ನವದೆಹಲಿ: ತ್ರಿಪುರಾದಲ್ಲಿ ಆಘಾತಕಾರಿ ಘಟನೆಯೊಂದರಲ್ಲಿ ತನ್ನ ನೆರೆಯವನೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ ಕಾರಣಕ್ಕಾಗಿ 40 ವರ್ಷದ ಮಹಿಳೆಯನ್ನು ಮರಕ್ಕೆ ಕಟ್ಟಿ ಶೂವನ್ನು ನೇತಾಕಿ ಸಾರ್ವಜನಿಕವಾಗಿ ಥಳಿಸಿದ ಘಟನೆ ನಡೆದಿದೆ.
ಹಲ್ಲೆಗೊಳಗಾದ ಮಹಿಳೆಯು ಎರಡು ಮಕ್ಕಳ ತಾಯಿಯಾಗಿದ್ದಾಳೆ. ತನ್ನ ಮೇಲೆ ದಾಳಿ ನಡೆಸುವಲ್ಲಿ ಮೂವರು ಮಹಿಳೆಯರು ಪಾತ್ರವಹಿಸಿದ್ದಾರೆ ಎಂದು ಅವರು ಪೋಲಿಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈಗ ಈ ಮಹಿಳೆಯನ್ನು ಥಲಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಮಹಿಳೆಯ ಕುತ್ತಿಗೆಗೆ ಶೂ ಹಾರ ಹಾಕಿ ಮುಖಕ್ಕೆ ಮಸಿಯನ್ನು ಬಳಿದು ಸಾರ್ವಜನಿಕವಾಗಿ ಥಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆಯ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ಪೋಲಿಸ ಅಧಿಕಾರಿಯೊಬ್ಬರು" ದಾಳಿಗೊಳಗಾದ ಮಹಿಳೆಯು ಅನಕ್ಷರಸ್ಥಳಾಗಿರುವುದರಿಂದ ಬೇರೆಯವರಿಂದ ದೂರನ್ನು ದಾಖಲಿಸಿದ್ದಾಳೆ. "ನಾವು ಎಲ್ಲ ಆರೋಪಿಗಳನ್ನು ಗುರುತಿಸಿದ್ದೇವೆ. ಅವುಗಳಲ್ಲಿ ಒಬ್ಬರನ್ನು ಈಗಾಗಲೇ ಬಂಧಿಸಲಾಗಿದೆ. ಈ ಘಟನೆಯ ಕುರಿತಾಗಿ ತನಿಖೆ ಆರಂಭಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ದುಷ್ಕರ್ಮಿಗಳನ್ನು ಸಂಯಮ, ಮಹಿಳೆಯೊಬ್ಬಳ ನಮ್ರತೆ ಮತ್ತು ನಿಷೇಧ ಕಾಯ್ದೆ ಅಡಿಯಲ್ಲಿ ಮೂವರು ವ್ಯಕ್ತಿಗಳ ವಿರುದ್ಧ ಬಿರ್ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.