ಕೊಟ್ಟಾಯಂ: ಕೇರಳದ ಕೊಟ್ಟಾಯಂ ವೈದ್ಯಕೀಯ ಕಾಲೇಜಿನಲ್ಲಿ ನವಜಾತ ಶಿಶುವನ್ನು ಕಳವು(Infant Kidnap Case) ಮಾಡಲಾಗಿದೆ. ನರ್ಸ್ ಡ್ರೆಸ್ ನಲ್ಲಿ ಬಂದಿದ್ದ ಮಹಿಳೆ ಈ ಕೃತ್ಯ ಎಸಗಿದ್ದಾಳೆ. ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದಾಗ ಮಗು ಕಳ್ಳತನದ ಹಿಂದಿನ ಕಾರಣ ತಿಳಿದು ಬೆಚ್ಚಿಬಿದ್ದಿದ್ದಾರೆ.
ಜ.6ರಂದು ಮಗು ಕಳ್ಳತನವಾಗಿತ್ತು!
ಪೊಲೀಸರ ಪ್ರಕಾರ(Kerala Police) ಜನವರಿ 6ರಂದು ನರ್ಸ್ ವೇಷದಲ್ಲಿ ಮಹಿಳೆಯೊಬ್ಬರು ವೈದ್ಯಕೀಯ ಆಸ್ಪತ್ರೆಯ ಹೆರಿಗೆ ವಿಭಾಗ ತಲುಪಿದ್ದರು. ಮಧ್ಯಾಹ್ನ 3 ಗಂಟೆಗೆ ಮಗುವಿನೊಂದಿಗೆ ಎಸ್ಕೇಪ್ ಆಗಿದ್ದರು. ನವಜಾತ ಶಿಶುವಿನ ತಾಯಿ ಮತ್ತು ಸಂಬಂಧಿಕರಿಗೆ ತಮ್ಮ ಮಗು ಕಳ್ಳತನವಾಗಿದೆ ಎಂದು ತಿಳಿಯಲು ಅರ್ಧ ಗಂಟೆ ಬೇಕಾಗಿತ್ತು. ಆದರೆ ಪೊಲೀಸರು ಕೆಲವೇ ಗಂಟೆಗಳಲ್ಲಿ ನವಜಾತ ಶಿಶು(Child Kidnap)ವನ್ನು ಪತ್ತೆ ಮಾಡಿ ತಾಯಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: Guru Gobind Singh Jayanti 2022: ವಾರಾಂತ್ಯದ ಕರ್ಪ್ಯೂ ಸಡಿಲಗೊಳಿಸಿದ ದೆಹಲಿ
ಪ್ರಿಯಕರನಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದಳು..!
ಮಗುವನ್ನು ಕದ್ದ ಮಹಿಳೆಯನ್ನು ನೀತು (33) ಎಂದು ಗುರುತಿಸಲಾಗಿದೆ. ಮಹಿಳೆ ಈ ಮಗುವಿಗೆ ಜನ್ಮ ನೀಡಿರುವುದಾಗಿ ತನ್ನ ಪ್ರಿಯಕರ ಇಬ್ರಾಹಿಂ ಬಾದುಷಾಗೆ ತೋರಿಸಲು ಬಯಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಬಾದುಶಾ ಎರ್ನಾಕುಲಂ ನಿವಾಸಿ. ವಾಸ್ತವವಾಗಿ ಮಹಿಳೆ ಗರ್ಭಪಾತ ಮಾಡಿಸಿಕೊಂಡಿದ್ದಳಂತೆ. ಆದರೆ ಅವಳು ಅದರ ಬಗ್ಗೆ ತನ್ನ ಪ್ರೇಮಿಗೆ ತಿಳಿಸಿರಲಿಲ್ಲವಂತೆ.
ಈ ಬಗ್ಗೆ ಮಾತನಾಡಿರುವ ಕೊಟ್ಟಾಯಂ ಪೊಲೀಸ್ ವರಿಷ್ಠಾಧಿಕಾರಿ(Kottayam Police Commissioner) ಶಿಲ್ಪಾ ದ್ಯಾವಯ್ಯ, ‘ನೀತು ತಾನು ಗರ್ಭಿಣಿ ಎಂದು ಬಾದುಷಾಗೆ ತಿಳಿಸಿದ್ದಳು. ಆಕೆಯ ಗೆಳೆಯ ಬೇರೆ ಹುಡುಗಿಯನ್ನು ಮದುವೆಯಾಗಲು ನಿರ್ಧರಿಸಿದ್ದ. ಹೀಗಾಗಿ ತನಗೆ ಮಗುವಾಗಿದೆ ಎಂದು ಆಕೆ ಅವನನ್ನು ಬ್ಲ್ಯಾಕ್ ಮೇಲ್ ಮಾಡಲು ಪ್ರಾರಂಭಿಸಿದ್ದಳಂತೆ. ಒಂದು ವೇಳೆ ಮಗುವಿನ ಬಗ್ಗೆ ಪ್ರಿಯಕರ ಕೇಳಿದರೆ ಕದ್ದಿರುವ ಮಗುವನ್ನೇ ಆತನಿಗೆ ತೋರಿಸಲು ಆಕೆ ಹೀಗೆ ಮಾಡಿದ್ದಳಂತೆ.
ಇದನ್ನೂ ಓದಿ: ಕೊರೊನಾ ಪ್ರಕರಣಗಳ ಹೆಚ್ಚಳದ ಹಿನ್ನಲೆಯಲ್ಲಿ ಸರ್ವಪಕ್ಷಗಳ ಸಭೆ ಕರೆಯಲು ಆಗ್ರಹಿಸಿದ ಕಾಂಗ್ರೆಸ್
ಕದ್ದ ಮಗುವಿನೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಳು!
‘ಹೆರಿಗೆ ವಾರ್ಡ್ಗೆ ತೆರಳಿದ ನೀತು ಅಲ್ಲಿಂದ ಮಗುವನ್ನು ತನ್ನ ಕೋಣೆಗೆ ಕರೆದೊಯ್ದಿದ್ದಾಳೆ. ಇದಾದ ಬಳಿಕ ಮಗುವಿನೊಂದಿಗೆ ಸೆಲ್ಫಿ ತೆಗೆದುಕೊಂಡು ಅದನ್ನು ತನ್ನ ಪ್ರಿಯಕರನಿಗೆ ಕಳುಹಿಸಿದ್ದಳು. ಹೀಗೆ ಮಾಡುವ ಮೂಲಕ ತಾನು ಅವನ ಮಗುವಿನ ತಾಯಿಯಾಗಿದ್ದೇನೆ ಎಂದು ಹೇಳಲು ಬಯಸಿದ್ದಳು ಎಂದು ಪೊಲೀಸ್ ವರಿಷ್ಠಾಧಿಕಾರಿ ಶಿಲ್ಪಾ ದ್ಯಾವಯ್ಯ ಹೇಳಿದ್ದಾರೆ. ಈ ಪ್ರಕರಣದಲ್ಲಿ ಪ್ರಿಯಕರ ಇಬ್ರಾಹಿಂ ಬಾದುಷಾ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಾಸ್ತವವಾಗಿ ಬಾದುಷಾ ತನ್ನಿಂದ 30 ಲಕ್ಷಕ್ಕೂ ಹೆಚ್ಚು ಸಾಲ ಪಡೆದು ವಂಚಿಸಿದ್ದಾನೆ ಎಂದು ನೀತು ಆರೋಪಿಸಿದ್ದಾಳೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.