕ್ಕೆ ಬಂದು ತಲುಪಿದ್ದು, 2020-21ರ ಅವಧಿಯಲ್ಲಿ ಈ ದರ ಇನ್ನಷ್ಟು ಕುಸಿದು ಶೇ.2.8ಕ್ಕೆ ಬಂದು ತಲುಪಿದೆ.

ಈಗಾಗಲೇ ಭಾರತೀಯ ಆರ್ಥಿಕ ಕ್ಷೇತ್ರದ ಮೇಲೆ ಭಾರಿ ಒತ್ತದವಿದ್ದು, ಇಂತಹ ಸಮಯದಲ್ಲಿ ಕೊವಿಡ್-19 ಹೊಡೆತ ಭಾರಿಯಾಗಿ ಪರಿಣಮಿಸಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ಮಹಾಮಾರಿಯ ಮೇಲೆ ಹಿಡಿತ ಸಾಧಿಸಲು ಸರ್ಕಾರ ದೇಶವ್ಯಾಪಿ ಲಾಕ್ ಡೌನ್ ಘೋಸ್ನಿಸಿದ್ದು, ಮುಂದೆಯೂ ಕೂಡ ಇದು ಮುಂದುವರೆಯಲಿದೆ ಎನ್ನಲಾಗಿದೆ. ಇದರಿಂದ ಜನರ ಓಡಾಟದ ಮೇಲೆ ಭಾರಿ ಪರಿಣಾಮ ಉಂಟಾಗಿದ್ದು, ವಸ್ತುಗಳ ವಹಿವಾಟು ಕೂಡ ನಿಂತುಹೋಗಿದೆ

ದೇಶೀಯ ಪೂರೈಕೆ ಮತ್ತು ಬೇಡಿಕೆಯ ಮೇಲೆ ಉಂಟಾಗಿರುವ ಪರಿಣಾಮದಿಂದ ಆರ್ಥಿಕ ಬೆಳವಣಿಗೆಯ ದರವು 2020-21ರಲ್ಲಿ ಶೇಕಡಾ 2.8 ಕ್ಕೆ ಇಳಿಯಲಿದೆ. ಜಾಗತಿಕ ಮಟ್ಟದಲ್ಲಿ ಹೆಚ್ಚಿದ ಅಪಾಯದಿಂದಾಗಿ ದೇಶೀಯ ಹೂಡಿಕೆಯಲ್ಲಿ ಸುಧಾರಣೆಯೂ ವಿಳಂಬವಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಮುಂದಿನ ಹಣಕಾಸು ವರ್ಷದಲ್ಲಿ ಅಂದರೆ 2021-22ರಲ್ಲಿ ಕೋವಿಡ್ -19 ರ ಪರಿಣಾಮದ ಅಂತ್ಯವಾದ ಬಳಿಕ, ಆರ್ಥಿಕತೆಯು ಶೇ.5ರಷ್ಟು ಬೆಳವಣಿಗೆಯನ್ನು ದಾಖಲಿಸುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ. ಆದರೆ ಇದಕ್ಕಾಗಿ ಸೂಕ್ತ ಹಣಕಾಸು ಮತ್ತು ಹಣಕಾಸು ನೀತಿ ಬೆಂಬಲ ಅಗತ್ಯವಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಕಾನ್ಫಾರೆನ್ಸ್ ಕಾಲ್ ನಲ್ಲಿ ಮಾತನಾಡಿರುವ ವಿಶ್ವಬ್ಯಾಂಕ್ ನ ಮುಖ್ಯ ಅರ್ಥಶಾಸ್ತ್ರಜ್ಞ ಹ್ಯಾನ್ಸ್ ಟಿಮ್ಮರ್, ಈ ನಿಟ್ಟಿನಲ್ಲಿ ಭಾರತದ ಸನ್ನಿವೇಶ ಅಷ್ಟೊಂದು ಉತ್ತಮವಾಗಿಲ್ಲ ಎಂದು ಹೇಳಿದ್ದಾರೆ.

ಒಂದು ವೇಳೆ ಭಾರತದಲ್ಲಿ ಲಾಕ್ ಡೌನ್ ಪರಿಸ್ಥಿತಿ ಅಧಿಕ ಸಮಯದವರೆಗೆ ಮುಂದುವರೆದರೆ ಅದರ ಆರ್ಥಿಕ ಪರಿಣಾಮಗಳು ವಿಶ್ವಬ್ಯಾಂಕ್ ಅಂದಾಜಿಗಿಂತಲೂ ಕೂಡ ಕೆಳಕ್ಕೆ ಕುಸಿಯಲಿದೆ ಎಂದು ಟಿಮ್ಮರ್ ಹೇಳಿದ್ದಾರೆ.

ಇದಕ್ಕೂ ಮುಂದುವರೆದು ಮಾತನಾಡಿರುವ ಟಿಮ್ಮರ್, ಈ ಸವಾಲನ್ನು ಎದುರಿಸಲು ಭಾರತ ಮೊದಲು ಕೊರೊನಾ ವೈರಸ್ ಮಹಾಮಾರಿಯ ಹರಡುವಿಕೆಯನ್ನು ತಡೆಗಟ್ಟಬೇಕು. ಜೊತೆಗೆ ಎಲ್ಲರಿಗೂ ಊಟ ಸಿಗುವುದನ್ನು ಅಲ್ಲಿನ ಸರ್ಕಾರ ಸುನಿಶ್ಚಿತಗೊಳಿಸಬೇಕು ಮತ್ತು ಅದರಲ್ಲೂ ವಿಷೆಶವಾತಿ ಭಾರತ ಸ್ಥಳೀಯ ಮಟ್ಟದಲ್ಲಿ ತಾತ್ಕಾಲಿಕ ಉದ್ಯೋಗ ಕಾರ್ಯಕ್ರಮಗಳ ಮೇಲೆ ಹೆಚ್ಚಿನ ಗಮನ ನೀಡುವ ಅಗತ್ಯತೆ ಇದೆ. ಇದರ ಜೊತೆಗೆ ಲಘು ಹಾಗೂ ಮಧ್ಯಮ ಉದ್ಯಮಗಳನ್ನು ದಿವಾಳಿತನದಿಂದ ಭಾರತ ಕಾಪಾಡಬೇಕು ಎಂದು ಹ್ಯಾನ್ಸ್ ಟಿಮ್ಮ್ರರ್ ಹೇಳಿದ್ದಾರೆ.

Trending News