ಇಂದಿನಿಂದ ದೇಶಾದ್ಯಂತ ಮೊದಲ ಹಂತದ Covid Vaccine ನೀಡುವ ಅಭಿಯಾನ ಆರಂಭ

ಪ್ರಧಾನ ಮಂತ್ರಿ ನರೇಂದ್ರ ಮೋದಿ  ಶನಿವಾರ ಬೆಳಿಗ್ಗೆ 10.30ಕ್ಕೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ದೇಶವ್ಯಾಪಿ ಮೊದಲ ಹಂತದ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ದೇಶಾದ್ಯಂತ ಒಟ್ಟು 3,006 ಲಸಿಕಾ ವಿತರಣಾ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಎಲ್ಲಾ ಕೇಂದ್ರಗಳ ಜೊತೆ ಆನ್‌ಲೈನ್‌ ಮೂಲಕ ಸಂಪರ್ಕಿಸುವ ವ್ಯವಸ್ಥೆಯನ್ನೂ ರೂಪಿಸಲಾಗಿದೆ.

Written by - Yashaswini V | Last Updated : Jan 16, 2021, 07:26 AM IST
  • ಪ್ರತಿ ದಿನ ಸರಾಸರಿ 100 ಮಂದಿಗೆ ಲಸಿಕೆ ಹಾಕಲು ನಿರ್ಧಾರ, ಶೇಕಡಾ 10 ರಷ್ಟು ಮೀಸಲು ಡೋಸ್ ಗಳು
  • ನಿಗದಿಗಿಂತ ಹೆಚ್ಚು ಜನರಿಗೆ ಲಸಿಕೆ ಹಾಕದಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರದ ಸೂಚನೆ
  • ಲಸಿಕೆ ನೀಡುವ ಪ್ರಕ್ರಿಯೆ ಸರಾಗವಾಸ ಬಳಿಕ ಲಸಿಕೆ ನೀಡಿಕೆ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲು ಸೂಚನೆ
ಇಂದಿನಿಂದ ದೇಶಾದ್ಯಂತ ಮೊದಲ ಹಂತದ Covid Vaccine ನೀಡುವ ಅಭಿಯಾನ ಆರಂಭ title=
Photo Courtesy - PTI

ನವದೆಹಲಿ: ಜಗತ್ತಿನ ಅನೇಕ ರಾಷ್ಡ್ರಗಳು ಈಗಾಗಲೇ ಕೋವಿಡ್-19 ಲಸಿಕೆ (Covid -19 Vaccine) ವಿತರಿಸುತ್ತಿದ್ದು ಇಂದಿನಿಂದ ದೇಶದಲ್ಲೂ ಮೊದಲ ಹಂತದ ಲಸಿಕೆ ಅಭಿಯಾನ ಆರಂಭವಾಗಲಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಶನಿವಾರ ಬೆಳಿಗ್ಗೆ 10.30ಕ್ಕೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ದೇಶವ್ಯಾಪಿ ಮೊದಲ ಹಂತದ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

ದೇಶಾದ್ಯಂತ ಒಟ್ಟು 3,006 ಲಸಿಕಾ ವಿತರಣಾ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಎಲ್ಲಾ ಕೇಂದ್ರಗಳ ಜೊತೆ ಆನ್‌ಲೈನ್‌ ಮೂಲಕ ಸಂಪರ್ಕಿಸುವ ವ್ಯವಸ್ಥೆಯನ್ನೂ ರೂಪಿಸಲಾಗಿದೆ. ಪ್ರತಿ ಕೇಂದ್ರದಲ್ಲಿಯೂ ಒಂದು ದಿನಕ್ಕೆ ಸಮಾರು 100  ಫಲಾನುಭವಿಗಳಿಗೆ ಲಸಿಕೆ ಹಾಕಲು ತಯಾರಿಗಳಾಗಿವೆ.

ಇದನ್ನೂ ಓದಿ - Good News: ಇಂದಿನಿಂದ ಮೊದಲ ಹಂತದ Covishield ಲಸಿಕೆಗಳ ವಿತರಣೆ ಆರಂಭ

ಆಸ್ಟ್ರಾ ಜೆನೆಕಾ (Astrazeneca) ಮತ್ತು ಆಕ್ಸ್‌ಫರ್ಡ್‌ ಯುನಿವರ್ಸಿಟಿ (Oxford University) ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಹಾಗೂ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (Serum Institute Of India) ಪ್ರಯೋಗ ನಡೆಸುತ್ತಿರುವ ಕೋವಿಶೀಲ್ಡ್‌ (Covishield) ಹಾಗೂ ಹೈದರಾಬಾದ್‌ನ ಭಾರತ್‌ ಬಯೊಟೆಕ್‌ (Bharath Biotech) ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ (Indian Council Of Medical Research) ಅಭಿವೃದ್ಧಿ ಪಡಿಸಿರುವ (Covaxine) ಲಸಿಕೆಗಳನ್ನು ವಿತರಿಸಲಾಗುತ್ತದೆ. 

ಮೊದಲ ಹಂತದಲ್ಲಿ ಒಟ್ಟು 1.65 ಕೋಟಿ ಕೋವಿಶೀಲ್ಡ್‌ (Covishield) ಮತ್ತು ಕೋವ್ಯಾಕ್ಸಿನ್‌  (Covaxine) ಡೋಸ್‌ಗಳನ್ನು ಖರೀದಿಸಲಾಗಿದೆ. ಮೊದಲಿಗೆ ಆರೋಗ್ಯ ಸೇವಾ ಕ್ಷೇತ್ರದಲ್ಲಿ ನಿರತರಾಗಿರುವ ಸಿಬ್ಬಂದಿಗೆ,  ಕೋವಿಡ್‌ ಮುಂಚೂಣಿ ಕಾರ್ಯಕರ್ತರಿಗೆ (Corona Warriors) ಗಳಿಗೆ ನೀಡಲಾಗುತ್ತದೆ. ಆರೋಗ್ಯ ಸೇವಾ ಕ್ಷೇತ್ರದಲ್ಲಿ ನಿರತರಾಗಿರುವ ಸಿಬ್ಬಂದಿಗೆ ಮತ್ತು ಕೋವಿಡ್‌ ಮುಂಚೂಣಿ ಕಾರ್ಯಕರ್ತರಿಗೆ ಉಚಿತವಾಗಿ ಲಸಿಕೆಗಳನ್ನು ನೀಡಲಾಗುತ್ತದೆ.

ಇದನ್ನೂ ಓದಿ - COVID vaccineನಲ್ಲಿ ಹಂದಿ ಮಾಂಸ : ವದಂತಿಗೆ ತೆರೆಯೆಳೆಯಲು ಮುಂದಾದ ಮುಸ್ಲಿಂ ಸಮುದಾಯ

ಮೊದಲ ಹಂತದಲ್ಲಿ 1 ಕೋಟಿ ಆರೋಗ್ಯ ಕಾರ್ಯಕರ್ತರು, 2 ಕೋಟಿ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತದೆ. ಇದಾದಮೇಲೆ 50 ವರ್ಷ ದಾಟಿದವರಿಗೆ ನೀಡಲಾಗುತ್ತದೆ. ಆನಂತರ, 50 ವರ್ಷದೊಳಗಿನ ಇತರ ಕಾಯಿಲೆಗಳಿರುವವರಿಗೆ ಲಸಿಕೆ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕೇಂದ್ರ ಸರ್ಕಾರವು 'ಗರಿಷ್ಠ 10 ದಿನಗಳ ಒಳಗೆ ಮೊದಲ ಹಂತದ ಅಭಿಯಾನವನ್ನು ಪೂರ್ಣಗೊಳಿಸಬೇಕು. ಪ್ರತಿ ದಿನ ಸರಾಸರಿ 100 ಮಂದಿಗೆ ಲಸಿಕೆ ಹಾಕಬೇಕು.  ಶೇಕಡಾ 10ರಷ್ಟು ಲಸಿಕೆಗಳನ್ನು ಮೀಸಲು ಡೋಸ್‌ಗಳೆಂದು ಸಂಗ್ರಹಿಸಿಡಬೇಕು. ನಿಗದಿಗಿಂತ ಹೆಚ್ಚು ಜನರಿಗೆ ಲಸಿಕೆ ಹಾಕಲು ಮುಂದಾಗಬಾರದು. ಲಸಿಕೆ ನೀಡಿಕೆ ಪ್ರಕ್ರಿಯೆ ಸರಾಗವಾಗುತ್ತಿದ್ದಂತೆ ಕ್ರಮೇಣ ಲಸಿಕೆ ನೀಡಿಕೆ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಬೇಕು' ಎಂದು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

ಇದನ್ನೂ ಓದಿ - Corona Vaccine ನಿಮ್ಮ ಬಳಿ ಹೇಗೆ ತಲುಪಲಿದೆ ಗೊತ್ತೇ?

ಇಂದಿನಿಂದ ಮೊದಲ ಹಂತದ ಲಸಿಕೆ ಅಭಿಯಾನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್‌ (Dr Harshvardhan) ಅವರು ಶುಕ್ರವಾರ ದೆಹಲಿಯ ನಿರ್ಮಾಣ್‌ ಭವನದಲ್ಲಿರುವ ಕೋವಿಡ್‌ ನಿಯಂತ್ರಣ ಕೊಠಡಿಗೆ ಭೇಟಿ ನೀಡಿ, ಪೂರ್ವತಯಾರಿಗಳ ಬಗ್ಗೆ ಪರಿಶೀಲನೆ ನಡೆಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News